ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ ಆಯೋಜಿಸಲಾಗಿತ್ತು. ಕಾವೇರಿ, ಗಂಗಾ ಮತ್ತು ಯಮುನಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ ಗಳಿಸಿತು. ಕಾವೇರಿ ತಂಡ ದ್ವಿತೀಯ, ಯಮುನಾ ತಂಡ ದ್ವಿತೀಯ ಸ್ಥಾನ ಗಳಿಸಿತು.
ನಾಪೋಕ್ಲು: ಚೇರಂಬಾಣೆಯ ಅರುಣ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪೂಕಳಂ ಸ್ಪರ್ಧೆ ಆಯೋಜಿಸಲಾಗಿತ್ತು. ಕಾವೇರಿ, ಗಂಗಾ ಮತ್ತು ಯಮುನಾ ತಂಡಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗಂಗಾ ತಂಡ ಪ್ರಥಮ ಸ್ಥಾನ ಗಳಿಸಿತು. ಕಾವೇರಿ ತಂಡ ದ್ವಿತೀಯ, ಯಮುನಾ ತಂಡ ದ್ವಿತೀಯ ಸ್ಥಾನ ಗಳಿಸಿತು.
ತುಂಬೆ ಹೂ, ಚೆಂಡುಹೂ, ಮಲ್ಲಿಗೆ, ಕಾಕಡ, ಕನಕಾಂಬರ, ಆಕರ್ಷಕ ಎಲೆಗಳು ಸೇರಿದಂತೆ ಬಗೆಬಗೆಯ ಹೂಗಳಿಂದ ಪೂಕಳಂ ರಚಿಸಲಾಗಿತ್ತು. ಹಳದಿ, ಕೇಸರಿ, ಬಿಳಿ ಬಣ್ಣಗಳಿಗೆ ಪ್ರಶಸ್ತಿ ನೀಡಲಾಗಿತ್ತು. ನವಿಲು, ದೋಣಿ, ಮಹಾಬಲಿ ಮುಖದ ವಿನ್ಯಾಸಗಳೊಂದಿಗೆ ಹಾಗೂ ತಂಡದ ಹೆಸರುಗಳನ್ನು ಕೂಡ ಪುಷ್ಪಗಳಿಂದ ರಚಿಸಲಾಯಿತು.