ಸಾರಾಂಶ
ಖರೀದಿ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ರಾಗಿ ತುಂಬಲು ಲಾರಿ ಬರುತ್ತಿಲ್ಲ. ಇಲ್ಲಿ ತಂಗಲು ಸರಿಯಾದ ವ್ಯವಸ್ಥೆಗಳು ಇಲ್ಲ, ಮಳೆ ಬಂದರೆ ರಾಗಿ ಮಳೆ ಪಾಲಾಗುತ್ತದೆ, ಆದ್ದರಿಂದ ಪ್ರತಿದಿನ ರಾಗಿ ತುಂಬಲು ಲಾರಿಗಳನ್ನು ಕಳಿಸಬೇಕು ಹಾಗೂ ಹಮಾಲಿಗಳಿಗೆ ಬರಬೇಕಾದ ಕೂಲಿ ಹಣವನ್ನು ನೀಡದೆ ಸತತ ನಾಲ್ಕು ವರ್ಷಗಳಿಂದ ಅನ್ಯಾಯ ಮಾಡುತ್ತಿದ್ದು, ನಮಗೆ ರೈತರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದೇವೆ,
ಕನ್ನಡಪ್ರಭ ವಾರ್ತೆ ಬೆಟ್ಟದಪುರ
ಗ್ರಾಮದ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ಹಲವಾರು ಬಗೆಯ ತೊಂದರೆಗಳು ಆಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಬುಧವಾರ ತಹಸೀಲ್ದಾರ್ ಸುರೇಂದ್ರ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.ರೈತರು ಮಾತನಾಡಿ, ಖರೀದಿ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ರಾಗಿ ತುಂಬಲು ಲಾರಿ ಬರುತ್ತಿಲ್ಲ. ಇಲ್ಲಿ ತಂಗಲು ಸರಿಯಾದ ವ್ಯವಸ್ಥೆಗಳು ಇಲ್ಲ, ಮಳೆ ಬಂದರೆ ರಾಗಿ ಮಳೆ ಪಾಲಾಗುತ್ತದೆ, ಆದ್ದರಿಂದ ಪ್ರತಿದಿನ ರಾಗಿ ತುಂಬಲು ಲಾರಿಗಳನ್ನು ಕಳಿಸಬೇಕು ಹಾಗೂ ಹಮಾಲಿಗಳಿಗೆ ಬರಬೇಕಾದ ಕೂಲಿ ಹಣವನ್ನು ನೀಡದೆ ಸತತ ನಾಲ್ಕು ವರ್ಷಗಳಿಂದ ಅನ್ಯಾಯ ಮಾಡುತ್ತಿದ್ದು, ನಮಗೆ ರೈತರಿಂದ ಬಂದ ಹಣದಿಂದ ಜೀವನ ನಡೆಸುತ್ತಿದ್ದೇವೆ, ನಮಗೆ ಕೂಲಿ ಹಣವನ್ನು ಕೊಡಿಸಬೇಕೆಂದು ಹಮಾಲಿಗಳು ತಹಸೀಲ್ದಾರ್ ಅವರಲ್ಲಿ ಮನವಿ ಮಾಡಿದರು.
ರೈತ ಹೆಸರಿನಲ್ಲಿ ಹಲವಾರು ದಲ್ಲಾಳಿಗಳು ಮಧ್ಯವರ್ತಿಗಳು ರಾಗಿ ಖರೀದಿ ಕೇಂದ್ರದಲ್ಲಿ ರೈತರ ಎಫ್ಐಡಿ ಗಳನ್ನು ಪಡೆದು ವ್ಯಾಪಾರಸ್ಥರ ಜೊತೆ ಶಾಮೀಲಾಗಿ ರಾಗಿ ಬಿಡುತ್ತಿದ್ದಾರೆಂದು ರಾಗಿ ಇಳಿಸುವ ಹಮಾಲಿಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸಿದರು. ತಹಸೀಲ್ದಾರ್ ಸುರೇಂದ್ರ ಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಇಂದು ನಾನು ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಇಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾವುದೇ ತರದಲ್ಲಿ ರೈತರಿಗೆ ತೊಂದರೆ ಆಗದಂತೆ ಖರೀದಿ ಮಾಡಬೇಕೆಂದು ಖರೀದಿ ಅಧಿಕಾರಿಗೆ ತಿಳಿಸಿದರು.ಬೆಟ್ಟದಪುರದ ರಾಗಿ ಖರೀದಿ ಕೇಂದ್ರದಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ರಾಗಿ ಖರೀದಿ ಮಾಡಲಾಗಿದೆ. ಸುಮಾರು 1,700 ರೈತರಿಂದ ಐವತ್ತು ಸಾವಿರ ಕ್ವಿಂಟಾಲ್ ಗುಣಮಟ್ಟದ ರಾಗಿ ಖರೀದಿ ಮಾಡಲಾಗಿದೆ ಎಂದು ಖರೀದಿ ಅಧಿಕಾರಿ ಅಕ್ಷಯ್ ತಿಳಿಸಿದ್ದಾರೆ.
ಆಹಾರ ಇಲಾಖೆಯ ಶಿರಸ್ತೆದಾರ್ ಸಣ್ಣಸ್ವಾಮಿ, ಆಹಾರ ನಿರೀಕ್ಷಕ ಮಂಜುನಾಥ್, ರೈತ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.