ಗೌಡಳ್ಳಿ ಗ್ರಾಪಂ ವ್ಯಾಪ್ತಿಯ ಚನ್ನಾಪುರ ಗ್ರಾಮದ ಗ್ರಾಮ ದೇವತೆ ಪೂಜೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಗೌಡಳ್ಳಿ ಗ್ರಾಪಂ ವ್ಯಾಪ್ತಿಯ ಚನ್ನಾಪುರ ಗ್ರಾಮದ ಗ್ರಾಮ ದೇವತೆ ಪೂಜೆ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.ಗ್ರಾಮಸ್ಥರು ದೇವರ ಬನದಲ್ಲಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಸಮೃದ್ಧಿ ಹಾಗೂ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚನ್ನಾಪುರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಸಿ.ಎನ್. ಅಶೋಕ ಮಾತನಾಡಿ, ಗ್ರಾಮ ದೇವತೆ ಗ್ರಾಮದ ನಿವಾಸಿಗಳನ್ನು ರಕ್ಷಿಸುತ್ತಿದ್ದಾರೆ. ಕಾಲ ಕಾಲಕ್ಕೆ ಮಳೆ ಬೆಳೆಗೆ ಗ್ರಾಮ ದೇವತೆ ಆಶೀರ್ವಾದವೇ ಕಾರಣ ಎಂಬ ನಂಬಿಕೆಗೆ ಗ್ರಾಮದ ಜನರಲ್ಲಿದೆ. ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ ನಂತರವೇ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುತ್ತವೆ. ತಲೆ ತಲೆಮಾರುಗಳಿಂದ ಈ ಪದ್ಧತಿ ಗ್ರಾಮದಲ್ಲಿದೆ ಎಂದು ಹೇಳಿದರು.

ಮಂಡಳಿ ಕಾರ್ಯದರ್ಶಿ ಸಿ.ಎಸ್. ಉಮೇಶ್ ಮತ್ತು ಚನ್ನಾಪುರ ಗ್ರಾಮಸ್ಥರು ಇದ್ದರು.