ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಬಸವ ಧರ್ಮ ಪೀಠದ ವಿರುದ್ಧ ಚಟುವಟಿಕೆಯಲ್ಲಿ ತೋಡಗಿದಕ್ಕಾಗಿ ಚೆನ್ನಬಸವಾನಂದ ಸ್ವಾಮೀಗೂ ನಮಗೂ ಸಂಬಂಧವಿಲ್ಲ. ಕಾನೂನಾತ್ಮಕವಾಗಿ ಅವರನ್ನು ಸರ್ವಾನುಮತದಿಂದ ಉಚ್ಛಾಟಿಸಲಾಗಿದೆ. ಅವರಿಗೆ ಬಸವಧರ್ಮ ಪೀಠ ಕುರಿತು ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಜಗದ್ಗುರು ಡಾ.ಗಂಗಾ ಮಾತಾಜಿ ತಿಳಿಸಿದರು.ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ನಡೆಯಿಸಿ ಅದರಲ್ಲಿ ಸಂಬಂಧವಿಲ್ಲದ ನಿರ್ಣಯ ಕೈಗೊಂಡಿದ್ದು, ಅದನ್ನು ಖಂಡಿಸಿ ಜಗದ್ಗುರು ಡಾ.ಗಂಗಾ ಮಾತಾಜಿ ಅವರು ನಗರದ ಬಸವ ಮಹಾಮನೆಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಕರ್ನಾಟಕದಲ್ಲಿ ಮೂರು ವರ್ಷಗಳ ಹಿಂದೆ ಸ್ವತಂತ್ರ ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ ತೀವ್ರಗೊಂಡಾಗ ಮಾತಾಜಿಯವರು ತಮ್ಮೆಲ್ಲಾ ಭೀನ್ನಾಭಿಪ್ರಾಯಗಳನ್ನು ಒತ್ತಿಟ್ಟು, ಮಾತಾಜಿಯವರ ಒತ್ತಾಸೆಯಂತೆ ಮಠಾಧೀಶರಲ್ಲಿ ಒಕ್ಕೂಟ ಮೂಡಿಸಲು ಎಲ್ಲಾ ಮಠಾಧೀಶರ ಒತ್ತಾಸೆಯಂತೆ ಹಾಗೂ ಸುಪ್ರಿಂ ಕೋರ್ಟ್‌ನ ಆದೇಶಕ್ಕೆ ಮಾನ್ಯತೆಗಾಗಿ ಲಿಂಗದೇವ ವಚನಾಂಕಿತ ಬಳಸುವುದು ಬಿಟ್ಟು ಬಿಡಲಾಗಿದೆ. ಬಸವಣ್ಣನವರ ಮೂಲ ವಚನಾಂಕಿತ ಕೂಡಲ ಸಂಗಮದೇವ ಬಳಿಸುವುದಾಗಿ ಘೋಷಿಸಲಾಗಿದೆ.
ಕೆಲವರು ಇದನ್ನೇ ಅಸ್ತ್ರವಾಗಿ ಬಳಸಿಕೊಂಡು ಸಮಾಜದ ವಿರೋಧ ಚಟುವಟಿಕೆಯಲ್ಲಿ ಮತ್ತು ಬಸವಧರ್ಮ ಪೀಠದ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವುದು ಬಸವ ಧರ್ಮ ಪೀಠಕ್ಕೆ ಸಂಬಂಧಿಸಿದ ರಾಷ್ಟ್ರೀಯ ಬಸವದಳ, ಅಕ್ಕಮಹಾದೇವಿ ಪೀಠ, ಬಸವ ಧರ್ಮಪೀಠ, ಲಿಂಗಾಯತ ಮಹಾಸಭಾದ ಬಗ್ಗೆ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿರುವ ಚೆನ್ನಬಸವಾನಂದ ಸ್ವಾಮೀಜಿ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಗಳು ಮಾತನಾಡಿ, ಬಸವ ಧರ್ಮ ಪೀಠವು ಟ್ರಸ್ಟ್ ವ್ಯವಸ್ಥೆ ಹೊಂದಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಗಳು ಸಮಾಜಕ್ಕೆ ಸಂಬಂಧಿಸಿದ್ದು, ಲಿಂಗಾನಂದ ಸ್ವಾಮೀಜಿಯವರು ಆಗಲಿ ಮಾತೆ ಮಹಾದೇವಿಯವರಾಗಲಿ ಟ್ರಸ್ಟಿನ ವ್ಯವಸ್ಥೆಯಂತೆ ನಡೆದಿದ್ದಾರೆ. ಟ್ರಸ್ಟಿನ ನಿಯಮ ಪ್ರಕಾರವೇ ಜಗದ್ಗುರು ಗಂಗಾ ಮಾತಾಜೀಯವರನ್ನು ಬಸವ ಧರ್ಮಪೀಠದ ಮುಖ್ಯಸ್ಥರನ್ನಾಗಿ ಮಾಡಿದ್ದಾರೆ ಎಂದ ಅವರು ಚೆನ್ನಬಸವಾನಂದ ಸ್ವಾಮಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಜಗದ್ಗುರು ಬಸವ ಕುಮಾರ ಸ್ವಾಮೀಗಳು ಅಲ್ಲಮಪ್ರಭು ಯೋಗಿಪೀಠ ಅಲ್ಲಮಗಿರಿ ಮಹಾರಾಷ್ಟ್ರಇವರು ಮಾತನಾಡಿ, ಡಾ.ಗಂಗಾಮಾತಾಜಿಯವರಿಗೆ ನಮ್ಮೆಲ್ಲರ ಬೆಂಬಲವಿದೆ. ಮಾತೆ ಮಹಾದೇವಿ ಅವರಂತೆ ಬಸವ ಧರ್ಮ ಪೀಠದ ಮುಖ್ಯಸ್ಥರಾದ ಗಂಗಾ ಮಾತಾಜಿಯವರ ಎಲ್ಲಾ ಅಂಗ ಸಂಸ್ಥೆಗಳನ್ನು ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಚೆನ್ನಬಸವಾನಂದ ಸ್ವಾಮೀಯ ಸ್ವಾರ್ಥಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದು ಖಂಡಿಸುತ್ತೇವೆ ಇವರು ಹುಚ್ಚು ನಿರ್ಣಯಗಳಿಗೆ ಭಕ್ತರು ಯಾರೂ ಕಿವಿಗೂಡಬಾರದೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಸವ ಧರ್ಮ ಪೀಠದ ಪ್ರಮುಖರಾದ ಜಗದ್ಗುರು ಮಾತೆ ಜ್ಞಾನೇಶ್ವರಿ ಜಗನ್ಮಾನತೆ ಅಕ್ಕಮಹಾದೇವಿ ಪೀಠ ಧಾರವಾಡ, ಜಗದ್ಗುರು ದಾನೇಶ್ವರಿ ಮಾತಾಜಿ ವೀರಮಾತೆ ಅಕ್ಕನಾಗಾಲಾಂಬಿಕಾ ಪೀಠ ಉಳವಿ, ಸದ್ಗುರು ಬಸವರತ್ನ ಮಾತಾಜಿ ಬಸವಧರ್ಮ ಪೀಠ ಕೂಡಲಸಂಗಮ, ಸದ್ಗುರು ಮಾತೆ ಸರ್ವಮಂಗಳಾ ದೇವಿ ಮಾತಾ ಆಶ್ರಮ ನವದೆಹಲಿ, ಸದ್ಗುರು ಮಾತೆ ಕಸ್ತೂರಿದೇವಿ ಬಸವ ಗಂಗೋತ್ರಿ ಆಶ್ರಮ ಬೆಂಗಳೂರು, ಸದ್ಗುರು ಮಾದೇಶ್ವರ ಸ್ವಾಮೀಗಳು ಬಸವಧರ್ಮ ಪೀಠ ಕೂಡಲಸಂಗಮ, ಸದ್ಗುರು ಬಸವಯೋಗಿ ಸ್ವಾಮೀಜಿ ವಿಶ್ವ ಕಲ್ಯಾಣ ಮಿಷನ್ ಬೆಂಗಳೂರು, ಸದ್ಗುರು ಅನಿಮಿಷಾನಂದ ಸ್ವಾಮೀಗಳು ಬಸವ ಮಂಟಪ ಹೈದ್ರಾಬಾದ, ಸದ್ಗುರು ಮಾತೆ ವಿಜಯಾಂಬಿಕಾ ಬಸವ ಮಂಟಪ ಲಾಡಗೇರಿ ಬೀದರ, ಸದ್ಗರು ಪ್ರಭುಲಿಂಗ ಸ್ವಾಮೀಜಿ ಬಸವ ಮಂಟಪ ಬೆಂಗಳೂರು, ಸದ್ಗುರು ಬಸವಪ್ರಕಾಶ ಸ್ವಾಮೀಗಳು ಬಸವ ಮಂಟಪ ಬೆಳಗಾಂವ, ಸದ್ಗುರು ಮಾತೆ ಗಿರಿಜಾದೇವಿ ಬಸವಧರ್ಮ ಪೀಠ ಬಸವಕಲ್ಯಾಣ, ಸದ್ಗುರು ಮಾತೆ ತುಂಗಮ್ಮಾ ಬಸವಧರ್ಮ ಪೀಠ ಕೂಡಲಸಂಗಮ, ಸದ್ಗುರು ಮಾತೆ ಬಸವಮಣಿ ಬಸವಧರ್ಮ ಪೀಠ ಸಾಸಲಟ್ಟಿ, ಸದ್ಗುರು ಬಸವೇಶ್ವರ ಬಸವಧರ್ಮ ಪೀಠ ಧಾರವಾಡ, ಮಾತೆ ಸುಜ್ಞಾನಿದೇವಿ ಬಸವ ಮಹಾಮನೆ ಬಸವಕಲ್ಯಾಣ ಉಪಸ್ಥಿತರಿದ್ದರು.