ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಅನ್ನಭಾಗ್ಯ ಯೋಜನೆಯಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ತಾಲೂಕಿನ ಫಲಾನುಭವಿಗಳಿಗೆ ಗುಣಮಟ್ಟದ ರಾಗಿಯನ್ನು ನೀಡುತ್ತಿಲ್ಲವೆಂದು ಫಲಾನುಭವಿಗಳು ದೂರು ನೀಡುತ್ತಿದ್ದು ಮುಂದೆ ಆಹಾರ ಶಿರಸ್ತೇದಾರರಿಗೆ ಗುಣಮಟ್ಟದ ರಾಗಿಯನ್ನು ನೀಡುವಂತೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಎಲ್.ಪಿ. ಪ್ರಕಾಶ್ ಗೌಡರು ತಿಳಿಸಿದರು.ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ೧೭ನೇ ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ೫ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ಜಾರಿಯಾಗುತ್ತಿದ್ದು, ಫಲಾನುಭವಿಗಳಿಗೆ ನೀಡುವ ರಾಗಿ ಕೊಂಡುಕೊಳ್ಳುವ ಸಮಯದಲ್ಲಿ ಗುಣಮಟ್ಟದ ರಾಗಿಯನ್ನು ಕೊಂಡುಕೊಳ್ಳದೆ ಇತ್ತೀಚೆಗೆ ಮಣ್ಣು ಹಾಗೂ ಧೂಳಿನಿಂದ ಕೂಡಿರುವುದಾಗಿ ಫಲಾನುಭವಿಗಳು ದೂರು ನೀಡಿದ್ದು ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.
ಕೆ.ಎಸ್.ಆರ್.ಟಿ.ಸಿಗಳನ್ನು ಅವೈಜ್ಞಾನಿಕವಾಗಿ ನಿಲ್ಲಿಸುವುದನ್ನು ತಪ್ಪಿಸಬೇಕು ಪುರುಷರು ಮತ್ತು ಮಹಿಳೆಯರ ಶೌಚಾಲಯವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಯನ್ನು ರಸ್ತೆ ಬದಿಯಲ್ಲಿ ಹಾಗೂ ರೈತರ ಕಾಪಾಡುವಂತೆ ತಿಳಿಸಿದರು ಹಾಗೂ ಜಮೀನಿನಲ್ಲಿ ವಿದ್ಯುತ್ ಪೋಲ್ ಅಳವಡಿಸುವ ಸಂದರ್ಭದಲ್ಲಿ ರೈತರಿಗೆ ತೊಂದರೆಯಾಗದಂತೆ ಅಳವಡಿಸುವುದು ಮತ್ತು ಸದರಿ ವಿದ್ಯುತ್ ತಂತಿಗಳ ಮೇಲಿರುವ ಮರ ಮತ್ತು ಕೊಂಬೆಗಳನ್ನು ಗುರುತಿಸಿ ತೊಂದರೆಯಾಗದಂತೆ ಕಡಿದು ಹಾಕಬೇಕು ಎಂದು ತಿಳಿಸಿದರು.ಗೃಹಲಕ್ಷ್ಮೀ ಯೋಜನೆಯಡಿ ತಾಲೂಕಿನಲ್ಲಿ ೮,೧೧೧ ಜನ ಫಲಾನಭವಿಗಳಿದ್ದು ಒಟ್ಟು ತಿಂಗಳಿಗೆ ಸರ್ಕಾರದಿಂದ ೧೫,೮೮,೯೬,೦೦೦ ಗಳ ಹಣ ಯಾವುದೇ ಕಮಿಷನ್ ಇಲ್ಲದೆ ಮಹಿಳೆಯರ ಕೈಗೆ ಸೇರುತ್ತಿದ್ದು ಶೇಕಡ ೯೭.೯೪ರಷ್ಟು ಯಶಸ್ವಿಯಾಗಿದ್ದು ತಾಲೂಕಿನಲ್ಲಿ ೬೭೯ ಜಿಎಸ್‌ಟಿ ಹೊಂದುವವರಿದ್ದು ಅವರ ವಿವರವನ್ನು ಪಡೆದುಕೊಂಡಿದ್ದು ಆ ಪೈಕಿ ೧೪೨ ಜಿ.ಎಸ್.ಟಿದಾರರನ್ನು ಸದರಿ ಗೃಹಲಕ್ಷ್ಮೀ ಯೋಜನೆ ಅಯಡಿಯಲ್ಲಿ ವಜಾ ಮಾಡಲಾಗಿದೆ ಎಂದು ತಿಳಿಸಿ, ಅನ್ನಭಾಗ್ಯ ಯೋಜನೆಯಡಿ ಎ.ಎ.ವೈ ಕಾರ್ಡ್ ೩೦೯೯ ಹಾಗು ೭೧.೮೪೮ ಬಿ.ಪಿ.ಎಲ್ ಕಾರ್ಡ್ ಹಾಗೂ ೬೬೦೭ ಎ.ಪಿ ಎಲ್ ಕಾರ್ಡ್ ಇದ್ದು ಒಟ್ಟು ೮೨,೩೬೪ ಜನ ಸದರಿ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ ಒಟ್ಟು ೮೮,೧೦೩ ಆರ್.ಆರ್. ಸಂಖ್ಯೆ ೮೩,೧೧೮ ಆರ್.ಆರ್ ಸಂಖ್ಯೆ ನೋಂದಣಿಯಾಗಿದ್ದು ಶೇಕಡ ೯೯.೭೭% ಫಲಾನುಭವಿಗಳಿಗೆ ತಲುಪುತ್ತಿದ್ದು ಮಾಸಿಕ ೨,೭೩,೦೦೦ ಸರ್ಕಾರದಿಂದ ಜಮಾವಣೆಯಾಗಿದೆ. ಶಕ್ತಿ ಯೋಜನೆಯಡಿ ಸೆ.೧ರಿಂದ ಸೆ.೧೫ರವರೆಗೆ ೪,೨೭,೦೪೩ ಮಹಿಳಾ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸಿ ದಾಖಲೆಯಾಗಿದ್ದು ಸರ್ಕಾರದಿಂದ ೧೪,೨೧,೨೦,೦೨೨ ಜಮಾವಣೆಯಾಗಿರುತ್ತದೆ.
ಯುವನಿಧಿ ಯೋಜನೆಯಡಿ ತಾಲೂಕಿನ ೫೮೭ ಪದವಿಧರರು ೧೭ ಜನ ಡಿಪ್ಲೋಮೋದಾರರಿದ್ದು ಒಟ್ಟು ತಿಂಗಳಿಗೆ ೩೦,೮೫,೫೦೦ ಫಲಾನುಭವಿಗಳ ಖಾತೆ ಜಮಾ ಆಗುತ್ತಿದ್ದು ಸರ್ಕಾರದ ಮಹತ್ವಾಕಾಂಕ್ಷೆ ೫ ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿವೆ. ೫ ಯೋಜನೆಗಳ ಅಧಿಕಾರಿಗಳು ಚೆನ್ನಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಈ ಮಹತ್ವಾಕಾಂಕ್ಷಿ ಯೋಜನೆ ತಾಲೂಕಿನ ಫಲಾನುಭವಿಗಳು ತುಂಬಾ ಸಂತಸಪಟ್ಟಿದ್ದು ಸದರಿ ಯೋಜನೆಗಳು ಮುಂದಿನ ೨೦೨೮ರವರೆಗೆ ಯಾವುದೇ ಕಾರಣಕ್ಕೆ ಸರ್ಕಾರ ನಿಲ್ಲಿಸುವುದಿಲ್ಲವೆಂದು ತಿಳಿಸಿದರು.ಸಭೆಯಲ್ಲಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ. ಹರೀಶ್ ಮಾತನಾಡಿದರು. ಗ್ಯಾರಂಟಿ ಸಮಿತಿಯ ಎಲ್ಲಾ ಸದಸ್ಯರು ೫ ಯೋಜನೆಯ ಅಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಮತ್ತು ಫಲಾನುಭವಿಗಳು ಹಾಜರಿದ್ದರು.