ಕಾರ್ಮಿಕರಿಗೆ ನೀಡುವ ತಿಂಡಿ ಗುಣಮಟ್ಟ ಪರಿಶೀಲಿಸಿ

| Published : Sep 25 2024, 12:49 AM IST

ಸಾರಾಂಶ

ನಗರಸಭೆಯಿಂದ ಪೌರ ಕಾರ್ಮಿಕರಿಗೆ ನೀಡುವ ತಿಂಡಿ ಗುಣಮಟ್ಟ ಕಾಪಾಡಬೇಕು ಹಾಗೂ ಮೆನು ಪ್ರಕಾರವೇ ಪೌಷ್ಟಿಕ ಆಹಾರ ನೀಡಬೇಕು. ಪೌರ ಕಾರ್ಮಿಕರು ನಗರಸಭೆಯ ಶಕ್ತಿಯಾಗಿದ್ದು, ಅವರ ಆರೋಗ್ಯ ರಕ್ಷಣೆ ಆಗತ್ಯ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರಸಭೆ ಅಧ್ಯಕ್ಷ ಎ.ಗಜೇಂದ್ರ ಮತ್ತು ಉಪಾಧ್ಯಕ್ಷ ಜೆ.ನಾಗರಾಜ್ ಮಂಗಳವಾರ ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ಪ್ರತಿನಿತ್ಯ ನೀಡುವ ಉಪಾಹಾರದ ಗುಣಮಟ್ಟ ಪರಿಶೀಲನೆ ಮಾಡಿದರು. ಅಲ್ಲದೆ ಪ್ರತಿದಿನ ಮೆನು ಪ್ರಕಾರವೇ ಪೌಷ್ಟಿಕ ಆಹಾರವನ್ನು ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ನಗರ ಮತ್ತು ನಗರಸಭೆಗೆ ಪೌರ ಕಾರ್ಮಿಕರೇ ಪ್ರಮುಖ ಶಕ್ತಿಯಾಗಿದ್ದು, ಅವರ ಆರೋಗ್ಯ ರಕ್ಷಣೆ ನಗರಸಬೆಯ ಮುಖ್ಯ ಜವಾಬ್ದಾರಿಯಾಗಿದೆ. ಅಲ್ಲದೆ ಅವರಿಗೆ ನಗರಸಭೆಯಿಂದ ನೀಡುವ ತಿಂಡಿ ಗುಣಮಟ್ಟ ಮತ್ತು ಮೆನು ಪ್ರಕಾರ ನೀಡುವಂತೆ ಉಭಯತರೂ ಸೂಚಿಸಿದರು. ನಗರಸಭೆಯಲ್ಲಿ ಪೌರ ಕಾರ್ಮಿಕರಿಗೆ ತಿಂಡಿ ವಿತರಿಸಿದ ನಂತರ ನಗರದ ವಾಲ್ವ್ ಮನ್‌ಗಳೊಂದಿಗೆ ಸಭೆ ನಡೆಸಿದರು.ನಗರಸಭೆಯ ಸರ್‌ಎಂವಿ ಸಭಾಂಗಣದಲ್ಲಿ ನಡೆದ ವಾಲ್ವ್ ಮನ್ ನ್‌ಗಳ ಸಭೆಯಲ್ಲಿ ನಗರದಲ್ಲಿ ಜಕ್ಕಲಮಡಗು ಜಲಾಶಯದ ನೀರು ಪೋಲಾಗುತ್ತಿರುವ ಬಗ್ಗೆ ಹೆಚ್ಚು ದೂರುಗಳಿದ್ದು, ನೀರು ಅತ್ಯಮೂಲ್ಯವಾದ ಜೀವಜಲವಾಗಿದೆ. ಇದರ ರಕ್ಷಣೆ ಮತ್ತು ಮಿತ ಬಳಕೆ ಪ್ರತಿಯೊಬ್ಬರ ಜವಾಬ್ದಾರಿ. ಇಂತಹ ಜೀವಜಲ ಪೋಲಾಗಿ ನಾಗರಿಕರಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಾಲ್ವ್ ಮನ್‌ಗಳು ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.ನಂತರ ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಸರಾ ಕ್ರೀಡಾಕೂಟದಲ್ಲಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರು `ಭಾಗವಹಿಸಿ, ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಜಿಲ್ಲಾ ದಸರಾ ಕ್ರೀಡಾಕೂಟಗಳನ್ನು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಉದ್ಘಾಟಿಸಿದರೆ, ಓಟದ ಸ್ಪರ್ಧೆಗೆ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರು ಚಾಲನೆ ನೀಡಿದರು.