ಖಡ್ಗದ ಮೂಲಕ ದಿಟ್ಟ ಉತ್ತರ ನೀಡಿದ ಚೆನ್ನಮ್ಮ

| Published : Oct 25 2025, 01:00 AM IST

ಸಾರಾಂಶ

ಚೆನ್ನಮ್ಮನ ಧೈರ್ಯ, ಸಾಹಸ, ಶೌರ್ಯ ರಾಷ್ಟ್ರ ಪ್ರೇಮದ ಪ್ರತೀಕ. ಬ್ರಿಟೀಷರ ದೌರ್ಜನ್ಯಗಳಿಗೆ ಖಡ್ಗದ ಮೂಲಕ ದಿಟ್ಟ ಉತ್ತರ ನೀಡಿದ ಧೀರ ಮಹಿಳೆಯಾಗಿದ್ದಾರೆ

ಕುಕನೂರು: ಬ್ರೀಟಿಷರ ದೌರ್ಜನ್ಯಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಖಡ್ಗದ ಮೂಲಕ ದಿಟ್ಟ ಉತ್ತರ ನೀಡಿದರು ಎಂದು ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪೂರ ಹೇಳಿದರು.

ತಾಲೂಕಿನ ಬನ್ನಿಕೊಪ್ಪ ಗ್ರಾಪಂ ಸಭಾಂಗಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಚೆನ್ನಮ್ಮನ ಧೈರ್ಯ, ಸಾಹಸ, ಶೌರ್ಯ ರಾಷ್ಟ್ರ ಪ್ರೇಮದ ಪ್ರತೀಕ. ಬ್ರಿಟೀಷರ ದೌರ್ಜನ್ಯಗಳಿಗೆ ಖಡ್ಗದ ಮೂಲಕ ದಿಟ್ಟ ಉತ್ತರ ನೀಡಿದ ಧೀರ ಮಹಿಳೆಯಾಗಿದ್ದಾರೆ. ಚೆನ್ನಮ್ಮ ಸ್ವಾತಂತ್ರ್ಯ ಪ್ರೇಮ ಪ್ರತಿಯೊಬ್ಬರು ಮನಗಾಣಬೇಕು. ಆಕೆ ಶೌರ್ಯದ ಹೋರಾಟ ನಿಜಕ್ಕೂ ಅಜರಾಮರ ಎಂದರು.

ಗ್ರಾಪಂ ಸದಸ್ಯ ವೀರಪ್ಪ ಗೊಂದಿ, ಉಡಚಪ್ಪ ಛಲವಾದಿ, ಶಿವರಾಜ ದೇವರ, ಬಸವರಾಜ ಗಾಣಿಗರ, ಉಮೇಶ ಗೊಂದಿ, ರುದ್ರಪ್ಪ ನಡುಮನಿ, ಕನಕಪ್ಪ ಬ್ಯಾಡರ, ಶಿವನಗೌಡ ಗೂಳಪ್ಪಗೌಡ್ರು, ವಿಜಯಕುಮಾರ ಕನ್ನಾರಿ, ಗವಿಸಿದ್ದಪ್ಪ ಮೆಣಸಿನಕಾಯಿ, ಸುರೇಶ ಮಾಳೆಕೊಪ್ಪ, ಅಶೋಕಗೌಡ ಶಿವಪ್ಪಗೌಡ್ರು, ಶರಣಪ್ಪ ಬ್ಯಾಳಿ, ಜಗದೀಶ ಗುಡ್ಲಾನೂರು, ಗ್ರಾಪಂ ಸಿಬ್ಬಂದಿ ನಾರಾಯಣ ದೊಡ್ಮನಿ, ಶರಣಪ್ಪ ದೇವರಮನಿ, ರವಿರಾಜ ಹೂಲಿ ಇತರರಿದ್ದರು.