ಬ್ರಿಟಿಷರ ವಿರುದ್ಧ ಹೋರಾಡಿ, ಬ್ರಿಟಿಷರಿಗೆ ನಡುಕ ಹುಟ್ಟಿಸಿ ನಮಗೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ದೇಶದ ಪ್ರಪ್ರಥಮ ಮಹಿಳೆ ಎಂದರೆ ನಮ್ಮ ಪಂಚಮಸಾಲಿ ಸಮಾಜದ ವೀರರಾಣಿ ಕಿತ್ತೂರು ಚನ್ನಮ್ಮ ಎಂದು ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಚಾರ್ಯ ಎಂ.ಎಸ್. ದೇವರಾಜ ತಿಳಿಸಿದ್ದಾರೆ.
- ವೀರರಾಣಿ ಕಿತ್ತೂರು ಚನ್ನಮ್ಮ 202ನೇ ವಿಜಯೋತ್ಸವದಲ್ಲಿ ಎಂ.ಎಸ್.ದೇವರಾಜ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಬ್ರಿಟಿಷರ ವಿರುದ್ಧ ಹೋರಾಡಿ, ಬ್ರಿಟಿಷರಿಗೆ ನಡುಕ ಹುಟ್ಟಿಸಿ ನಮಗೆ ಸ್ವಾತಂತ್ರ್ಯ ತಂದು ಕೊಡಲು ಹೋರಾಡಿದ ದೇಶದ ಪ್ರಪ್ರಥಮ ಮಹಿಳೆ ಎಂದರೆ ನಮ್ಮ ಪಂಚಮಸಾಲಿ ಸಮಾಜದ ವೀರರಾಣಿ ಕಿತ್ತೂರು ಚನ್ನಮ್ಮ ಎಂದು ಸರ್ಕಾರಿ ಪಾಲಿಟೆಕ್ನಿಕ್ ನಿವೃತ್ತ ಪ್ರಾಚಾರ್ಯ ಎಂ.ಎಸ್. ದೇವರಾಜ ತಿಳಿಸಿದರು.
ನಗರದ ಅರುಣಾ ಚಿತ್ರಮಂದಿರ ಸಮೀಪ ಇರುವ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ಆಯೋಜಿಸಿದ ಕಿತ್ತೂರು ರಾಣಿ ಚನ್ನಮ್ಮನ 202ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಧೀರ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮ ಅವರ ಸಾಹಸವನ್ನು ನಾವು ನೆನಪಿಸಿಕೊಳ್ಳಬೇಕು. ಅಂದು ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ, ತನ್ನ ಪ್ರಾಣವನ್ನೂ ಲೆಕ್ಕಿಸದೇ ಹೋರಾಟ ಮಾಡಿದರು. ಬ್ರಿಟಿಷರಿಗೆ ಯಾವುದೇ ಕಪ್ಪ ಕೊಡದೇ ತನ್ನ ಧೈರ್ಯ, ಸಾಹಸವನ್ನು ತೋರ್ಪಡಿಸಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಮ್ಮ ಸಮಾಜ ಬಾಂಧವರು ಬಹಳ ಸಂತೋಷ, ಸಂಭ್ರಮದಿಂದ ಈ ವಿಜಯೋತ್ಸವ ಆಚರಿಸೋಣ ಎಂದರು.
ಪಂಚಮಸಾಲಿ ಸಮಾಜದ ನೌಕರರ ಘಟಕದ ಸಿದ್ದಲಿಂಗಪ್ಪ ಮಾತನಾಡಿ, ನಮ್ಮ ಸಮಾಜದಿಂದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಪಂಚಮಸಾಲಿ ಸಮಾಜದ ವತಿಯಿಂದ ಇದೇ ಅ.24ರ ಸಂಜೆ ಪಂಚಮಸಾಲಿ ಸಮಾಜದ ಕಚೇರಿ ಸಭಾಂಗಣದಲ್ಲಿ ಅತ್ಯುತ್ತಮ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಮಾಜ ಬಾಂಧವರು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಕಿತ್ತೂರು ರಾಣಿ ಚನ್ನಮ್ಮನವರ ನಾಮಫಲಕ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮಂಜುನಾಥ ಪುರವಂತರ, ಶ್ರೀಧರ ಸಣ್ಣಪ್ಪನವರ್, ದೊಡ್ಡಪ್ಪ, ರವಿಕುಮಾರ ಪೂಜಾರ, ಸ್ವರೂಪ ಅಂಗಡಿ, ಸುರೇಶ ಮಹೇಶಪ್ಪ ಮಾಸೂರು, ವೀಣಾ ಬೆಳ್ಳೂಡಿ, ಮೀನಾ ಅಣಪೂರ, ಪಾರ್ವತಿ ಮತ್ತಿಹಳ್ಳಿ, ಪತ್ರಿ ರಾಜಣ್ಣ, ವಕೀಲ ಬಸವರಾಜ ಉಚ್ಚಂಗಿದುರ್ಗ, ವಾಣಿ ಶಿವಣ್ಣ, ಮಲ್ಲಿಕಾರ್ಜುನ ಕಾಶಿಪುರ, ನಂದೀಶ ಬಳ್ಳಾರಿ, ರಮೇಶ, ಈರಣ್ಣ, ಶಕುಂತಲ, ಸೇರಿದಂತೆ ಸಮಾಜದ ಜಿಲ್ಲಾ, ನಗರ, ನೌಕರ, ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.- - -
-23ಕೆಡಿವಿಜಿ36:ದಾವಣಗೆರೆಯಲ್ಲಿ ಶುಕ್ರವಾರ ನಡೆದ ಕಿತ್ತೂರು ರಾಣಿ ಚನ್ನಮ್ಮನ ಅವರ 202ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮವನ್ನು ಬಿ.ಸಿ.ಉಮಾಪತಿ ಕಿತ್ತೂರು ರಾಣಿ ಚನ್ನಮ್ಮನವರ ನಾಮಫಲಕ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.