ಆಳಂದ ಸಿಪಿಎಸ್ ಶಾಲೆಯ ಆವರಣದಲ್ಲಿ ಅವ್ಯವಸ್ಥೆ: ಕ್ರಮಕ್ಕೆ ಪಾಲಕರು ಒತ್ತಾಯ

| Published : Jun 15 2024, 01:10 AM IST

ಆಳಂದ ಸಿಪಿಎಸ್ ಶಾಲೆಯ ಆವರಣದಲ್ಲಿ ಅವ್ಯವಸ್ಥೆ: ಕ್ರಮಕ್ಕೆ ಪಾಲಕರು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಸಿಪಿಎಸ್ ಶಾಲೆಯ ಆವರಣದಲ್ಲಿ ಮಳೆ ನೀರು ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಲವು ತೊಂದರೆಗಳನ್ನು ಉಂಟುಮಾಡುತ್ತಿದೆ. ಶಾಲಾ ಆವರಣದಲ್ಲಿ ನೀರು ನಿಂತಿರುವ ಕಾರಣ, ಮಕ್ಕಳು ನಿರ್ವಿಘ್ನವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಆಳಂದ

ಪಟ್ಟಣದ ಸರ್ಕಾರಿ ಸಿಪಿಎಸ್ ಶಾಲೆಯ ಆವರಣದಲ್ಲಿ ಮಳೆ ನೀರು ನಿಂತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹಲವು ತೊಂದರೆಗಳನ್ನು ಉಂಟುಮಾಡುತ್ತಿದೆ. ಶಾಲಾ ಆವರಣದಲ್ಲಿ ನೀರು ನಿಂತಿರುವ ಕಾರಣ, ಮಕ್ಕಳು ನಿರ್ವಿಘ್ನವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಇದು ಮಕ್ಕಳ ಶಿಕ್ಷಣಕ್ಕೆ ಪರಿಣಾಮ ಬೀರುತ್ತಿದ್ದು, ಪೋಷಕರು ಈ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಲು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಶಾಲೆಯ ಮುಂಭಾಗ ಮತ್ತು ಆವರಣದಲ್ಲಿ ನೀರು ನಿಂತಿದ್ದು, ಕೇಸರುಮ ರಸ್ತೆಯಲ್ಲಿ ಮಕ್ಕಳ ಮತ್ತು ಶಿಕ್ಷಕರಿಗೆ ಶಾಲೆಯೊಳಗೆ ನಡೆದ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿಬಾರಿ ಮಳೆಬಂದರೆ ಮಕ್ಕಳು ಮತ್ತು ಶಿಕ್ಷಕರು ಶಾಲೆಗೆ ಬಂದು ಹೋಗಲು ಹರಸಹಾಸ ಪಡುವಂತಾಗಿದೆ.

ಆವಣದಲ್ಲಿ ನೀರಿನ ಹೊಂಡ ನಿರ್ಮಾಣವಾಗಿದ್ದರಿಂದ ಇದರಿಂದ ಮಕ್ಕಳಿಗೆ ಜಲಜಂತುಗಳ ಸೋಂಕು ತಗುಲುವ ಭೀತಿ ಹೆಚ್ಚಾಗಿದೆ. ‘ನಾವು ನಮ್ಮ ಮಕ್ಕಳ ಸುರಕ್ಷತೆಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಪೋಷಕರು ಹೇಳಿದ್ದಾರೆ. "ಪ್ರತೀ ಮಳೆಯ ನಂತರ ನಮ್ಮ ಮಕ್ಕಳು ಸುರಕ್ಷಿತವಾಗಿರಬೇಕು. ಶಾಲಾ ಆಡಳಿತವು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಪಾಲಕರು, ಶಾಲಾ ಆಡಳಿತ ಮತ್ತು ಸ್ಥಳೀಯ ಪ್ರಾಧಿಕಾರಗಳಿಗೆ ಈ ಬಗ್ಗೆ ದೂರು ನೀಡಿದ್ದು, ತಕ್ಷಣ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ‘ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಪೋಷಕರು ಹೇಳಿದ್ದಾರೆ.

ಸ್ಥಳೀಯ ಅಧಿಕಾರಿಗಳು, ಶಾಲಾ ಆವರಣದ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಹಾಗೂ ಡ್ರೈನೇಜ್ ವ್ಯವಸ್ಥೆಯನ್ನು ಸುಧಾರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಈ ಸಮಸ್ಯೆ ಎಷ್ಟು ತಕ್ಷಣಕ್ಕೆ ಪರಿಹಾರವಾಗುತ್ತದೆಯೋ ಎಂಬುದನ್ನು ಕಾಯಲಾಗುವುದು ಎಂದು ಪೋಷಕರ ಮುಖಂಡ ದಿಲೀಪ ಕ್ಷೀರಸಾಗರ ಅವರು ಎಚ್ಚರಿಸಿದ್ದಾರೆ.