ದೇವರ ನಾಮಸ್ಮರಣೆ ಯಜ್ಞಕ್ಕೆ ಸಮ: ಶ್ರೀ ಕೈವಲ್ಯ ಶ್ರೀಗಳು

| Published : Apr 10 2025, 01:15 AM IST

ದೇವರ ನಾಮಸ್ಮರಣೆ ಯಜ್ಞಕ್ಕೆ ಸಮ: ಶ್ರೀ ಕೈವಲ್ಯ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶತಮಾನೋತ್ತರ ಆಚರಣೆ ಪ್ರಯುಕ್ತ 125 ದಿನಗಳ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಅಂಗವಾಗಿ, ದೇವಳಕ್ಕೆ ಸೋಮವಾರ ಗೋವಾದ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶತಮಾನೋತ್ತರ ಆಚರಣೆ ಪ್ರಯುಕ್ತ 125 ದಿನಗಳ ಅಹೋರಾತ್ರಿ ನಿರಂತರ ಭಜನಾ ಮಹೋತ್ಸವ ಅಂಗವಾಗಿ, ದೇವಳಕ್ಕೆ ಸೋಮವಾರ ಗೋವಾದ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ಭೇಟಿ ನೀಡಿದರು.

ದೇವಳದ ವತಿಯಿಂದ ಶ್ರೀಗಳನ್ನು ಮಂಗಳವಾದ್ಯ, ವೇದಘೋಷ, ಪೂರ್ಣಕುಂಭದೊಂದಿಗೆ ಬರಮಾಡಿಕೊಂಡು ಪಾದಪೂಜೆ, ಫಲಪುಷ್ಪಕಾಣಿಕೆ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಶ್ರೀಗಳು ದೇವಳದ ಶ್ರೀ ರಾಮನಾಮ ಜಪ ಕೇಂದ್ರಕ್ಕೆ ಭೇಟಿ ನೀಡಿ ಜಪ ಅಭಿಯಾನದ ಪಧಾಧಿಕಾರಿಗಳಿಗೆ ಶುಭ ಹಾರೈಸಿದರು

ನಂತರ ತಮ್ಮಅನುಗ್ರಹ ಸಂದೇಶದಲ್ಲಿ, ನಮ್ಮ ಹಿರಿಯರ, ಪೂರ್ವಜನ್ಮದ ಫಲದಿಂದಾಗಿ ಈ ದೇವಾಲಯ ನಿರ್ಮಾಣಗೊಂಡಿದೆ, ದೇವಾಲಯದಲ್ಲಿ ನಮ್ಮ ಹಿರಿಯರು ಆರಂಭಿಸಿದ ಹರಿನಾಮ ಸಂಕೀರ್ತನೆಯನ್ನು 125 ವರ್ಷಗಳಿಂದ ನಡೆಸುತ್ತಿರುವುದು ಸಂತಸವಾಗಿದೆ. ನಾಮ ಸ್ಮರಣೆ ಎಂಬುದು ಯಜ್ಞ ಕಾರ್ಯಕ್ಕೆ ಸಮನಾಗಿದೆ. ಗುರುವಿನ ಹಾಗೂ ಶ್ರೀ ದೇವರ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಸದಾ ಇರಲಿ ಎಂದು ಅನುಗ್ರಹಿಸಿದರು

ದೇವಳದ ಪ್ರಧಾನ ಅರ್ಚಕರಾದ ವಿನಾಯಕ ಭಟ್, ವೇದಮೂರ್ತಿ ಚೇ೦ಪಿ ರಾಮಚಂದ್ರ ಭಟ್, ದೇವಳದ ಮೋಕ್ತೇಸರ ಪಿ.ವಿ.ಶೆಣೈ, ಭಜನಾ ಮಂಡಳಿ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ, ಆಡಳಿತ ಮಂಡಳಿ ಸದಸ್ಯರಾದ ವಸಂತ್ ಕಿಣೆ, ಪುಂಡಲೀಕ್ ಕಾಮತ್, ಶಾಂತಾರಾಮ್ ಪೈ, ಗಣೇಶ್ ಕಿಣಿ, ಉಮೇಶ್ ಪೈ, ಕೈಲಾಸನಾಥ ಶೆಣೈ, ನಾರಾಯಣ ಪ್ರಭು, ಅಶೋಕ ಬಾಳಿಗ, ರೋಹಿತಾಕ್ಷ ಪಡಿಯಾರ್, ಶ್ರೀಗಳ ಆಪ್ತರಾದ ಸಂತೋಷ್ ವಾಗ್ಲೆ ಹಾಗೂ ಸಾವಿರಾರು ಸಮಾಜ ಭಾಂದವರು ಇದ್ದರು.