ಚನ್ನಗಿರಿ ಕ್ಷೇತ್ರದಲ್ಲಿ ಡಾ.ಪ್ರಭಾ ಮತಯಾಚನೆ

| Published : Apr 25 2024, 01:08 AM IST

ಸಾರಾಂಶ

ಜಿಲ್ಲೆಯಲ್ಲಿ ಅತಿ ಹೆಚ್ಚು ಅಡಕೆ ಬೆಳೆ ಪ್ರದೇಶ ಚನ್ನಗಿರಿ ತಾಲೂಕು ಅಡಕೆ ನಾಡು ಎಂದು ಪ್ರಸಿದ್ದಿ ಆಗಿದೆ. ಇಂತಹ ಪ್ರದೇಶಕ್ಕೆ ಕಳಂಕ ಬರುವಂತೆ ಕೇಂದ್ರ ಸರ್ಕಾರ ಮತ್ತು ಈ ಜಿಲ್ಲೆಯ ಲೋಕಸಭಾ ಪ್ರತಿನಿಧಿ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.

ದಾವಣಗೆರೆ: ಜಿಲ್ಲೆಯಲ್ಲಿ ಅತಿ ಹೆಚ್ಚು ಅಡಕೆ ಬೆಳೆ ಪ್ರದೇಶ ಚನ್ನಗಿರಿ ತಾಲೂಕು ಅಡಕೆ ನಾಡು ಎಂದು ಪ್ರಸಿದ್ದಿ ಆಗಿದೆ. ಇಂತಹ ಪ್ರದೇಶಕ್ಕೆ ಕಳಂಕ ಬರುವಂತೆ ಕೇಂದ್ರ ಸರ್ಕಾರ ಮತ್ತು ಈ ಜಿಲ್ಲೆಯ ಲೋಕಸಭಾ ಪ್ರತಿನಿಧಿ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದರು.

ಬುಧವಾರ ಚನ್ನಗಿರಿ ತಾಲೂಕಿನ ಕೆಂಪನಹಳ್ಳಿ ಗ್ರಾಮದಿಂದ ಬುಧವಾರ ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಕೊಗಲೂರು, ದೊಡ್ಡ ಮಲ್ಲಾಪುರ, ಕರೇಕಟ್ಟೆ, ಸೋಮಲಾಪುರ, ಕಾಕನೂರು, ನುಗ್ಗಿಹಳ್ಳಿ, ಚಿಕ್ಕಗಂಗೂರು, ಕೊರಟಿಕೆರೆ, ಹೆಬ್ಬಳಗೆರೆ, ಹೊದಿಗೆರೆ, ಗರಗ, ದೇವರಹಳ್ಳಿ, ಕಗತೂರು, ಬುಳಸಾಗರ, ಇಟ್ಟಿಗೆ, ಲಿಂಗದಹಳ್ಳಿ, ನಲ್ಲೂರು ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಅಡಕೆಯನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿತು. ಇದಕ್ಕೆ ಸಂಸದರು ಕನಿಷ್ಠ ಪಕ್ಷ ವಿರೋಧಿಸಲಿಲ್ಲ. ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದ್ದು, ಅಡಕೆಗೆ ಸ್ಥಿರ ಬೆಲೆ, ಅಡಕೆ ಸಂಸ್ಕರಣಾ ಘಟಕ ಆರಂಭ ಸೇರಿದಂತೆ ಅಡಕೆ ಬೆಳೆ-ವ್ಯವಹಾರಕ್ಕೆ ಪೂರಕ ವಾತಾವರಣ ನಿರ್ಮಿಸುತ್ತೇವೆ ಎಂದರು.

ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಶಾಸಕ ಶಿವಗಂಗಾ ಬಸವರಾಜ್, ಬ್ಲಾಕ್ ಅಧ್ಯಕ್ಷರಾದ ಜಬಿವುಲ್ಲಾ, ಶ್ರೀನಿವಾಸ್, ಮುಖಂಡರಾದ ಹೊದಿಗೆರೆ ರಮೇಶ್, ವೀರೇಶ್ ನಾಯ್ಕ, ವಡ್ನಾಳ್ ಜಗದೀಶ್, ಶಿವಗಂಗಾ ಶ್ರೀನಿವಾಸ್, ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

- - - -24ಕೆಡಿವಿಜಿ47, 48ಃ:

ಚನ್ನಗಿರಿ ತಾಲೂಕು ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ ಮಾಡಿದರು.