ಸಾರಾಂಶ
ಸಂಡೂರು: ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಚೆನ್ನಮ್ಮ ಹೋರಾಡಿ ಗೆದ್ದು, ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿಯಾಗಿದ್ದಾಳೆ ಎಂದು ಪಂಚಮಸಾಲಿ ಸಂಘದ ಜಿಲ್ಲಾಧ್ಯಕ್ಷ ಬಪ್ಪಕಾನ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ 201ನೇ ವಿಜಯೋತ್ಸವವನ್ನು ಉದ್ದೇಶಿಸಿ ಮಾತನಾಡಿದರು.ಚೆನ್ನಮ್ಮಳ ಹೋರಾಟದ ಪ್ರಭಾವದಿಂದಲೇ ಕಿತ್ತೂರು ಪ್ರಖ್ಯಾತವಾಗಲು ಕಾರಣ. ಅಂತಹ ವೀರವನಿತೆ ನಮ್ಮ ಸಮಾಜದ ಹೆಮ್ಮೆಯಾಗಿದ್ದಾಳೆ. ಅವರ ಅದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸಂಘದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಪಿ.ರವಿಕುಮಾರ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮನವರು ಎಳೆ ವಯಸ್ಸಿನಲ್ಲಿಯೇ ಕುದುರೆ ಸವಾರಿ ಹಾಗೂ ಬಿಲ್ಲು ವಿದ್ಯೆಗಳನ್ನು ಕರಗತ ಮಾಡಿಕೊಂಡು ಕಿತ್ತೂರಿನ ಉಳುವಿಗಾಗಿ ಹೋರಾಟ ಮಾಡಿದವರಲ್ಲಿ ಪ್ರಮುಖರು, ಇಂದು ನಾವು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ರಂಗದಲ್ಲಿ ಉತ್ತಮ ಸ್ಥಾನ ಪಡೆಯಬೇಕೆಂದರೆ ನಮಗೆ 2ಎ ಮೀಸಲಾತಿಯನ್ನು ಕೊಡುವ ಮೂಲಕ ಸರ್ಕಾರ ಮೇಲೆತ್ತಬೇಕು ಎಂದರು.ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷ ರಮೇಶ್ ಗಡಾದ ಮಾತನಾಡಿ, ಕನ್ನಡ ನಾಡಿನ ಹೆಮ್ಮೆಯ ಪುತ್ರಿ, ಸ್ವಾತಂತ್ರ್ಯ ಚಳವಳಿಯ ಮೊದಲ ಹೋರಾಟಗಾರ್ತಿ. ಬ್ರಿಟಿಷರನ್ನು ಸೋಲಿಸುವ ಮೂಲಕ ಇಡೀ ಕಿತ್ತೂರನ್ನು ಕಟ್ಟಿದ ಮಹಾನ್ ಮಹಿಳೆ ರಾಣಿ ಚೆನ್ನಮ್ಮ, ಅವರ ಧೈರ್ಯ, ಸ್ಥೈರ್ಯ, ಎಲ್ಲ ಸಮಾಜದೊಂದಿಗೆ ಸಾಧಿಸಿದ ಏಕತೆ ಇಂದಿಗೂ ಮಾದರಿಯಾಗಿದೆ. ಇಡೀ ಇತಿಹಾಸದಲ್ಲಿಯೇ ತನ್ನದೇ ಆದ ಛಾಪು ಮೂಡಿಸಿದ ಮಹಿಳೆ ರಾಣಿ ಚೆನ್ನಮ್ಮ. ನಾವೆಲ್ಲರೂ ಅವರ ವಂಶಸ್ಥರು ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.
ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿದ್ದಣ್ಣ ಯಳವಾರ್ ಮಾತನಾಡಿದರು. ಉಪತಹಶೀಲ್ದಾರ್ ಸುಧಾ ಅರಮನೆ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರ ಕೆ.ಎಂ. ಶಿವಕುಮಾರ್, ಶಿವಕುಮಾರ್, ಸಿಬ್ಬಂದಿ, ಪಂಚಮಸಾಲಿ ಸಂಘದ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅರುಂಧತಿ, ಮುಖಂಡರಾದ ಬಸಟ್ಟಿ ಕುಮಾರಸ್ವಾಮಿ, ಉಳ್ಳಿ ಸುಬ್ಬಯ್ಯ, ಮೂಲಿಮನಿ ಸೋಮಣ್ಣ, ಬಾಗ್ಯಮ್ಮ, ಅನುಪಮಾ, ಬಸವರಾಜ ಕೊಟ್ಟಗಿ, ಉಗ್ರಾಣದ ವಿಶಾಲಾಕ್ಷಿ ಕುಮಾರಸ್ವಾಮಿ ಅಲ್ಲದೇ ಹಲವಾರು ಅಕ್ಕನ ಬಳಗದ ಸದಸ್ಯರು, ತಾಲೂಕಿನ ಸುಶೀಲಾನಗರ, ಜೈಸಿಂಗ್‌ಪುರ, ತಾರಾನಗರ, ತಾಳೂರು, ಬಂಡ್ರಿ, ಚೋರನೂರು, ಇತರ ಗ್ರಾಮಗಳಿಂದ ಅಗಮಿಸಿದ ಸಮಾಜ ಬಾಂಧವರು ಇದ್ದರು. ಪಂಚಮಸಾಲಿ ಸಂಘದ ಕಾರ್ಯದರ್ಶಿ ಬಸವರಾಜ ಬಣಕಾರ ಸ್ವಾಗತಿಸಿ, ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))