ಚನ್ನಗಿರಿ ಬೇಟೆ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ

| Published : Feb 25 2024, 01:51 AM IST

ಸಾರಾಂಶ

ರಥೋತ್ಸವ ನಿಮಿತ್ತ ಕಳೆದ 3 ದಿನಗಳಿಂದ ವಿವಿಧ ಪ್ರಕಾರಗಳ ಪೂಜಾ ಕೈಂಕರ್ಯಗಳು ನಡೆದು ಶನಿವಾರ ಸಾವಿರಾರು ಭಕ್ತರ ಸಮೂಹದಲ್ಲಿ ರಥೋತ್ಸವ ನಡೆಯಿತು.ರಥೋತ್ಸವ ನಿಮಿತ್ತ ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ದೇವತಾ ಹೋಮ, ಪೂರ್ಣಾಹುತಿ, ರಥ ಸಂಪ್ರೋಕ್ಷಣೆ ಪ್ರಧಾನ ರಥಾರೋಹಣ ನಡೆಯಿತು.

ಚನ್ನಗಿರಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಬೇಟೆ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ನಿಮಿತ್ತ ಕಳೆದ 3 ದಿನಗಳಿಂದ ವಿವಿಧ ಪ್ರಕಾರಗಳ ಪೂಜಾ ಕೈಂಕರ್ಯಗಳು ನಡೆದು ಶನಿವಾರ ಸಾವಿರಾರು ಭಕ್ತರ ಸಮೂಹದಲ್ಲಿ ರಥೋತ್ಸವ ನಡೆಯಿತು.

ರಥೋತ್ಸವ ನಿಮಿತ್ತ ದೇವರಿಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ದೇವತಾ ಹೋಮ, ಪೂರ್ಣಾಹುತಿ, ರಥ ಸಂಪ್ರೋಕ್ಷಣೆ ಪ್ರಧಾನ ರಥಾರೋಹಣ ನಡೆಯಿತು. ದೇವಾಲಯದಿಂದ ಶ್ರೀ ಬೇಟೆ ರಂಗನಾಥ ಸ್ವಾಮಿ ಉತ್ಸವ ಮೂರ್ತಿ ಅಲಂಕೃತಗೊಂಡ ಹೂವಿನ ಪಲ್ಲಕ್ಕಿಯಲ್ಲಿ ಹೊತ್ತು ತಂದ ಭಕ್ತರು ಗೋವಿಂದನ ನಾಮಸ್ಮರಣೆಯೊಂದಿಗೆ ಮುದ್ರೆಹೊತ್ತ ದಾಸಪ್ಪಗಳು ಶಂಖ, ಜಾಗಟೆ, ಚಿನ್ನಗಾಳಿಯ ಸದ್ದಿನೊಂದಿಗೆ ದೇವರ ಪಲ್ಲಕ್ಕಿ ಹೊತ್ತ ಭಕ್ತರು ರಥ ಪ್ರದಕ್ಷಿಣೆ ಹಾಕಿ ರಥದಲ್ಲಿ ದೇವರ ಕುಳ್ಳಿರಿಸುತ್ತಿದ್ದಂತೆ ಭಕ್ತರು ರಥ ಎಳೆದು ತಮ್ಮ ಭಕ್ತಿ ಸಮರ್ಪಿಸಿದರು. ರಥೋತ್ಸವಕ್ಕೆ ಪಟ್ಟಣದ ಭಕ್ತರು ಸೇರಿ ಸುತ್ತಮುತ್ತಲ ಗ್ರಾಮಗಳ ಭಕ್ತರು ದೇವರ ದರ್ಶನ ಪಡೆದರು.