ಸಾರಾಂಶ
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕನಕಗಿರಿಯ ಲಿಂ.ಚೆನ್ನಮಲ್ಲ ಶಿವಯೋಗಿಗಳ ಸಮಾಜಮುಖಿ ಕಾರ್ಯಗಳಿಂದ ಹೆಸರಾಗಿದ್ದರು. ಮಠದ ೨೮ ಪೀಠಾಧಿಪತಿಗಳ ಪೈಕಿ ಇದೇ ಮೊದಲ ಬಾರಿಗೆ ಇವರ ರಥ ನಿರ್ಮಿಸಲಾಗಿದೆ. ಡಿ.೨೪ರಿಂದ ಜ.೩ರವರೆಗೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಶ್ರೀಗಳ ೬೮ನೇ ಜಾತ್ರೆ ನಡೆಯಲಿದೆ. ಈ ಬಾರಿ ಹೊಸ ರಥದ ಜತೆಗೆ ಕಂಚಿನಮೂರ್ತಿ ಪ್ರತಿಷ್ಠಾಪನೆಯೂ ಜರುಗಲಿದೆ.
ಕನಕಗಿರಿ: ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ೨೬ನೇ ಪೀಠಾಧಿಪತಿ ಆಗಿದ್ದ ಲಿಂ.ಚೆನ್ನಮಲ್ಲ ಶಿವಯೋಗಿಗಳ ಕಂಚಿನಮೂರ್ತಿ ಮೆರವಣಿಗೆ ಡಿ.೨೪ರಂದು ಪಟ್ಟಣದ ಕಲ್ಮಠದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ನಡೆಯಲಿದೆ ಎಂದು ಮುಖಂಡ ವಾಗೀಶ ಹಿರೇಮಠ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಸುವರ್ಣಗಿರಿ ಮಠದಲ್ಲಿ ಶ್ರೀಮಠದಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಕನಕಗಿರಿಯ ಲಿಂ.ಚೆನ್ನಮಲ್ಲ ಶಿವಯೋಗಿಗಳ ಸಮಾಜಮುಖಿ ಕಾರ್ಯಗಳಿಂದ ಹೆಸರಾಗಿದ್ದರು. ಮಠದ ೨೮ ಪೀಠಾಧಿಪತಿಗಳ ಪೈಕಿ ಇದೇ ಮೊದಲ ಬಾರಿಗೆ ಇವರ ರಥ ನಿರ್ಮಿಸಲಾಗಿದೆ. ಡಿ.೨೪ರಿಂದ ಜ.೩ರವರೆಗೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮೆದಿಕಿನಾಳ ಗ್ರಾಮದಲ್ಲಿ ಶ್ರೀಗಳ ೬೮ನೇ ಜಾತ್ರೆ ನಡೆಯಲಿದೆ. ಈ ಬಾರಿ ಹೊಸ ರಥದ ಜತೆಗೆ ಕಂಚಿನಮೂರ್ತಿ ಪ್ರತಿಷ್ಠಾಪನೆಯೂ ಜರುಗಲಿದೆ. ಅದಕ್ಕಾಗಿ ಎಲ್ಲ ಭಕ್ತರು ಕಾರ್ಯಕ್ರಮದಲ್ಲಿ ಹಾಗೂ ಜಾತ್ರೆಯಲ್ಲಿ ಭಾಗವಹಿಸುವಂತೆ ಕೋರಿದರು.ಮಠದ ಭಕ್ತ ಗಂಗಾಧರಸ್ವಾಮಿ ಮಾತನಾಡಿ, ಮೂಲ ಮಠದಿಂದಲೇ ಶ್ರೀಗಳ ಕಂಚಿನ ಮೂರ್ತಿ ಮೆರವಣಿಗೆ ನಡೆಸಿ ಬಳಿಕ ಮೆದಕಿನಾಳ ಗ್ರಾಮಕ್ಕೆ ಬೀಳ್ಕೊಡುವ ನಿರ್ಧಾರ ಶ್ರೀಮಠದ್ದಾಗಿದೆ. ಮಹಿಳೆಯರಿಂದ ಕಳಸ, ಕುಂಭ, ಭಾಜಾ-ಭಜಂತ್ರಿ ಸೇರಿ ವಿವಿಧ ವಾದ್ಯ ಮೇಳದೊಂದಿಗೆ ಡಿ.೨೪ರಂದು ಮೆರವಣಿಗೆ ನಡೆಯಲಿದೆ. ಸರ್ವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.ಉಚಿತ ನೇತ್ರ ಶಸ್ತ್ರಚಿಕಿತ್ಸೆ: ಶ್ರೀಮಠ ಹಾಗೂ ಹುಬ್ಬಳ್ಳಿಯ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ. ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರು ಶ್ರೀಮಠದಲ್ಲಿ ಅಥವಾ ೯೯೬೪೨೫೨೩೨೫ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ವೈದ್ಯ ಬಸವರಾಜ ಹಿರೇಮಠ ಹೇಳಿದರು.ಪ್ರಮುಖರಾದ ಡಿ.ಎಂ. ಅರವಟಗಿಮಠ, ಪ್ರಶಾಂತ ಪ್ರಭುಶೆಟ್ಟರ, ವೀರೇಶ ಸಮಗಂಡಿ, ಶರಣಬಸಪ್ಪ ಭತ್ತದ, ಸಂಗಯ್ಯಸ್ವಾಮಿ ಬಿ., ಸುರೇಶ ಗುಗ್ಗಳಶೆಟ್ರ, ಪ್ರಕಾಶ ಹಾದಿಮನಿ, ಕರಬಸಪ್ಪ ಉಡಮಕಲ್, ಸಂತೋಷ ಹಾದಿಮನಿ, ವೀರಭದ್ರಪ್ಪ ಇದ್ದರು.