ಚೌಡಯ್ಯರ ಆದರ್ಶ ಇಂದಿಗೂ ಪ್ರಸ್ತುತ

| Published : Jan 23 2025, 12:48 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವದರೊಂದಿಗೆ ಸಮಾನತೆಯ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವದರೊಂದಿಗೆ ಸಮಾನತೆಯ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ ಹೇಳಿದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದ ಅಂಗವಾಗಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು. ಅಂಬಿಗೇರ ಚೌಡಯ್ಯನವರು ಬಸವಣ್ಣನವರ ಸಮಕಾಲಿನವರು. ಅವರು ವಚನಗಳ ಮೂಲಕ ದಾರಿ ತೋರಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳುವದರೊಂದಿಗೆ ಎಲ್ಲರೂ ಮುಂದೆ ಸಾಗೋಣವೆಂದರು.ಈ ಸಮಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ಅಧ್ಯಕ್ಷ ರಮೇಶ ಮೂಕಿಹಾಳ, ಪುರಸಭಾ ಸದಸ್ಯ ಪರಶುರಾಮ ತಂಗಡಗಿ, ಶಶಿಕಾಂತ ಮೂಕಿಹಾಳ, ಭೀಮಣ್ಣ ತಳವಾರ, ಲಕ್ಷ್ಮಣ ತಳವಾರ, ಬಸವರಾಜ ಯಡಹಳ್ಳಿ, ಪರಶುರಾಮ ಮನಗೂಳಿ, ಪುರಸಭೆ ಲೆಕ್ಕಿಗ ಸಿದ್ದಲಿಂಗಯ್ಯ ಚೊಂಡಿಪಾಟೀಲ, ಶ್ರೀಪಾದ ಜೋಶಿ, ಬಸವರಾಜ ಜುಮನಾಳ ಹಾಗೂ ಸಮಾಜದ ಮುಖಂಡರು, ಅಧಿಕಾರಿಗಳು ಇದ್ದರು.