ಸಾರಾಂಶ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಸಮುದಾಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇದರಲ್ಲಿ ಪ್ರಮುಖವಾಗಿ ಕೆರೆ ಅಭಿವೃದ್ಧಿ, ದುರ್ಬಲ ಅಶಕ್ತ ಕುಟುಂಬಗಳಿಗೆ ಮಾಸಾಶನ ವಿತರಣೆ, ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕುಡಿಯುವ ನೀರಿನ ಘಟಕ ಇಂತಹ ಸೇವಾ ಕಾರ್ಯಗಳ ಮಾಡುತ್ತ ಬರುತ್ತಿದೆ.
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ವಡ್ನಾಳ್ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಂಜೂರುಗೊಳಿಸಿದ ₹1.50ಲಕ್ಷ ಮೊತ್ತದ ಅನುದಾನವನ್ನು ಧರ್ಮಸ್ಥಳ ಯೋಜನಾಧಿಕಾರಿ ರವಿಚಂದ್ರ ದೇಗುಲ ಜೀರ್ಣೋದ್ಧಾರ ಸಮಿತಿಗೆ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಸಮುದಾಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು ಇದರಲ್ಲಿ ಪ್ರಮುಖವಾಗಿ ಕೆರೆ ಅಭಿವೃದ್ಧಿ, ದುರ್ಬಲ ಅಶಕ್ತ ಕುಟುಂಬಗಳಿಗೆ ಮಾಸಾಶನ ವಿತರಣೆ, ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕುಡಿಯುವ ನೀರಿನ ಘಟಕ ಇಂತಹ ಸೇವಾ ಕಾರ್ಯಗಳ ಮಾಡುತ್ತ ಬರುತ್ತಿದೆ ಎಂದರು.
ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಸ್ಥಾನ ನಿರ್ಮಾಣಕ್ಕೆ ಅನುದಾನ ನೀಡಿ ಗ್ರಾಮದ ಬೆಳವಣಿಗೆಗೆ ಸಹಕಾರ ನೀಡಿದ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಕೃತಜ್ಞತೆ ಸಲ್ಲಿಸಿದರು.ಈ ವೇಳೆ ದೇವಸ್ಥಾನ ಸಮಿತಿಯ ಅಣ್ಣಪ್ಪ, ಗ್ರಾಪಂ ಅಧ್ಯಕ್ಷ ರಾಧಾ ರವಿಚಂದ್ರ, ಒಕ್ಕೂಟದ ಅಧ್ಯಕ್ಷೆ ಪುಪ್ಪಾ, ತಿಪ್ಪೇಸ್ವಾಮಿ, ಓಕ್ಕೂಟದ ಪದಾಧಿಕಾರಿಗಳಾದ ಮಮತಾ, ಪವಿತ್ರಾ, ಸೇವಾ ಪ್ರತಿನಿಧಿಗಳು ಮತ್ತು ಸ್ವ-ಸಹಾಯ ಸಂಘಗಳ ಪ್ರಮುಖರು ಭಾಗವಹಿಸಿದ್ದರು.