ಸಾರಾಂಶ
- ಸಿಡಿಲಿನ ಆರ್ಭಟ । ತುಂಬಿದ ಹರಿದ ಹರಿದ್ರಾವತಿ ಹಳ್ಳ । ಊರ ಮುಂದಿನ ಕೆರೆಗೆ ನೀರು
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಾದ್ಯಂತ ಬುಧವಾರ ಮಧ್ಯ ರಾತ್ರಿಯಿಂದ ಗುಡುಗು, ಸಿಡಿಲಿನಿಂದ ಕೂಡಿದ ಭಾರಿ ಮಳೆ ಸುರಿದಿದ ಪರಿಣಾಮ ಹಳ್ಳ-ಕೊಳ್ಳಗಳೆಲ್ಲ ತುಂಬಿ ಹರಿಯುತ್ತಿವೆ. ಮರಬನಹಳ್ಳಿಯಲ್ಲಿ 2 ಕಚ್ಚಾಮನೆಗಳು ಬಿದ್ದಿವೆ. ಮಳೆಯಿಂದ ಯಾವುದೇ ಜೀವಹಾನಿ ಉಂಟಾಗಿಲ್ಲ ಎಂದು ತಹಸೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದ್ದಾರೆ.ಬುಧವಾರ ರಾತ್ರಿ ಸುರಿದ ಮಳೆಯಿಂದ ಚನ್ನಗಿರಿ ಪಟ್ಟಣದ ಹರಿದ್ರಾವತಿ ಹಳ್ಳಿ ತುಂಬಿ ಹರಿಯುತ್ತಿದೆ. ಪಟ್ಟಣದ ಊರ ಮುಂದಿನ ಕೆರೆಗೆ ನೀರು ಹರಿದುಬರುತ್ತಿದೆ. ಕೆರೆಗೆ ಸರಾಗವಾಗಿ ನೀರು ಹರಿದು ಬರಲು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಅವರು ಕೋಡಿಯಲ್ಲಿ ಬೆಳೆದಿದ್ದ ಕಳೆ ಗಿಡಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿ, ಸ್ವಚ್ಚತಾ ಕ್ರಮ ಕೈಗೊಂಡಿದ್ದು, ಪಟ್ಟಣದ ಕೆರೆಗೆ ಸಾಕಷ್ಟು ನೀರು ಹರಿದುಬರುತ್ತಿದೆ.
ಮಳೆ ಪ್ರಮಾಣ ದಾಖಲು:ಚನ್ನಗಿರಿ ತಾಲೂಕಿನಲ್ಲಿ ಸ್ಥಾಪಿಸಿರುವ 9 ಮಳೆಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆಯ ಪ್ರಮಾಣ ಇಂತಿದೆ. ಚನ್ನಗಿರಿ ಪಟ್ಟಣದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ 43.4 ಮಿ.ಮೀ. ಮಳೆ ದಾಖಲಾಗಿದ್ದರೆ, ದೇವರಹಳ್ಳಿಯಲ್ಲಿ 28.4, ಕತ್ತಲಗೆರೆ 43.4, ತ್ಯಾವಣಿಗೆ 66.2, ಬಸವಾಪಟ್ಟಣ 33.0, ಜೋಳದಾಳ್ 15.0, ಸಂತೆಬೆನ್ನೂರು 48.0, ಉಬ್ರಾಣಿ 29.8, ಕೆರೆಬಿಳಚಿ ಕೇಂದ್ರದಲ್ಲಿ 14.2 ಮಿ.ಮೀ. ಮಳೆ ದಾಖಲಾಗಿದೆ. ಒಟ್ಟು 321.4 ಮಿ.ಮೀ. ಮಳೆ ಸುರಿದಿದ್ದು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆಯಿಂದ ಸ್ವಚ್ಚವಾದ ಮೋಡವಿದ್ದು, ಮಳೆ ಬರುವ ಯಾವುದೇ ಸೂಚನೆಗಳು ಕಂಡಿರಲಿಲ್ಲ. ಆದರೆ, ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಬೆಳಗಿನ ಜಾವ 3 ಗಂಟೆಯವರೆಗೂ ಧಾರಾಕಾರ ಮಳೆ ಸುರಿಯಿತು. ಈಗ ಸುರಿದ ಮಳೆಯಿಂದ ರಾಗಿ ಬೆಳೆಗೆ ಮತ್ತು ಕಾಳುಕಟ್ಟುವ ಹಂತದಲ್ಲಿರುವ ಮೆಕ್ಕೆಜೋಳದ ಬೆಳೆಗಳಿಗೆ ಉತ್ತಮವಾಗುತ್ತದೆ ಎಂದು ಕೃಷಿ ಅಧಿಕಾರಿಗಳಾದ ಕುಮಾರ್, ಮೇತಾಬ್ ಆಲಿ ತಿಳಿಸಿದ್ದಾರೆ.- - -
-9ಕೆಸಿಎನ್‌ಜಿ2: ಚನ್ನಗಿರಿ ತಾಲೂಕಿನ ಮರಬನಹಳ್ಳಿಯಲ್ಲಿ ಮಳೆಯಿಂದ ಮನೆ ಹಾನಿಗೀಡಾಯಿತು.-9ಕೆಸಿಎನ್‌ಜಿ3: ಬುಧವಾರ ರಾತ್ರಿ ಸುರಿದ ಮಳೆಯಿಂದ ಚನ್ನಗಿರಿ ಪಟ್ಟಣ ಹರಿದ್ರಾವತಿ ಹಳ್ಳಿ ತುಂಬಿ ಹರಿಯುತ್ತೀರುವುದು.
-9ಕೆಸಿಎನ್‌ಜಿ4: ಚನ್ನಗಿರಿಯ ಊರ ಮುಂದಿನ ಕೆರೆ ಕೋಡಿಯಲ್ಲಿ ಬೆಳೆದಿರುವ ಕಳೆ ಗಿಡಗಳನ್ನು ಪುರಸಭೆ ವತಿಯಿಂದ ತೆರವುಗೊಳಿಸಲಾಯಿತು.