ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂರ್ನಾಡು ಪದವಿ ಕಾಲೇಜಿನ ಜಂಟಿ ಸಹಯೋಗದಲ್ಲಿ ದಿ. ಹಂಚೆಟ್ಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿಗಳ ಜ್ಞಾಪಕಾರ್ಥ ‘ಕೊಡಗಿನ ಜಾನಪದ ಕಲೆಗಳ ಪ್ರಕಾರಗಳು’ ಕುರಿತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ದಿ. ಮಹಾಬಲೇಶ್ವರ ಭಟ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ಮೂರ್ನಾಡು ಪದವಿ ಕಾಲೇಜಿನಲ್ಲಿ ಶನಿವಾರ ಜರುಗಿತು.
ನಾಪೋಕ್ಲು : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೂರ್ನಾಡು ಪದವಿ ಕಾಲೇಜಿನ ಜಂಟಿ ಸಹಯೋಗದಲ್ಲಿ ದಿ. ಹಂಚೆಟ್ಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿಗಳ ಜ್ಞಾಪಕಾರ್ಥ ‘ಕೊಡಗಿನ ಜಾನಪದ ಕಲೆಗಳ ಪ್ರಕಾರಗಳು’ ಕುರಿತು ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ದಿ. ಮಹಾಬಲೇಶ್ವರ ಭಟ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ಮೂರ್ನಾಡು ಪದವಿ ಕಾಲೇಜಿನಲ್ಲಿ ಶನಿವಾರ ಜರುಗಿತು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಕಲ್ಪನಾ ಸಾಮ್ರಾಟ್ ಉದ್ಘಾಟಿಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪಿ. ಕೇಶವಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ದತ್ತಿದಾನಿಗಳ ಉದ್ದೇಶವನ್ನು ಅರಿತು ಜಿಲ್ಲೆಯ ಗ್ರಾಮೀಣ ಭಾಗದ ಶಾಲಾ-ಕಾಲೇಜುಗಳಲ್ಲಿ ಉಪಯುಕ್ತ ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕವಿ. ವಿ. ಶಿವಪ್ಪ ಅವರು ''''ಕನ್ನಡದ ಏಳುಬೀಳುಗಳ ಬಗ್ಗೆ ಸಮೀಕ್ಷೆ'''' ವಿಷಯ ಕುರಿತು ಮಾತನಾಡಿದರು. ದತ್ತಿದಾನಿಗಳಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಮಾತನಾಡಿ, ನಮ್ಮ ದಿನನಿತ್ಯದ ಬದುಕಿಗೂ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ. ವಿದ್ಯಾರ್ಥಿಗಳು ಉದ್ಯೋಗ ನಿಮಿತ್ತ ನಗರಗಳಿಗೆ ತೆರಳಿದರೂ ತಮ್ಮ ಮಾತೃಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ದತ್ತಿದಾನಿಗಳಾದ ಕುಮಾರ್ ಎನ್. ಎಂ., ಮೂರ್ನಾಡು ಹೋಬಳಿ ಕಸಾಪ ಅಧ್ಯಕ್ಷ ಈರಮಂಡ ಹರಿಣಿ ವಿಜಯ್, ಮಡಿಕೇರಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಗುಡ್ಡೇರ ಲಕ್ಷು ಸೋಮಣ್ಣ, ಮೂರ್ನಾಡು ಹೋಬಳಿ ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷ್ಮಿ, ಕೋಶಾಧಿಕಾರಿ ಮಡಿಯಂಡ ಸೂರಜ್ ಹಾಗೂ ಆಕಾಶ್ಉಪಸ್ಥಿತರಿದ್ದರು. ಮನಿಷಾ ಸ್ವಾಗತಿಸಿ, ಉಪನ್ಯಾಸಕ ಹರೀಶ್ ಕಿಗ್ಗಲು ನಿರೂಪಿಸಿದರು. ಮುರಳಿಧರ ವಂದಿಸಿದರು.