ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಹರಿದುಬಂದ ಭಕ್ತಸಾಗರ

| Published : Jul 24 2024, 12:24 AM IST

ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಹರಿದುಬಂದ ಭಕ್ತಸಾಗರ
Share this Article
  • FB
  • TW
  • Linkdin
  • Email

ಸಾರಾಂಶ

ಧ್ಯಾನಮಂದಿರದಲ್ಲಿ ಮಂಗಳವಾರ ಬೆಳಗ್ಗೆಯಿಂದ ನಡೆದ ವಿವಿಧ ಧಾಮಿ೯ಕ ನೆರವೇರಿತು. ಬೈಲೂರಿನ ಅಪ್ಪಯ್ಯನ ಕೂಟದವರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆಯನ್ನು ನೆರವೇರಿಸಿದರು.

ಭಟ್ಕಳ: ನಾಮಧಾರಿ ಸಮಾಜದ ಕುಲಗುರುಗಳು ಹಾಗೂ ಧರ್ಮಸ್ಥಳದ ಉಜಿರೆ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಇಲ್ಲಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ತಮ್ಮ ಐದನೇ ಚಾತುರ್ಮಾಸ ವ್ರತಾಚರಣೆಯ ಮೂರನೇ ದಿನವಾದ ಮಂಗಳವಾರವೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಮತ್ತು ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಧ್ಯಾನಮಂದಿರದಲ್ಲಿ ಮಂಗಳವಾರ ಬೆಳಗ್ಗೆಯಿಂದ ನಡೆದ ವಿವಿಧ ಧಾಮಿ೯ಕ ನೆರವೇರಿತು. ಬೈಲೂರಿನ ಅಪ್ಪಯ್ಯನ ಕೂಟದವರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಹಲವು ಭಕ್ತರು, ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು. ಪಾದಪೂಜೆ ನಂತರ ನಡೆದ ಅನ್ನಸಂತರ್ಪಣೆ ನಡೆಯಿತು. ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ವಿವಿಧ ಕೂಟ ಮತ್ತು ಭಕ್ತರಿಂದ ಹೊರೆಕಾಣಿಕೆ ಸಲ್ಲಿಸಲಾಯಿತು.

ಸಂಜೆ ನಡೆದ ಯಕ್ಷಗಾನ ತಾಳಮದ್ದಲೆ ಭಕ್ತರ ಮನರಂಜಿಸಿತು. ಸಂಜೆ ಉಜಿರೆ ಅಶೋಕ ಭಟ್ ಸಮಯೋಜನೆಯಲ್ಲಿ ಸಂಪೂರ್ಣ ರಾಮಾಯಣ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರ ಮನರಂಜಿಸಿತು. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ಕರಿಕಲ್ ಶ್ರೀರಾಮ ಧ್ಯಾನಮಂದಿರ ಭಕ್ತರಿಂದ ತುಂಬಿದೆ. ಈಗಾಗಲೇ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಯ ಗಣ್ಯರು ಭೇಟಿ ನೀಡಿ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.