ಚೆನ್ನಮ್ಮಳ ಧೈರ್ಯ, ಸಾಹಸ ಸರ್ವ ಕಾಲಕ್ಕೂ ಮಾದರಿ

| Published : Nov 04 2024, 12:16 AM IST

ಸಾರಾಂಶ

ಚನ್ನಮ್ಮಳ ಜಯಂತಿಯನ್ನು ಸರ್ವ ಸಮುದಾಯದವರು ಕೂಡಿಕೊಂಡು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ

ಗದಗ: ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹೊತ್ತಿಸಿದ ಕಿತ್ತೂರು ಚೆನ್ನಮ್ಮಳ ಧೈರ್ಯ ಸಾಹಸ ಸರ್ವ ಕಾಲಕ್ಕೂ ಮಾದರಿಯಾಗಿದೆ ಎಂದು ಪಂಚಮಸಾಲಿ‌ ಸಮಾಜ ಮುಖಂಡ, ಉದ್ದಿಮೆದಾರ ವಿಜಯಕುಮಾರ ಗಡ್ಡಿ ಹೇಳಿದರು.

ಅವರು ಭಾನುವಾರ ಬೆಳಗ್ಗೆ ಕೇಶವ ಪಾರ್ಕ್‌ನ ಅಷ್ಟಭುಜ ಈಶ್ವರ ದೇವಸ್ಥಾನ ಆವರಣದಲ್ಲಿ ಕೇಶವ ಪಾರ್ಕ್‌ ಬಡಾವಣೆ, ಪುಟ್ಟರಾಜ ನಗರ ಭಾಗ 1 & 2 ನೇ ಹಂತದ ಬಡಾವಣೆಯ ಸರ್ವ ಸಮುದಾಯದ ವತಿಯಿಂದ ಆಯೋಜಿಸಲಾಗಿದ್ದ ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮಳ 246 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಿತ್ತೂರ ಚೆನ್ನಮ್ಮ ತೋರಿದ ಧೈರ್ಯ ಸಾಹಸಗಳು ಮತ್ತು ನಾಡಿನ ಅಭಿಮಾನವಾಗಿದ್ದು, ನಮ್ಮೆಲ್ಲರ ಮನ ಮನೆಗಳಲ್ಲಿ ಹಾಸು ಹೊಕ್ಕಾಗಬೇಕು.ಅವರು ತೋರಿದ ದಿಟ್ಟತನದ ಹೋರಾಟ ನಮ್ಮೆಲ್ಲರಿಗೂ ಮಾದರಿಯಾಗಬೇಕು, ಇಂತಹವರ ದಿನಾಚರಣೆ ಆಚರಿಸುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪುಟ್ಟರಾಜರ ‌ನಗರ 2 ನೇ ಹಂತದ ಅಧ್ಯಕ್ಷ ಶಿವಕುಮಾರ ಕುಷ್ಟಗಿ ಮಾತನಾಡಿ, ಚನ್ನಮ್ಮಳ ಜಯಂತಿಯನ್ನು ಸರ್ವ ಸಮುದಾಯದವರು ಕೂಡಿಕೊಂಡು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.ಇಂತಹ ಆಚರಣೆಗಳು ಸಮಸಮಾಜ ಕಟ್ಟುವಲ್ಲಿ ಅತ್ಯಂತ ಕ್ರಾಂತಿಕಾರಕ ದಿಟ್ಟ ಹೆಜ್ಜೆ ಇಡಲು ಸಹಕಾರಿಯಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಆರ್.ಪಾಟೀಲ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉದ್ದಿಮೆದಾರ ಅಶೋಕ ಸಂಕಣ್ಣವರ ಮುಂತಾದವರು ಚೆನ್ನಮ್ಮ ಕುರಿತು ಮಾತನಾಡಿದರು. ಸಿದ್ಧಗಂಗಾಶ್ರೀ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಿ.ಎಸ್.ಹಿರೇಮಠ, ಪಂಚಮಸಾಲಿ ಯುವ ಘಟಕದ ಅಯ್ಯಪ್ಪ ಅಂಗಡಿ, ಕೊಪ್ಪಳ ಸರ್ಕಾರಿ ಡಿಪ್ಲೋಮಾ ಕಾಲೇಜಿನ‌ ಎಚ್ಓಡಿ ಅನುಪಮಾ ಹೊಸಮನಿ ಮುಂತಾದವರು ವೇದಿಕೆಯಲ್ಲಿ ಇದ್ದರು. 3 ಬಡಾವಣೆಯ ಗುರುಹಿರಿಯರು, ತಾಯಂದಿರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದು ಪಾಟೀಲ, ನಿವೃತ್ತ ಸೈನಿಕ ಎಸ್.ಬಿ‌. ಮೇಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶರಣಪ್ಪ ಪಲ್ಲೇದ, ಉಮೇಶ ಮುಳ್ಳಾಳ, ಪ್ರಭು ಬಳ್ಳಾರಿ, ಅಶೋಕ ಪಾಟೀಲ, ಪ್ರಕಾಶ ಹೊಸೂರ, ರಾಜೇಂದ್ರ ನರೇಗಲ್, ಪ್ರಕಾಶ ಹಡಗಲಿ, ರಾಜೇಂದ್ರ ನರೇಗಲ್ಲ, ಎಸ್.ಎನ್.ಮಾಳೆಕೊಪ್ಪ, ಕೆ.ಎಸ್. ಮೊಕಾಶಿ, ಈಶ್ವರಗೌಡ ಹುಡೇದ, ಮಲ್ಲು ಪಾಟೀಲ, ಜಿ.ಬಿ. ನಿಡಗುಂದಿ, ಸಿ.ಬಿ. ಬಳ್ಳಾರಿ, ಸೋಮು ಪವಾಡಶೆಟ್ಟರ್‌, ನಾಗರಾಜ ಶಿರೂರ, ಬಸಯ್ಯ ರುದ್ರಾಪೂರಮಠ ಹಾಗೂ ನಾಲ್ಕು ಬಡಾವಣೆಯ ನೂರಾರು ಮಹಿಳೆಯರು ಭಾಗವಹಿಸಿದ್ದರು.