ಮಹಿಳಾ ಪಿಜಿಗಳಲ್ಲಿ ಸುರಕ್ಷತೆಪರಿಶೀಲಸಿದ ಚೆನ್ನಮ್ಮ ಪಡೆ

| Published : Jul 28 2024, 02:04 AM IST

ಮಹಿಳಾ ಪಿಜಿಗಳಲ್ಲಿ ಸುರಕ್ಷತೆಪರಿಶೀಲಸಿದ ಚೆನ್ನಮ್ಮ ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋರಮಂಗಲದ ಪಿಜಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಬಿಹಾರ ಮೂಲದ ಕೃತಿಕುಮಾರಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಎಚ್ಚೆತ್ತ ಆಗ್ನೇಯ ವಿಭಾಗದ ‘ಚೆನ್ನಮ್ಮ ಪಡೆ’ ಪೊಲೀಸರು, ಈಗ ಮಹಿಳಾ ಪಿಜಿಗಳಲ್ಲಿ ಸುರಕ್ಷತೆ ಕುರಿತು ಪರಿಶೀಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋರಮಂಗಲದ ಪಿಜಿಯಲ್ಲಿ ಖಾಸಗಿ ಕಂಪನಿ ಉದ್ಯೋಗಿ ಬಿಹಾರ ಮೂಲದ ಕೃತಿಕುಮಾರಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಎಚ್ಚೆತ್ತ ಆಗ್ನೇಯ ವಿಭಾಗದ ‘ಚೆನ್ನಮ್ಮ ಪಡೆ’ ಪೊಲೀಸರು, ಈಗ ಮಹಿಳಾ ಪಿಜಿಗಳಲ್ಲಿ ಸುರಕ್ಷತೆ ಕುರಿತು ಪರಿಶೀಲಿಸಿದ್ದಾರೆ.

ಕೋರಮಂಗಲ, ಎಚ್ಎಸ್‌ಆರ್‌ ಲೇಔಟ್, ಮಡಿವಾಳ, ಬೊಮ್ಮನಹಳ್ಳಿ, ಸದ್ದುಗುಂಟೆಪಾಳ್ಯ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಆಗ್ನೇಯ ವಿಭಾಗದ ಎಲ್ಲ ಠಾಣೆಗಳ ಸರಹದ್ದಿನ ಮಹಿಳಾ ಪಿಜಿಗಳಿಗೆ ಚೆನ್ನಮ್ಮ ಪಡೆ ತೆರಳಿ ತಪಾಸಣೆ ನಡೆಸಿ ಪಿಜಿಯಲ್ಲಿ ನೆಲೆಸಿರುವ ಮಹಿಳೆಯರಿಗೆ ಸ್ವಯಂ ರಕ್ಷಣೆ ಬಗ್ಗೆ ಪೊಲೀಸರು ಪಾಠ ಮಾಡಿದ್ದಾರೆ.

ಮಹಿಳೆಯರ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ಅಪರಿಚಿತರ ಹಿಂಬಾಲಿಸುವಿಕೆ ಹಾಗೂ ಬೆದರಿಕೆಗಳ ಕರೆ ಸೇರಿದಂತೆ ಜೀವಕ್ಕೆ ಅಪಾಯ ತರುವ ಯಾವುದೇ ಕೃತ್ಯ ನಡೆದರೂ ತಕ್ಷಣವೇ ನಮ್ಮ-122 (ಪೊಲೀಸ್ ನಿಯಂತ್ರಣ ಕೊಠಡಿ)ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗಳಿಗೆ ತೆರಳಿ ದೂರು ನೀಡಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ ಎಂದು ಮಹಿಳೆಯರಿಗೆ ಚೆನ್ನಮ್ಮ ಪಡೆ ಅಭಯ ನೀಡಿದೆ.

ನಮ್ಮ ವಿಭಾಗದ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿರುವ ಮಹಿಳಾ ಪಿಜಿಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಆ ಪಿಜಿಗಳಿಗೆ ಶುಕ್ರವಾರ ರಾತ್ರಿಯಿಂದಲೇ ಚೆನ್ನಮ್ಮ ಪಡೆ ಸಿಬ್ಬಂದಿ ತೆರಳಿ ಅಹಿತಕರ ಘಟನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಕೆಲ ಪಿಜಿಗಳಿಗೆ ಶನಿವಾರ ರಾತ್ರಿ ತಾವು ಸಹ ಖುದ್ದು ತೆರಳಿ ಸುರಕ್ಷತೆ ಪರಿಶೀಲಿಸುತ್ತೇನೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದರು.