ಸುರಪುರ ತಾಲೂಕಿನಲ್ಲೆಡೆ ರಾಮಲಲ್ಲಾ ಜಪ

| Published : Jan 23 2024, 01:51 AM IST

ಸಾರಾಂಶ

ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಮುಖಂಡ ರಾಜಾ ಹರ್ಷವರ್ಧನ ನಾಯಕ ಅವರು 10 ಅಡಿಯ ಊದಿನ ಕಡ್ಡಿ ಬೆಳಗಿಸಿ ಬಾಲರಾಮನ ಜಪಿಸಿದರು

ಕನ್ನಡಪ್ರಭ ವಾರ್ತೆ ಸುರಪುರ

ಉತ್ತರಪ್ರದೇಶದ ಆಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ನಿಮಿತ್ತ ತಾಲೂಕಿನ ಎಲ್ಲೆಡೆ ಹಿರಿಯರು, ಕಿರಿಯರು ರಾಮನ ಜಪ ಎಲ್ಲೆಡೆ ಮೊಳಗಿತ್ತು.

ಭಾಜ-ಭಜಂತ್ರಿ, ಹಲುಗೆಯ ಸದ್ದಿನ ಅಬ್ಬರ ಜೋರಾಗಿತ್ತು. ತಾಲೂಕಿನಲ್ಲಿರುವ ಎಲ್ಲ ದೇಗುಲಗಳಲ್ಲಿ ಪೂಜೆ ಕೈಂಕರ್ಯಗಳು ಜೋರಾಗಿ ನಡೆದೆವು. ಐತಿಹಾಸಿಕ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಮುಖಂಡ ರಾಜಾ ಹರ್ಷವರ್ಧನ ನಾಯಕ ಅವರು 10 ಅಡಿಯ ಊದಿನ ಕಡ್ಡಿ ಬೆಳಗಿಸಿ ಬಾಲರಾಮನ ಜಪಿಸಿದರು. ರಾಮಮಂದಿರ, ಸಿಬಾರಬಂಡಿ, ವೇಣುಗೋಪಾಲ ಸ್ವಾಮಿ ದೇಗುಲ, ಅಂಬಾಭವನಿ ರಾಘವೇಂದ್ರ ಸಾಮಿ ಗುಡಿ, ತಿಂಥಣಿ ಮೌನೇಶ್ವರ ದೇಗುಲ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ನೆರವೇರಿದವು. ಅಲ್ಲದೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅನ್ನಸಂತರ್ಪಣೆ ನೆರವೇರಿತು.

ರಾಮನ ಭಾವಚಿತ್ರ ಹಿಡಿದು ಮೆರವಣಿಗೆ ಎಲ್ಲೆಡೆ ನಡೆಯಿತು. ರಾಮಭಕ್ತರಿಂದ ರಾಮ ಜಾನಕಿ, ಲಕ್ಷ್ಮಣ, ಹನುಮನ ಜಪ ಪಕ್ಷಬೇಧವಿಲ್ಲದೆ ನಡೆಯಿತು. ರಾಮಚಂದ್ರ, ಸೀತಾಮಾತೆ, ಲಕ್ಷ್ಮಣರ ಹಾಗೂ ಆಂಜನೆಯ ವೇಷಧಾರಿಗಳಂತೂ ಎಲ್ಲರ ಗಮನ ಸೆಳೆದರು.