ಬ್ರಿಟಿಷರ ಕಂದಾಯ ನೀತಿ ವಿರೋಧಿಸಿ ಅವರ ಆಡಳಿತಕ್ಕೆ ಸವಾಲೆಸೆದ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾಳೆ.
ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, ಬ್ರಿಟಿಷರನ್ನು ದೇಶದಿಂದ ಹೊರ ಹಾಕಬೇಕೆಂಬ ವೀರರಾಣಿ ಕಿತ್ತೂರು ಚೆನ್ನಮ್ಮಳ ಸಂಕಲ್ಪಕ್ಕೆ ಅಂದಿನ ಇತರರು ಬೆಂಬಲವಾಗಿ ನಿಂತಿದ್ದರೆ ಭಾರತದ ಇತಿಹಾಸದ ಚಿತ್ರಣವೇ ಬದಲಾಗುತ್ತಿತ್ತು. ಬ್ರಿಟಿಷರ ಕಂದಾಯ ನೀತಿ ವಿರೋಧಿಸಿ ಅವರ ಆಡಳಿತಕ್ಕೆ ಸವಾಲೆಸೆದ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾಳೆ. ಆಕೆಯ ಧೈರ್ಯ, ಸಾಹಸ, ಹೋರಾಟದ ಮನೋಭಾವ ಮತ್ತು ಅಚಲ ದೇಶಪ್ರೇಮ ಇಂದಿನ ಯುವಜನತೆಗೆ ಸ್ಫೂರ್ತಿಯ ಸೆಲೆಯಾಗಿವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮನೋಭಾವ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಜೂಗಲ ಮಂಜುನಾಯಕ, ಪ್ರಭಾರ ಉಪತಹಸೀಲ್ದಾರ್ ಎಸ್.ಡಿ. ರಮೇಶ, ಶಿರಸ್ತೇದಾರ್ ಜಿ.ಪಂಪಾಪತಿ, ಜಿ. ಅಮರೇಗೌಡ, ಕನಕಗಿರಿ ರೇಣುಕಪ್ಪ, ನೀರಗಂಟಿ ವೀರೇಶ, ವಾಲ್ಮೀಕಿ ಈರಣ್ಣ, ಟಿ.ಎಚ್.ಎಂ. ರಾಜಕುಮಾರ, ಆಹಾರ ನಿರೀಕ್ಷಕ ಬಿ. ವಿರೂಪಾಕ್ಷಗೌಡ, ಕೃಷಿ ಅಧಿಕಾರಿ ಟಿ. ಜ್ಯೋತಿ, ಮಾಲತೇಶ ದೇಶಪಾಂಡೆ, ರಾಧಾ, ವೈಷ್ಣವಿ, ವನಿತಾ, ಸಂಗೀತಾ, ಎಸ್. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.