ಸಾರಾಂಶ
ತುಮಕೂರು: ರಸಾಯನಶಾಸ್ತ್ರ ಒಂದು ವಿಶಾಲವಾದ ವಿಷಯ.ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ಮಾನವನ ಸಮಗ್ರ ಬೆಳವಣಿಗೆಗೆ ರಸಾಯನಶಾಸ್ತ್ರ ಪೂರಕವಾಗಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಹೇಳಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ “ರಸಾಯನಶಾಸ್ತ್ರ: ಒಂದು ಸಮಗ್ರ ವಿಷಯಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಕಾಶ್ ಎಂ.ಶೇಟ್ ಮಾತನಾಡಿ, ರಸಾಯನಶಾಸ್ತ್ರವು ವಸ್ತುವಿನ ಅಧ್ಯಯನವಾಗಿದೆ.ನಮ್ಮದೇಹವೇ ಒಂದು ಪ್ರಯೋಗಾಲಯ. ಆ ಪ್ರಯೋಗಾಲಯದೊಂದಿಗೆ ಮಾಡುವ ಅಧ್ಯಯನವೇ ರಸಾಯನಶಾಸ್ತ್ರ ಎಂದು ತಿಳಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್. ಶ್ರೀನಿವಾಸ ಮಾತನಾಡಿ, ರಸಾಯನಶಾಸ್ತ್ರದಲ್ಲಿ ಕಲಿತು, ಪ್ರಯೋಗಿಸುವುದೆಲ್ಲವೂ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದ ಪ್ರೊ. ಪಿ.ಎಸ್. ಮುಖರ್ಜಿ, ಬೆಂಗಳೂರಿನ ಆಂತೆರ್ ಜೈವಿಕ ವಿಜ್ಞಾನ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಡಾ. ಜಿ.ಗೋವಿಂದರಾಜು, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ. ಜಯಶಂಕರ್ ಬಿ., ಸಹಾಯಕ ಪ್ರಾಧ್ಯಾಪಕಡಾ. ಪಿ.ರಾಘವೇಂದ್ರಕುಮಾರ್, ಸಹಾಯಕ ಪ್ರಾಧ್ಯಾಪಕಿಡಾ.ಲಲಿತಾಎಚ್.ಎಂ.ಭಾಗವಹಿಸಿದ್ದರು.