ಸಾರಾಂಶ
1824ರಲ್ಲಿ ಆಂಗ್ಲರ ವಿರುದ್ಧ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಚನ್ನಮ್ಮ ಸಾಹಸ, ಶೌರ್ಯ ಹಾಗೂ ರಾಷ್ಟ್ರಾಭಿಮಾನ ಎಂದೆಂದಿಗೂ ಆದರ್ಶವಾಗಿದೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತ ಸ್ವಾತಂತ್ರ್ಯಕ್ಕಾಗಿ ಬ್ರೀಟಿಷರ್ ವಿರುದ್ಧ ಹೋರಾಡಿದ ಕರ್ನಾಟಕ ಕಿತ್ತೂರ ರಾಣಿ ಚನ್ನಮ್ಮಳು ಸ್ವಾತಂತ್ರ್ಯ ಸಂಗ್ರಾಮದ ಕಹಳೆ ಮೊಳಗಿಸಿದ ಪ್ರಥಮ ವೀರಮಹಿಳೆಯಾಗಿದ್ದಾಳೆ ಎಂದು ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹೇಳಿದರು.ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ ಕಾರ್ಯಕ್ರಮದಲ್ಲಿ ಚೆನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾತನಾಡಿ, ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕೀರ್ತಿ ಕಿತ್ತೂರು ಸಂಸ್ಥಾನಕ್ಕೆ ಸಲ್ಲುತ್ತದೆ. 1824ರಲ್ಲಿ ಆಂಗ್ಲರ ವಿರುದ್ಧ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರಾಣಿ ಚನ್ನಮ್ಮ ಸಾಹಸ, ಶೌರ್ಯ ಹಾಗೂ ರಾಷ್ಟ್ರಾಭಿಮಾನ ಎಂದೆಂದಿಗೂ ಆದರ್ಶವಾಗಿದೆ. ಇಂತಹ ಸ್ವಾತಂತ್ರ್ಯ ಹೋರಾಟಗಾರ್ತಿ ಬದುಕು ಇಂದಿನ ಯುವಜನತೆಗೆ ಪ್ರೇರಣೆಯಾಗಿದೆ ಎಂದರು.ಭಾರತೀಯ ಮಹಿಳೆಯರು ಸ್ವಾಭಿಮಾನದ ಸಂಕೇತವಾಗಿದ್ದು, ರಾಣಿ ಚನ್ನಮ್ಮಳ ಪರಾಕ್ರಮಗಳನ್ನು ನಮ್ಮ ಜನಪದರು ಲಾವಣಿ ಪದಗಳಲ್ಲಿ ಹಾಡಿ ಹೊಗಳಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ್ತಿ ವೀರರಾಣಿ ಚನ್ನಮ್ಮಳ ದೇಶಪ್ರೇಮವನ್ನು ನಾವೆಲ್ಲರೂ ಬೆಳಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅದ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.