ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ, 7 ಜನರ ಲೈಸೆನ್ಸ್‌ ರದ್ದು

| Published : Feb 15 2025, 12:30 AM IST

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ, 7 ಜನರ ಲೈಸೆನ್ಸ್‌ ರದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಮೂರು ದಿನಗಳಿಂದ ಸತತವಾಗಿ ಹಾವೇರಿ, ಬ್ಯಾಡಗಿ ಸೇರಿದಂತೆ ವಿವಿಧ ಕಚೇರಿಗಳು, ಎಪಿಎಂಸಿ, ಕಸವಿಲೇವಾರಿ ಘಟಕ ಸೇರಿದಂತೆ 28 ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ವಿವಿಧ ಪ್ರಕರಣಗಳಲ್ಲಿ ಸ್ವಯಂ ಪ್ರಕರಣ (ಸುಮೋಟೋ) ದಾಖಲಿಸಲಾಗಿದೆ. ಏಷ್ಯಾದಲ್ಲೆ ಪ್ರಸಿದ್ಧವಾದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳಲ್ಲಿ, ತೂಕದಲ್ಲಿ ಮೋಸ ನಡೆಯುತ್ತಿದೆ. ಈ ಕುರಿತು ಸ್ವಯಂ ಪ್ರಕರಣ ದಾಖಲಿಸಲಾಗಿದೆ. ಏಳು ಜನರ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಹಾವೇರಿ: ಮೂರು ದಿನಗಳಿಂದ ಸತತವಾಗಿ ಹಾವೇರಿ, ಬ್ಯಾಡಗಿ ಸೇರಿದಂತೆ ವಿವಿಧ ಕಚೇರಿಗಳು, ಎಪಿಎಂಸಿ, ಕಸವಿಲೇವಾರಿ ಘಟಕ ಸೇರಿದಂತೆ 28 ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ವಿವಿಧ ಪ್ರಕರಣಗಳಲ್ಲಿ ಸ್ವಯಂ ಪ್ರಕರಣ (ಸುಮೋಟೋ) ದಾಖಲಿಸಲಾಗಿದೆ. ಏಷ್ಯಾದಲ್ಲೆ ಪ್ರಸಿದ್ಧವಾದ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳಲ್ಲಿ, ತೂಕದಲ್ಲಿ ಮೋಸ ನಡೆಯುತ್ತಿದೆ. ಈ ಕುರಿತು ಸ್ವಯಂ ಪ್ರಕರಣ ದಾಖಲಿಸಲಾಗಿದೆ. ಏಳು ಜನರ ಲೈಸೆನ್ಸ್ ರದ್ದು ಮಾಡಲಾಗಿದೆ ಎಂದು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿವರ ನೀಡಿದರು. ಹಾವೇರಿ ನಗರದ ಎಪಿಎಂಸಿಗೆ ಭೇಟಿ ನೀಡಿದ ಸಮಯದಲ್ಲಿ ರೈತರು ತರುವ ತರಕಾರಿ ಹಾಗೂ ಬೆಳೆಗಳ ತೂಕ ಮಾಡುವ ಯಂತ್ರಗಳು ದೋಷಪೂರಿತವಾಗಿರುವುದು ಕಂಡುಬಂದ ಹಿನ್ನಲೆ ಸ್ವತಃ ನನ್ನ ತೂಕ ಪರೀಕ್ಷಿಸಿದಾಗ ಒಂದೊಂದು ತೂಕದ ಯಂತ್ರಗಳು ತೂಕದಲ್ಲಿ 4ರಿಂದ 5 ಕೆ.ಜಿ ವ್ಯತ್ಯಾಸ ತೋರಿಸುತ್ತವೆ. ಹಾಗಾಗಿ ಅಂತಹ ತೂಕದ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ. ರೈತರಿಂದ ಕಮಿಷನ್ ಪಡೆಯುವಂತಿಲ್ಲ ಎಂದು ಎಚ್ಚರಿಕೆ ನೀಡಿದೆ ಎಂದರು.ಹಾವೇರಿ ನಗರದ ಎಪಿಎಂಸಿ ಹಾಗೂ ದನದ ಮಾರುಕಟ್ಟೆಯಲ್ಲಿ ಸಾವಿರಾರು ಜನರು ಸೇರುತ್ತಾರೆ. ಅಲ್ಲಿ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. ಮಾಡದಿದ್ದರೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವಹಿಸಲಾಗುವುದು ಎಂದರು.ಟೆಂಡರ್ ರದ್ದು: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಹಾಗೂ ಶೌಚಾಲಯ ಬಳಕೆಗೆ ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ಭೇಟಿ ನೀಡಿದಾಗ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಮೊದಲಿನವರ ಟೆಂಡರ್ ರದ್ದು ಮಾಡಲಾಗಿದೆ, ಹೊಸಬರಿಗೆ ಟೆಂಡರ್ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಡಿಸಿ ವರದಿ ನೀಡಿದ್ದಾರೆ ಎಂದರು.ಬಯೋಮೆಟ್ರಿಕ್ ಕಡ್ಡಾಯ: ನಗರಸಭೆ, ಉಪ ನೋಂದಣಿ ಕಚೇರಿ, ತಹಸೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿದ ಸಮಯದಲ್ಲಿ ಉಪ ನೋಂದಣಿ ಕಚೇರಿಯಲ್ಲಿ ಕಚೇರಿಗೆ ಬಂದಾಗ ತಮ್ಮ ಬಳಿ ಇದ್ದ ಹಣದ ವಿವರ ಬರೆದಿದ್ದಾರೆ. ಮರಳಿ ಹೋಗುವ ಹಣದ ವಿವರಣೆ ಬರೆದಿಲ್ಲ. ಹಾಗಾಗಿ ನಗದು ವಹಿ, ಚಲನವಲನ ವಹಿ ಕಡ್ಡಾಯವಾಗಿ ನಿರ್ವಹಣೆ ಮಾಡಲು ಹಾಗೂ ಬಯೋಮೆಟ್ರಿಕ್ ಕಡ್ಡಾಯ ಅಳವಡಿಕೆಗೆ ಸೂಚಿಸಲಾಗಿದೆ ಎಂದರು.9 ವಾಹನಗಳ ಜಪ್ತಿ: ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಫ್‌ಸಿ ಮುಗಿದ ಹಾಗೂ ಇನ್ಸೂರೆನ್ಸ್ ಇಲ್ಲದ ವಾಹನಗಳ ಜಪ್ತಿ ಮಾಡದಿರುವ ಹಿನ್ನೆಲೆಯಲ್ಲಿ ಇಂತಹ ವಾಹನಗಳ ಜಪ್ತಿಗೆ ಪ್ರಾದೇಶಿಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಎರಡೇ ದಿನದಲ್ಲಿ 9 ವಾಹನ ಜಪ್ತಿ ಮಾಡಲಾಗಿದೆ. ₹64 ಸಾವಿರ ದಂಡ ವಸೂಲಿ ಮಾಡಿದ್ದಾರೆ ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ, ಲೋಕಾಯುಕ್ತ ಅಪರ ನಿಬಂಧಕರಾದ ಕೆ.ಎಂ. ರಾಜಶೇಖರ, ಪಿ.ಶ್ರೀನಿವಾಸ, ಅರವಿಂದ ಎನ್.ವಿ., ಲೋಕಾಯುಕ್ತ ದಾವಣಗೆರೆ ಎಸ್‌ಪಿ ಎಂ.ಎಸ್. ಕೌಲಾಪೂರೆ, ಡಿಎಸ್‌ಪಿ ಬಿ.ಪಿ. ಚಂದ್ರಶೇಖರ, ಅಪರ ಡಿಸಿ ಡಾ. ನಾಗರಾಜ ಇತರರಿದ್ದರು.