ಅಂಗಮಯ ಶರೀರ ಲಿಂಗಮಯವಾಗಲು ಶಿವನ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು. ನಿರ್ಭಯ ನಿರಾಕಾರಿ ಶಿವನು ಸರ್ವರ ಹೃದಯ ಮಂದಿರದಲ್ಲಿದ್ದಾನೆ. ಪಾರ್ವತಿ ಪರಮೇಶ್ವರ ಅವತಾರದಲ್ಲಿ ಸರಳ ಸಂಸಾರಿಕ ಬದುಕನ್ನು ನಡೆಸುವುದರೊಂದಿಗೆ ಉತ್ತಮ ಸಂಸಾರಿಕ ಜೀವನ ನಡೆಸುವದಾರಿ ತೋರಿಸಿದ್ದಾನೆ. ಆ ಭಗವಂತ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕುಮಾರಪಟ್ಟಣ: ಅಂಗಮಯ ಶರೀರ ಲಿಂಗಮಯವಾಗಲು ಶಿವನ ಸಾಕ್ಷಾತ್ಕಾರ ಪಡೆದುಕೊಳ್ಳಬೇಕು. ನಿರ್ಭಯ ನಿರಾಕಾರಿ ಶಿವನು ಸರ್ವರ ಹೃದಯ ಮಂದಿರದಲ್ಲಿದ್ದಾನೆ. ಪಾರ್ವತಿ ಪರಮೇಶ್ವರ ಅವತಾರದಲ್ಲಿ ಸರಳ ಸಂಸಾರಿಕ ಬದುಕನ್ನು ನಡೆಸುವುದರೊಂದಿಗೆ ಉತ್ತಮ ಸಂಸಾರಿಕ ಜೀವನ ನಡೆಸುವದಾರಿ ತೋರಿಸಿದ್ದಾನೆ. ಆ ಭಗವಂತ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ರಾಣಿಬೆನ್ನೂರು ತಾಲೂಕು ಚಳಗೇರಿ ಗ್ರಾಮದ ಗುರು ಡಾ. ಮಹಾಂತೇಶ್ವರ ಸ್ವಾಮಿಗಳ ಮೂರನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಅವರು ಆರ್ಶಿವಚನ ನೀಡಿದರು. ಶರಣರು, ಸಂತರು, ಸಿದ್ದರು, ಸತ್ಪುರುಷರು, ಆಧ್ಯಾತ್ಮ ಯೋಗಿಗಳು ಆತ್ಮಸಾಕ್ಷಾತ್ಕಾರಕ್ಕಾಗಿಯೇ ನಿರಂತರವಾಗಿ ಧ್ಯಾನಿಸುತ್ತಾ ಜೀವನ ಸಾಗಿಸುತ್ತಾರೆ. ನಿರಂತರಧ್ಯಾನ. ಪ್ರಾರ್ಥನೆ ಒಂದೆಡೆಯಾದರೆ. ಪರಮಪೂಜ್ಯ ವಸ್ತುವಿನ ಸಾಕ್ಷಾತ್ಕಾರ ಮಾಡಿಕೊಂಡವರಲ್ಲಿ ಡಾ. ಮಹಾಂತೇಶ್ವರ ಸ್ವಾಮಿಗಳು ಒಬ್ಬರಾಗಿದ್ದಾರೆ. ಸ್ವಾಮಿಗಳು ನಮ್ಮೆದುರಿಗೆ ಇಲ್ಲದಿದ್ದರೂ ಸಂಸ್ಕಾರ, ವಿಚಾರ, ಆಚಾರ ಆದರ್ಶಗಳನ್ನು ಪಾಲಿಸುವತ್ತ ಅವರು ನೀಡಿದ್ದ ದಾರಿ ಇಂದಿಗೂ ನಮ್ಮೆದುರು ಕಾಣುತ್ತಿದೆ ಎಂದು ಡಾ. ಶ್ರೀಗಳ ಗುಣಗಾನ ಮಾಡಿದರು.ನಿಮ್ಮಗುರಿ ಎತ್ತ ಕಡೆ ಇದ್ದರು ಆಧ್ಯಾತ್ಮಿಕ ಆಲೋಚನೆಗಳತ್ತ ಚಿಂತಿಸಬೇಕು. ಹಣ ಸಂಪಾದನೆ ಸರ್ವಸ್ವಅಲ್ಲ. ವಿದ್ಯೆ ಎಂದರೆ ಆಧ್ಯಾತ್ಮಿಕ ವಿದ್ಯೆ. ಆ ಪರಬ್ರಹ್ಮ ವಸ್ತು ನನ್ನ ಒಳಗಿದೆ ಎಂದರೆ, ಭಗವಂತನ ಸಾಕ್ಷಾತ್ಕಾರ ಇರುತ್ತದೆ. ಏಳು ಕೋಟಿ ಮಂತ್ರ ಇರುವ ಧರ್ಮಶಾಸ್ತ್ರದಲ್ಲಿ ನಿತ್ಯ ಸಪ್ತಕೋಟಿ ಮಂತ್ರ ಜಪಿಸಿ ಪುನೀತರಾಗಿರಿ ಎಂದು ಶ್ರೀಗಳು ಹೇಳಿದರು.ಶನಿವಾರ ಪ್ರತಿಪದ ಉತ್ತರ ನಕ್ಷತ್ರದ ಬ್ರಾಹ್ಮಿ ಮುಹೂರ್ತದಲ್ಲಿ ಗುರುತಿಪ್ಪೇರುದ್ರ ಸ್ವಾಮಿಗಳ ಮೂರ್ತಿಗೆ ಹಾಗೂ ಡಾ. ಮಹಾಂತೇಶ್ವರ ಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಫಲಪುಷ್ಪಾರ್ಚನೆ, ಶಿವ ಪಂಚಾಕ್ಷರಿ ನಾಮ ಜಪ ಕಾರ್ಯಕ್ರಮ ಮತ್ತು ಮಹಾ ಮಂಗಳಾರತಿ ಪೂಜಾ ಕಾರ್ಯಕ್ರಮಗಳು ಜರುಗಿದವು.ಶಿಕಾರಿಪುರ ತಾಲೂಕು ದಿಂಡದಳ್ಳಿಯ ಹಿರೇಮಠ ಧರ್ಮ ಕ್ಷೇತ್ರದ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹೂವಿನಹಡಗಲಿ ತಾಲೂಕು ಹಿರೇಕುರುವತ್ತಿ ಹಿರೇಮಠದ ಗುರು ಸಿದ್ಧನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶಿವಚನ ನೀಡಿದರು. ಉದಯೋನ್ಮುಖ ಹಿಂದುಸ್ತಾನಿ ಗಾಯಕಿ ಕುಮಾರಿ ಗಾಯತ್ರಿ ಬಸವರಾಜ್ ಪತ್ತಾರ ಸಂಗೀತ ಕಾರ್ಯಕ್ರಮ ನೆಡೆಯಿತು. ನಿವೃತ್ತ ಶಿಕ್ಷಕರಾದ ಪ್ರಕಾಶ್ ಸೋಮನಗೌಡರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಚಳಗೇರಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಆಗಮಿಸಿದ್ದರು.