ಜ್ಞಾನ ಹೆಚ್ಚಿಸಿಕೊಳ್ಳುವುದು ಮುಖ್ಯ

| Published : Nov 20 2025, 02:00 AM IST

ಸಾರಾಂಶ

ಪರಿಸರ ಮಾಲಿನ್ಯ ತಡೆಗಟ್ಟುವ ವಿಷಯದಲ್ಲಿ ರಸಾಯನಶಾಸ್ತ್ರ ವಿದ್ಯಾರ್ಥಿಗಳು, ಸಂಶೋಧಕರು ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಮೈಸೂರುವಿದ್ಯಾರ್ಥಿಗಳು, ಸಂಶೋಧಕರು ಜ್ಞಾನ ಹೆಚ್ಚಿಸಿಕೊಳ್ಳುವುದು ಮುಖ್ಯ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಹೇಳಿದರು.ಮಾನಸ ಗಂಗೋತ್ರಿಯ ರಸಾಯನಶಾಸ್ತ್ರ ವಿಭಾಗದಲ್ಲಿ ಬುಧವಾರ ಕೆಮಿಕಲ್‌ ಸೊಸೈಟಿ ಉದ್ಘಾಟಿಸಿ ಮಾತನಾಡಿದ ಅವರು, ಇದಕ್ಕಾಗಿ ಸೊಸೈಟಿಯ ಮೂಲಕ ಕಾರ್ಯಾಗಾರ, ಸಮ್ಮೇಳನ, ಕೈಗಾರಿಕೆಗಳಿಗೆ ಹಾಗೂ ಪ್ರಯೋಗಾಲಯಗಳಿಗೆ ಭೇಟಿ ನೀಡಬೇಕು. ಹೊರದೇಶಗಳಿಗೆ ಹೋಗಿ ಬಂದವರು ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದರು.ಕರ್ನಾಟಕ ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ.ಎನ್‌.ಎಸ್. ರಾಮೇಗೌಡ ಮಾತನಾಡಿ, ಪರಿಸರ ಮಾಲಿನ್ಯ ತಡೆಗಟ್ಟುವ ವಿಷಯದಲ್ಲಿ ರಸಾಯನಶಾಸ್ತ್ರ ವಿದ್ಯಾರ್ಥಿಗಳು, ಸಂಶೋಧಕರು ಮುಂದಾಗಬೇಕು ಎಂದರು.ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಮಾತನಾಡಿ, ರಸಾಯನಿಕ ಕ್ರಿಯೆಯಲ್ಲಿ ಯಾವುದೇ ಪ್ರಯೋಗ ಮಾಡಬೇಕಾದರೆ ವೇಗೋತ್ಕರ್ಷ ಮುಖ್ಯ. ಅದೇ ರೀತಿ ಪತ್ರಕರ್ತರು ಸಮಾಜ ಮತ್ತು ಸರ್ಕಾರದ ನಡುವೆ ವೇಗೋತ್ಕರ್ಷದಂತೆ ಕೆಲಸ ಮಾಡುತ್ತಾರೆ ಎಂದರು.ಸಿಕ್ಕ ಎಲ್ಲಾ ಅವಕಾಶಗಳನ್ನು ಅತ್ಯಂತ ಶಿಸ್ತಿನಿಂದ ಬಳಸಿಕೊಂಡರೆ, ಬದ್ಧತೆಯಿಂದ ಕೆಲಸ ಮಾಡಿದರೆ ಯಾವುದೇ ಗುರಿಯನ್ನಾದರೂ ತಲುಪಬಹುದು. ವಿದ್ಯಾರ್ಥಿಗಳು ಈ ರೀತಿ ಗುರಿ ಹಾಕಿಕೊಳ್ಳಬೇಕು ಎಂದರು.ಕ್ರಿಯಾ ಫೌಂಡೇಷನ್‌ ಸಂಸ್ಥಾಪಕ ಪ್ರೊ.ಕೆ.ಎಂ. ಪ್ರಸನ್ನಕುಮಾರ್‌ ವ್ಯಕ್ತಿತ್ವ ವಿಕಸನ- ಸಮಸ್ಯೆಗಳಿಗೆ ಪರಿಹಾರ- ಗಂಭೀರ ಚಿಂತನೆ ಕುರಿತು ಮಾತನಾಡಿ, ಕಾರ್ಪೋರೇಟ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ರೀತಿಯಲ್ಲಿ ಅಕಾಡೆಮಿಕ್‌ ಮತ್ತು ಸೈಂಟಿಬಿಕ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ಕೂಡ ಇರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ರಸಾಯನಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಕೆ.ಎನ್‌. ಮೋಹನ ಮಾತನಾಡಿ, ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಕೆಮಿಕಲ್‌ ಸೊಸೈಟಿಯ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ರಸಾಯನಶಾಸ್ತ್ರೇತರ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ, ಉಪನ್ಯಾಸ ಕೊಡಿಸಲಾಗುವುದು ಎಂದರು.ಈ ಬಾರಿ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎನ್.ಎಸ್. ರಾಮೇಗೌಡ ಹಾಗೂ ಅಂಶಿ ಪ್ರಸನ್ನಕುಮಾರ್‌ ಅವರನ್ನು ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕೆಮಿಕಲ್‌ ಸೊಸೈಟಿ ಖಜಾಂಚಿ ಪ್ರೊ.ಎಚ್‌.ಡಿ. ರೇವಣಸಿದ್ದಪ್ಪ ಸ್ವಾಗತಿಸಿದರು. ಸ್ಟಾಫ್‌ ಕಾರ್ಯದರ್ಶಿ ಪ್ರೊಎಂ.ಪಿ ಸದಾಶಿವ ವಂದಿಸಿದರು. ಸಾಕ್ಷಿ ಪ್ರಾರ್ಥಿಸಿದರು. ಡಾ.ಶರತ್‌ ಕುಮಾರ್‌, ಪ್ರಿಯಾ, ಸೂರ್ಯ ಅವರು ಅತಿಥಿಗಳನ್ನು ಪರಿಚಯಿಸಿದರು. ಚರಣ್‌ ಕಾರ್ಯಕ್ರಮ ನಿರೂಪಿಸಿದರು.