ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಚೆನ್ನಪ್ಪಗೌಡ ಅವಿರೋಧ ಆಯ್ಕೆ

| Published : Jul 11 2024, 01:35 AM IST

ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ಚೆನ್ನಪ್ಪಗೌಡ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಗರದ ಹಿರಿಯ ವರ್ತಕ ಚನ್ನಪ್ಪಗೌಡ ಮೋಸಂಬಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

- ವೀರಶೈವ ಮಹಾಸಭಾ ಸುರಪುರ ತಾಲೂಕು ಘಟಕಕ್ಕೆ ಪ್ರಕಾಶ ಕನ್ನೆಳ್ಳಿ ಅಧ್ಯಕ್ಷರಾಗಿ ಆಯ್ಕೆ

------

ಕನ್ನಡಪ್ರಭ ವಾರ್ತೆ ಯಾದಗಿರಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಗರದ ಹಿರಿಯ ವರ್ತಕ ಚನ್ನಪ್ಪಗೌಡ ಮೋಸಂಬಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಹಾಸಭೆಯ ಜಿಲ್ಲಾ ಘಟಕದ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳೆಲ್ಲರೂ ನಾಮಪತ್ರ ಹಿಂಪಡೆದಿದ್ದರಿಂದ ಚುನಾವಣಾಧಿಕಾರಿ ದೊಡ್ಡಯ್ಯ ಸ್ವಾಮಿ ಬೆಳಗುಂದಿ, ಶಾಸಕರು ಹಾಗೂ ಸಮಾಜದ ಗಣ್ಯರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯ ಸದಸ್ಯರು ಚೆನ್ನಪ್ಪಗೌಡ ಮೋಸಂಬಿ ಅವರು ಜಿಲ್ಲೆಯ ಮಹಾಸಭಾದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಅಧಿಕೃತವಾಗಿ ಘೋಷಿಸಿದರು.

ಅಧ್ಯಕ್ಷರ ಜೊತೆಗೆ ಕಾರ್ಯಕಾರಿ ಸಮಿತಿಗೆ ಇಪ್ಪತ್ತು ಜನ ಹಾಗೂ ಮಹಿಳಾ ಘಟಕಕ್ಕೆ ಮೂವರು ಸದಸ್ಯರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

(ಬಾಕ್ಸ್‌)

- ಸುರಪುರ : ತಾಲೂಕು ಘಟಕಕ್ಕೆ ಪ್ರಕಾಶ ಕನ್ನೆಳ್ಳಿ ಅಧ್ಯಕ್ಷರಾಗಿ ಆಯ್ಕೆ

ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರಕಾಶ ಶರಣಬಸವ ಅಂಗಡಿ ಕನ್ನೆಳ್ಳಿ ಅವಿರೋಧವಾಗಿ ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚನ್ನಬಸವ (ಚನ್ನಪ್ಪಗೌಡ ಎ. ಜಕ್ಕನಗೌಡ), ಜಗದೀಶ ಪಾಟೀಲ್, ಪ್ರಕಾಶ, ಮಲ್ಲಣ್ಣ, ಸಿದ್ದಣ್ಣ, ಮಲ್ಲಿಕಾರ್ಜುನಯ್ಯ, ರೇವಣಸಿದ್ದಪ್ಪ ರೇವಡಿ, ದೇವಿಂದ್ರಪ್ಪಗೌಡ, ದ್ಯಾವಪ್ಪಗೌಡ, ಶರಣಯ್ಯ ಸ್ವಾಮಿ, ಅಮರಯ್ಯ ಸ್ವಾಮಿ, ಶಿವನಗೌಡ, ಮಹಿಳಾ ಸದಸ್ಯರಾಗಿ ನೀಲಾಂಬಿಕ, ಶ್ರೀದೇವಿ, ಸುನೀತಾ ಆಯ್ಕೆಯಾದರು.

ಸಹಾಯಕ ಚುನಾವಣಾಧಿಕಾರಿಯಾಗಿ ಶಿವಕುಮಾರ ಮಸ್ಕಿ ಕಾರ್ಯ ನಿರ್ವಹಿಸಿದರು. ಡಾ. ಸುರೇಶ ಸಜ್ಜನ್, ಸುಗೂರೇಶ ವಾರದ್, ಶಿವಶರಣಪ್ಪ ಯಡಗಿನಾಳ, ಬಸನಗೌಡ ದೇವಾಪುರ, ವೀರೇಶ ನಿಷ್ಠಿ ದೇಶಮುಖ್, ವೀರೇಶ ಪಂಚಾಂಗಮಠ, ಸಿದ್ದಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣಪ್ಪ ಕಲ್ಕೇರಿ ಸೇರಿದಂತೆ ಇತರರಿದ್ದರು.

----

10ವೈಡಿಆರ್3

ಚೆನ್ನಪ್ಪಗೌಡ ಮೋಸಂಬಿ, ವೀರಶೈವ ಮಹಾಸಭಾ ಯಾದಗಿರಿ ಜಿಲ್ಲಾಧ್ಯಕ್ಷರು.

----

10ವೈಡಿಆರ್4

ಸುರಪುರ ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕಕ್ಕೆ ಅಧ್ಯಕ್ಷರು ಹಾಗೂ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು.