ಸಾರಾಂಶ
ಗಂಗಾವತಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಪ್ರಸಿದ್ಧ ಪಂಪಾ ಸರೋವರದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಒಂದು ಸಾವಿರಕ್ಕೂ ಹೆಚ್ಚು ಭಕ್ತರು ಹನುಮಾನ್ ತಾಂಡವ ಮತ್ತು ರಾಮ ತಾಂಡವ ಸ್ತೋತ್ರ ಪಠಿಸಿದರು.ಫೌಂಡೇಶನ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್, ಮಾತೃಶಕ್ತಿ ಕಾ ತಾಂಡವ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜ.22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಿಮಿತ್ತ ಹಾಗೂ ಲೋಕ ಕಲ್ಯಾಣಾರ್ಥವಾಗಿ ಏಕಕಾಲಕ್ಕೆ ಹನುಮಾನ್, ರಾಮ ತಾಂಡವ್ ಪಠಣ ಸ್ತೋತ್ರ ಪಠಿಸಲಾಯಿತು. ಇದಕ್ಕಿಂತ ಪೂರ್ವದಲ್ಲಿ ಸರೋವರದ ವಿಜಯಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಜರುಗಿತು.
ಪಂಪಾ ಸರೋವರದ ಒಳಗೆ ಇರುವ ಮೆಟ್ಟಿಲುಗಳಲ್ಲಿ ಮಹಿಳೆಯರು ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು. ಸರೋವರದಲ್ಲಿರುವ ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು. ಮಹಿಳೆಯರು ಶಂಖನಾದ ಮೊಳಗಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಗಂಗಾವತಿಯ ಶಾಸಕ ಗಾಲಿ ಜನಾರ್ದನ ರೆಡ್ಡಿ, ಅವರ ಧರ್ಮಪತ್ನಿ ಲಕ್ಷ್ಮಿಅರುಣಾ, ಸಂಸ್ಥೆಯ ಸಂಚಾಲಕಿ ಮಾಧುರಿ ಸಹಸ್ರಬುದ್ದೆ, ಸಂಸ್ಥೆಯ ಪ್ರತಿನಿಧಿಗಳಾದ ಶೈಲಜಾ ವಿಠ್ಠಲ್, ಡಾ.ಶಂಕರ್ ನಾಂದಜಿ, ಅಧ್ಯಕ್ಷರಾದ ರತ್ನಶ್ರೀರಾಯ ಆನೆಗುಂದಿ, ಕೇಶವ, ಪ್ರೊ.ಮೀನಾ ಚಂದಾವರ, ಶ್ರೀಪಾದ್ ಪತ್ತಿಕೊಂಡ, ಸಂಯೋಜಕರಾದ ಸಂತೋಷ ಕೆಲೋಜಿ, ಗಾಯಕ್ವಾಡ್ ಭೀಮರಾವ್ ಪ್ರಶಾಂತ್, ದಿವ್ಯ ಕಂದಕೂರ್, ಮಹಾದೇವಿ ಬೋಧನಕರ್, ವೈಶಾಲಿ ಜೋಶಿ, ಅವಂತಿ ದೀಕ್ಷಿತ್, ಊರ್ಮಿಳಾ ಜೋಶಿ, ದಿವ್ಯ ಎಸ್, ಅನುಪಮಾ, ಗಾಯತ್ರಿ ಮೊಹೊಲೆ, ವಿನುತಾ ಮಂಜುನಾಥ, ಕಾರ್ಯಕ್ರಮ, ಯಮನೂರು ಸೇರಿದಂತೆ ವಿವಿಧ ಪ್ರಮುಖರು ಭಾಗವಹಿಸಿದ್ದರು.