ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಚನ್ನಮ್ಮನ ಶೌರ್ಯ, ಸಾಹಸ, ದೇಶಪ್ರೇಮನ್ನು ಎಲ್ಲರೂ ಮೈಗೂಡಿಸಿಕೊಂಡು ರಾಷ್ಟ್ರಪ್ರೇಮ ಇಮ್ಮಡಿಗೊಳಿಸಬೇಕು. ಚನ್ನಮ್ಮನ ಐಕ್ಯ ಜ್ಯೋತಿ ಯಾತ್ರೆಯಲ್ಲಿ ಜಾತ್ಯತೀತ, ರಾಜಕೀಯ ರಹಿತವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.ವೀರರಾಣಿ ಕಿತ್ತೂರು ಚನ್ನಮ್ಮನ 196ನೇ ಪುಣ್ಯಸ್ಮರಣೆ ನಿಮಿತ್ತ ವೀರರಾಣಿ ಕಿತ್ತೂರು ಚನ್ನಮ್ಮನ ದೇಶಭಕ್ತಿಯ ಐಕ್ಯ ಜ್ಯೋತಿ ಯಾತ್ರೆಗೆ ಕಾಕತಿಯಲ್ಲಿ ಚಾಲನೆ ನೀಡಿದ ಮಾತನಾಡಿದರು.
ಭಾನುವಾರ ಬೈಲಹೊಂಗಲಕ್ಕೆ ಆಗಮಿಸಿದ ಜ್ಯೋತಿಯಾತ್ರೆಯನ್ನು ಸ್ವಾಗತಿಸಲಾಯಿತು. ವಾದ್ಯಮೇಳಗಳಗೊಂದಿಗೆ ಮೆರವಣಿಗೆ ಮೂಲಕ ಐಕ್ಯ ಸ್ಥಳಕ್ಕೆ ತಂದು ಭಾನುವಾರ ಅರ್ಪಿಸಲಾಯಿತು.ಚನ್ನಮ್ಮನ ವೃತ್ತದಲ್ಲಿ ಮಾಜಿ ಸಂಸದೆ ಮಂಗಲಾ ಅಂಗಡಿ ಚನ್ನಮ್ಮನ ಪುತ್ಥಳಿಗೆ ಹೂವು ಮಾಲೆ ಅರ್ಪಿಸಿದರು. ಚನ್ನಮ್ಮನ ಸ್ಮರಣೋತ್ಸವ ಸಮಿತಿ ಅಧ್ಯಕ್ಷ ಮುರುಗೇಶ ಗುಂಡ್ಲೂರ, ಪಂಚಮಸಾಲಿ ಸಮಾಜದ ತಾಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ರಾಯಣ್ಣ ಸಮಿತಿ ಅಧ್ಯಕ್ಷ ರಾಜು ಸೊಗಲ, ಎಫ್.ಎಸ್ .ಸಿದ್ಧನಗೌಡರ, ಡಾ.ಅರ್ಮಿತಾ ಪಾಟೀಲ, ಅನ್ವಿತಾ ಪಾಟೀಲ, ಮಹೇಶ ಹರಕುಣಿ, ಶಿವಾನಂದ ತಂಬಾಕಿ, ಗುಂಡು ಪಾಟೀಲ, ವಿರೇಶ ಹಲಕಿ, ರಿತೇಶ ಪಾಟೀಲ, ಶಿವಾನಂದ ಬೆಳಗಾವಿ, ಮಹಾಂತೇಶ ಹೊಸಮನಿ, ಸುಭಾಸ ತುರಮರಿ, ರವಿ ಹುಲಕುಂದ, ಬಸವರಾಜ ದೊಡಮನಿ ನೇತೃತ್ವದಲ್ಲಿ ಜ್ಯೋತಿಯಾತ್ರೆಗೆ ಪೂಜೆ ಸಲ್ಲಿಸಲಾಯಿತು.
ಅದ್ಧೂರಿ ಸ್ವಾಗತ: ಕಾಕತಿಯಿಂದ ಆರಂಭವಾದ ಜ್ಯೋತಿ ಯಾತ್ರೆ ಬೆಳಗಾವಿ ಚನ್ನಮ್ಮನ ವೃತ್ತಕ್ಕೆ ತೆರಳಿ ಚನ್ನಮ್ಮನ ಪುತ್ಥಳಿಗೆ ಹೂವು ಮಾಲೆ ಅರ್ಪಿಸಿ ಗೌರವ ಸಲ್ಲಿಸಲಾಯಿತು. ಬೆಳಗಾವಿ, ಕಿತ್ತೂರ, ಸಂಗೊಳ್ಳಿ ಮಾರ್ಗವಾಗಿ ಬೈಲಹೊಂಗಲ ಪಟ್ಟಣ ಪ್ರವೇಶಿಸುತ್ತಿದ್ದಂತೆ ಪೂಜ್ಯರು, ಗಣ್ಯರು ಜ್ಯೋತಿಗೆ ಅದ್ಧೂರಿ ಸ್ವಾಗತ ನೀಡಿದರು.ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಪ್ರಭಾ ಅಕ್ಕನವರು, ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ, ಅಮಿತ ವಿಶ್ವನಾಥ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಉದ್ಯಮಿ ವಿಜಯ ಮೆಟಗುಡ್ಡ, ಕಾಶೀನಾಥ ಬಿರಾದಾರ, ಸಿ.ಕೆ.ಮೆಕ್ಕೇದ, ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಹಿರೇಮಠ, ಕಂದಾಯ ನಿರೀಕ್ಷಕ ಬಸವರಾಜ ಬೋರಗಲ್, ಗ್ರಾಮ ಲೆಕ್ಕಾಧಿಕಾರಿ ಪರಮಾನಂದ ಕಮ್ಮಾರ ಪಿಎಸ್‌ಐ ಗುರುರಾಜ ಕಲಬುರ್ಗಿ, ಪುರಸಭೆ ಸದಸ್ಯೆ ವಾಣಿ ಪತ್ತಾರ, ಮಲ್ಲಪ್ಪ ಮುರಗೋಡ, ಬಿ.ಬಿ. ಗಣಾಚಾರಿ, ಶಂಕರ ಮಾಡಲಗಿ, ಮಡಿವಾಳಪ್ಪ ಹೋಟಿ, ಮಹಾಬಳೇಶ್ವರ ಬೋಳಣ್ಣವರ, ಎನ್.ಆರ್. ಠಕ್ಕಾಯಿ, ಅನಿತಾ ಹೋಟಿ, ಮೀನಾಕ್ಷಿ ಕುಡಸೋಮಣ್ಣವರ, ಸು?್ಮಾ ಗುಂಡ್ಲೂರ, ಶಾಂತಾ ಮಡ್ಡಿಕಾರ, ರಾಜು ನರಸಣ್ಣವರ, ನಾಗಪ್ಪಾ ಗುಂಡ್ಲೂರ, ಪುರಸಭೆ ಸದಸ್ಯರು, ಮಾಜಿ ಸೈನಿಕರ ಸಂಘದ ಸದಸ್ಯರು, ಮಹಿಳೆಯರು ಇದ್ದರು.