ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಈ ತಿಂಗಳ ಒಳಗೆ ಮನೆ ಕಂದಾಯ ಕಟ್ಟಿದರೆ ಶೇಕಡ ೫ರಷ್ಟು ರಿಯಾಯ್ತಿ ಸಿಗುತ್ತದೆ ಎನ್ನುವ ನಗರಸಭೆ ಘೋಷಣೆಗೆ ಸ್ಪಂದಿಸಿರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಆಕ್ಸಿಸ್ ಬ್ಯಾಂಕಿಗೆ ಹಣ ಕಟ್ಟಲು ಬಂದಾಗ ಬ್ಯಾಂಕಿನವರು ಬೆಳಿಗಿನಿಂದ ಮಧ್ಯಾಹ್ನ ೧ ಗಂಟೆವರೆಗೆ ಹಣ ಕಟ್ಟಲು ಸಮಯ ನಿಗದಿ ಮಾಡಿದ ಪರಿಣಾಮ ಸರದಿ ಸಾಲಿನಲ್ಲಿ ಬಂದ ಸಾರ್ವಜನಿಕರು ನಿರಾಸೆಯಲ್ಲಿ ವಾಪಸ್ ಹೋಗಬೇಕಾಯಿತು.ಏಪ್ರಿಲ್ ತಿಂಗಳ ಒಳಗೆ ಮನೆ ಕಂದಾಯ ಕಟ್ಟಿದರೇ ಶೇಕಡ ೫ರಷ್ಟು ಕಡಿತ ಕೊಡುವುದಾಗಿ ನಗರಸಭೆ ವಿಶೇಷ ರಿಯಾಯಿತಿ ನೀಡಿದ ಹಿನ್ನೆಲೆಯಲ್ಲಿ ನಗರಸಭೆ ವ್ಯಾಪ್ತಿಗೆ ಒಳಪಟ್ಟ ನಿವಾಸಿಗಳು ತಮ್ಮ ಮನೆ ಕಂದಾಯ ಕಟ್ಟುವುದಕ್ಕೆ ನೂಕು ನುಗ್ಗಲಿನಲ್ಲಿ ನಿಂತಿದ್ದರು. ನಗರಸಭೆ ಒಳಗೆ ಹಣ ಕಟ್ಟಲು ಒಂದು ಕಡೆ ಅವಕಾಶ ಮಾಡಿಕೊಟ್ಟಿದ್ದರೆ ಇನ್ನು ಬಿ.ಎಂ. ರಸ್ತೆ ಬಳಿ ಇರುವ ಆಕ್ಸಿಸ್ ಬ್ಯಾಂಕಿನಲ್ಲಿ ಹಣ ಕಟ್ಟಲು ಅವಕಾಶ ಕಲ್ಪಿಸಲಾಗಿದೆ. ನಗರಸಭೆಯಲ್ಲಿ ಸಂಜೆ ೬ ಗಂಟೆಯವರೆಗೂ ಮನೆ ಕಂದಾಯ ಕಟ್ಟಲು ಅವಕಾಶ ನೀಡಿದ್ದರೇ ಎಕ್ಸಿಸ್ ಬ್ಯಾಂಕ್ನಲ್ಲಿ ಕೇವಲ ಮಧ್ಯಾಹ್ನ ೧ ಗಂಟೆಯವರೆಗೂ ಅವಕಾಶ ಕೊಟ್ಟಿರುವುದು ಸಮಸ್ಯೆ ಆಗಿದೆ. ಇನ್ನು ಈ ಬ್ಯಾಂಕಿನಲ್ಲಿ ಎರಡು ಕೌಂಟರ್ ಇದ್ದು, ಇದರಲ್ಲಿ ಬ್ಯಾಂಕ್ ಗ್ರಾಹಕರಿಗೆ ಒಂದು ಕೌಂಟರ್ ಮತ್ತೊಂದು ಕೌಂಟರ್ ನಗರಸಭೆ ಮನೆ ಕಂದಾಯ ಕಟ್ಟಲು ನಿಗದಿ ಮಾಡಿದ್ದಾರೆ. ಒಂದು ಕೌಂಟರ್ ನೀಡಿರುವುದರಿಂದ ಸರದಿ ಸಾಲು ಬ್ಯಾಂಕ್ ಒಳಗಿನಿಂದ ಹೊರಗೆ ಬಂದು ಜನರು ಕ್ಯೂನಲ್ಲಿ ನಿಂತಿದ್ದಾರೆ. ಕೂಡಲೇ ಇನ್ನಷ್ಟು ಬ್ಯಾಂಕುಗಳಲ್ಲಿ ಹಣ ಕಟ್ಟಲು ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದೇ ವೇಳೆ ಸಮಾಜ ಸೇವಕ ನಡೆಗೆರೆ ಕೃಷ್ಣಯ್ಯ ಮಾಧ್ಯಮದೊಂದಿಗೆ ಮಾತನಾಡಿ, ನಗರಸಭೆಯಲ್ಲಿ ಅವರವರ ಕಂದಾಯ ಕಟ್ಟುವುದಕ್ಕೆ ಎಕ್ಸಿಸ್ ಬ್ಯಾಂಕಿಗೆ ಚಲನ್ ಕೊಡಲಾಗುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳು ಎಂದರೇ ದಿನದ ಬೆಳಗಿನಿಂಧ ಸಂಜೆ ೪ ಗಂಟೆಯವರೆಗೂ ಕಾರ್ಯನಿರ್ವಹಿಸಬೇಕು. ಈ ಬ್ಯಾಂಕಿನ ಸ್ವ ಇಚ್ಛೆಯಿಂದ ಮಧ್ಯಾಹ್ನ ೧ ಗಂಟೆಗೆ ಬಂದ್ ಮಾಡುತ್ತಿದ್ದಾರೆ. ನಂತರ ಬಂದವರಿಗೆ ಹಣ ಕಟ್ಟಿಸಿಕೊಳ್ಳದೇ ವಾಪಸ್ ಕಳುಹಿಸುತ್ತಿದ್ದಾರೆ ಎಂದು ದೂರಿದರು. ಯಾವುದೇ ರಾಷ್ಟ್ರೀಕೃತ ಬ್ಯಾಂಕಾಗಲಿ ಸಂಜೆವರೆಗೂ ಹಣ ಕಟ್ಟಲು ಅವಕಾಶ ಮಾಡಿಕೊಡಬೇಕು. ಎಷ್ಟೋ ಜನ ವಯಸ್ಸಾದವರೂ ಶುಗರ್ ಇದ್ದವರು ಸರದಿ ಸಾಲಿನಲ್ಲಿ ನಿಂತು ವಾಪಸ್ ಹೋಗುತ್ತಾರೆ ಎಂದರೇ ತಂಬ ಅನಾನುಕೂಲವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಸರಿಪಡಿಸಬೇಕು ಎಂಬುದು ನಮ್ಮ ಒತ್ತಾಯ. ಇನ್ನು ಅನನೂಕೂಲದ ಬಗ್ಗೆ ಬ್ಯಾಂಕಿನವರಿಗೆ ಕೇಳಿದರೇ ನಮಗೆ ಸಿಬ್ಬಂದಿಯ ಕೊರತೆ ಇದೆ ಎಂದು ಉತ್ತರಿಸುತ್ತಾರೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಾರ್ವಜನಿಕರಿಗೆ ತೊಂದರೆ ಆಗದ ರೀತಿ ಆರ್. .ಬಿ.ಐ. ಸೂಚನೆ ಏನಿರುತ್ತದೆ ದಿನದ ಸಂಜೆ ೪ ಗಂಟೆಯವರೆಗೂ ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದರು.