ಆತ್ಮ, ಮನ ಶುದ್ಧಿ‌ಗಾಗಿ ಮಂತ್ರ ಜಪಿಸಿ

| Published : Feb 28 2025, 12:50 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಭಾರತೀಯ ಭವ್ಯ ಪರಂಪರೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ‌ವಿಶೇಷ ಮಹತ್ವವಿದೆ. ಆತ್ಮಶುದ್ಧಿ‌ ಮತ್ತು ಮನಶುದ್ದಿಗಾಗಿ ಮಂತ್ರ ಜಪಿಸಬೇಕು ಎಂದು ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಚಡಚಣ

ಭಾರತೀಯ ಭವ್ಯ ಪರಂಪರೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ‌ವಿಶೇಷ ಮಹತ್ವವಿದೆ. ಆತ್ಮಶುದ್ಧಿ‌ ಮತ್ತು ಮನಶುದ್ದಿಗಾಗಿ ಮಂತ್ರ ಜಪಿಸಬೇಕು ಎಂದು ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಸಮೀಪದ ಹೊರ್ತಿ ಗ್ರಾಮದ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ನಡೆದ ಮಹಾಶಿವರಾತ್ರಿ ಉತ್ಸವ ನಿಮಿತ್ತ ಕೋಟಿ ಜಪಯಜ್ಞ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಕಡೆ ಶಿವನಾಮಸ್ಮರಣೆ ಹಾಗೂ ಶಿವಜಪ‌‌ ಮತ್ತು ಶಿವಪೂಜೆ ಮುಖಾಂತರ ಅಖಂಡ ಶಿವರಾತ್ರಿ ಜಾಗರಣೆಯನ್ನು ಕಳೆಯುವ ಪುಣ್ಯ ಸಮಯ. ಅದರಂತೆ ಪುಣ್ಯಕ್ಷೇತ್ರವಾದ ರೇವಣಸಿದ್ಧೇಶ್ವರ ತಪೋಭೂಮಿಯ ಪುಣ್ಯಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಸಾಮೂಹಿಕ ಇಷ್ಟಲಿಂಗ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮುಖಾಂತರ ಮತ್ತು ಸಾಮೂಹಿಕ ಕೋಟಿ ಜಪಯಜ್ಞ ಮಾಡುವುದರೊಂದಿಗೆ ಆಧ್ಯಾತ್ಮಿಕ ಸಾಧನೆ ‌ಮಾಡುವ ಶ್ರೇಷ್ಠ ವಿಧಾನವಾಗಿದೆ. ಸಪ್ತ ಕೋಟಿ ಮಂತ್ರಗಳಲ್ಲಿ ಶಿವಪಂಚಾಕ್ಷರಿ ಮಂತ್ರ ಶ್ರೇಷ್ಠವಾಗಿದೆ. ಸಾರ್ವಜನಿಕವಾಗಿ ಸಾವಿರಾರು ಜನ ಏಕಕಾಲದಲ್ಲಿ ‌ಶಿವಪಂಚಾಕ್ಷರಿ ಮಂತ್ರಜಪದ ಮೂಲಕ ಶಿವಸಾನ್ನಿಧ್ಯ ಪ್ರಾಪ್ತಿಯಾಗುತ್ತದೆ. ಮತ್ತು ಆಧ್ಯಾತ್ಮಿಕ ಸಾಧಕರಿಗೆ ಮಂತ್ರ ಜಪದ ಮೂಲಕ ಮೋಕ್ಷ ಪಡೆದುಕೊಳ್ಳಬಹುದು ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ, ಮಂಗಳ ರಾತ್ರಿ ಇದ್ದಂತೆ. ಈ ದಿನವು ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರರಾಗುವ ಶುಭ ದಿನ. ಈ ದಿನದಂದು ಶಿವನನ್ನು ಭಕ್ತಿ ಪೂರ್ವಕವಾಗಿ ಪೂಜಿಸಿದರೆ ಪಾಪಗಳೆಲ್ಲವೂ ಪರಿಹಾರವಾಗಿ ಮೋಕ್ಷ ಪ್ರಾಪ್ತವಾಗಲಿದೆ. ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿ ತಪೋಗೈದು ಈ ಕ್ಷೇತ್ರವನ್ನು ಪುಣ್ಯ ಕ್ಷೇತ್ರವನ್ನಾಗಿ ಭಕ್ತರು ಭಕ್ತಿ ಮಾರ್ಗದಿಂದ ಸರ್ವ ಸಂಕಷ್ಟವನ್ನು ಕಳೆದುಕೊಳ್ಳಬಹುದು. ನಿತ್ಯ ಪೂಜೆ, ಜಪ, ಧ್ಯಾನದ ಮುಖಾಂತರ ಶಿವನವೊಲುಮೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದ ಹಾವಿನಾಳ ಹತ್ತಳ್ಳಿಯ ಗುರುಪಾದ ಶಿವಾಚಾರ್ಯ, ಆಲಮೇಲದ ಚಂದ್ರಶೇಖರ ಶಿವಾಚಾರ್ಯರ, ಹಾವಿನಾಳದ ವಿಜಯಮಹಾಂತ ಶಿವಾಚಾರ್ಯರು, ಅಥರ್ಗಾದ ಮುರುಘೇಂದ್ರ ಮಹಾಸ್ವಾಮಿಜಿ, ಕಮಿಟಿ ಅಧ್ಯಕ್ಷ ಅಣ್ಣಪ್ಪ ಸಾಹುಕಾರ ಖೈನೂರ, ಬಿ.ಡಿ.ಪಾಟೀಲ, ಗುರುನಗೌಡ ಪಾಟೀಲ, ಅರವಿಂದ ಪೂಜಾರಿ, ಶ್ರೀಮಂತ ಇಂಡಿ, ಗೋಪಾಲ ದೇಶಪಾಂಡೆ, ನಾಗುಗೌಡ ಪಾಟೀಲ, ರಮೇಗೌಡ ಬಿರಾದಾರ, ಮಲ್ಲಣ ಸಕ್ರಿ, ರೇವಣಸಿದ್ದ ಮಖಣಾಪೂರ, ಸಿದರಾಯ ಕುಂಬಾರ, ರಾಜು ರಾಠೋಡ, ಎಸ್.ಆರ್‌.ರುದ್ರುವಾಡಿ, ಅಶೋಕ ತಳಕೇರಿ, ಲಚ್ಚಪ್ಪ ತಸಳಿಕೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಕೋಟಿ ಜಪಜಯ್ಞದಲ್ಲಿ ಭಾವಗಹಿಸಿದ್ದರು.

ಭಾರತೀಯ ಭವ್ಯ ಪರಂಪರೆಯಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ‌ವಿಶೇಷ ಮಹತ್ವವಿದೆ. ಆತ್ಮಶುದ್ಧಿ‌ ಮತ್ತು ಮನಶುದ್ದಿಗಾಗಿ ಮಂತ್ರ ಜಪಿಸಬೇಕು ಎಂದು ಕನ್ನೂರು ಗುರುಮಠದ ಸೋಮನಾಥ ಶಿವಾಚಾರ್ಯರು ಆಶೀರ್ವಚನ ನೀಡಿದರು.