ಉಡುಪಿ ಜಿಲ್ಲಾ ಕಸಾಪದಿಂದ ಚಾರುವಸಂತ ನಾಟಕ ಪ್ರಸ್ತುತಿ ಯಶಸ್ವಿ

| Published : Jan 22 2025, 12:33 AM IST

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪ್ರಸ್ತುತಿಯಲ್ಲಿ, ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರಪಡಿಸಿದ, ಡಾ. ಜೀವನ ರಾಂ ಸುಳ್ಯ ನಿರ್ದೇಶನದಲ್ಲಿ, ನಾಡೋಜ ಹಂಪನಾ ಅವರ ‘ಚಾರು ವಸಂತ’ ನಾಟಕವು ನಗರದ ಎಂ.ಜಿ.ಎಂ ಕಾಲೇಜಿನ ಮುದ್ದಣ ಬಯಲುರಂಗ ಮಂಟಪದಲ್ಲಿ ಪ್ರದರ್ಶನಗೊಂಡು ರಂಗಾಸ್ತಕರ ಮೆಚ್ಚುಗೆಗೆ ಪಾತ್ರವಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪ್ರಸ್ತುತಿಯಲ್ಲಿ, ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ಸಾದರಪಡಿಸಿದ, ಡಾ. ಜೀವನ ರಾಂ ಸುಳ್ಯ ನಿರ್ದೇಶನದಲ್ಲಿ, ನಾಡೋಜ ಹಂಪನಾ ಅವರ ‘ಚಾರು ವಸಂತ’ ನಾಟಕವು ನಗರದ ಎಂ.ಜಿ.ಎಂ ಕಾಲೇಜಿನ ಮುದ್ದಣ ಬಯಲುರಂಗ ಮಂಟಪದಲ್ಲಿ ಪ್ರದರ್ಶನಗೊಂಡು ರಂಗಾಸ್ತಕರ ಮೆಚ್ಚುಗೆಗೆ ಪಾತ್ರವಾಯಿತು.ಸಾಂಸ್ಕೃತಿಕ ಚಿಂತಕ ಇಂದ್ರಾಳಿ ಜಯಕರ ಶೆಟ್ಟಿ ನಗಾರಿ ಭಾರಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ರಂಗ ಪ್ರಕ್ರಿಯೆಗಳು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವಿಶೇಷ ಪಾತ್ರ ವಹಿಸಿವೆ ಎನ್ನುತ್ತಾ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹೊರ ತಂದ ೨೦೨೧-೨೪ರ ಅವಧಿಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣದ ಕೃತಿಯನ್ನು ಡಾ. ಉಮೇಶ್ ಪುತ್ರನ್ ಬಿಡುಗಡೆ ಮಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷೀನಾರಾಯಣ ಕಾರಂತರು ರಂಗ ಕರ್ಮಿ ಜೀವನರಾಮ್ ಸುಳ್ಯ ಅವರನ್ನು ಸಾಹಿತ್ಯ ಪರಿಷತ್ತಿನ ಪರವಾಗಿ ಗೌರವಿಸಿದರು. ಸಾಂಸ್ಕೃತಿಕ ಚಿಂತಕ ಮೋಹನ್ ಆಳ್ವ ಅವರು ಶುಭ ಹಾರೈಸಿದರು.ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಪರಿಷತ್ತಿನ ಮಾಧ್ಯಮ ಪ್ರತಿನಿಧಿ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಕೊಂಡಳ್ಳಿ ಪ್ರಭಾಕರ ಶೆಟ್ಟಿ ಅವರು ವಂದಿಸಿದರು.ಉಡುಪಿ ಜಿಲ್ಲೆಯ ರಂಗಾಸಕ್ತರು, ವಿದ್ವಾಂಸರು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಚಾರು ವಸಂತ ನಾಟಕದ ಯಶಸ್ವಿ ಪ್ರದರ್ಶನ ಜನಮನ್ನಣೆ ಗಳಿಸಿತು.