ಬೌದ್ಧಿಕ ಸಾಮರ್ಥ್ಯಕ್ಕೆ ಚೆಸ್ ಪೂರಕ

| Published : May 26 2024, 01:31 AM IST

ಸಾರಾಂಶ

ಹೊಸಕೋಟೆ: ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸುಧಾರಿಸಲು ಚೆಸ್ ಕ್ರೀಡೆ ಸಾಕಷ್ಟು ಪೂರಕ ಎಂದು ಶೃಂಗಾ ಶಾಲೆ ಪ್ರಾಂಶುಪಾಲೆ ಅನುರೆಡ್ಡಿ ತಿಳಿಸಿದರು.

ಹೊಸಕೋಟೆ: ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಸುಧಾರಿಸಲು ಚೆಸ್ ಕ್ರೀಡೆ ಸಾಕಷ್ಟು ಪೂರಕ ಎಂದು ಶೃಂಗಾ ಶಾಲೆ ಪ್ರಾಂಶುಪಾಲೆ ಅನುರೆಡ್ಡಿ ತಿಳಿಸಿದರು.

ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದೊಡ್ಡದುನ್ನಸಂದ್ರದ ಶೃಂಗಾ ಇಂಟರ್‌ ನ್ಯಾಷನಲ್ ಶಾಲೆ ಆವರಣದಲ್ಲಿ ಆಯೋಜಿಸಿದ್ದ ರಾಪಿಡ್ ಹಾಗೂ ಬ್ಲಿಟ್ಜ್ ಚೆಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಚೆಸ್ ಪ್ರತಿಯೊಬ್ಬರಿಗೂ ಕೈಗೆಟಕುವ ಆಟವಾಗಿದ್ದು ತೀಕ್ಷ್ಣ ಬುದ್ಧಮತ್ತೆಯ ಜೊತೆಗೆ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಚೆಸ್ ಮಾಂತ್ರಿಕ ಎಂದು ಹೆಸರು ಪಡೆದಿದ್ದ ವಿಶ್ವನಾಥನ್ ಆನಂದ್ ಅವರಿಂದ ದೇಶ ವಿದೇಶಗಳಲ್ಲಿ ಭಾರತೀಯರು ಚೆಸ್ ಪಂದ್ಯಾವಳಿಯಲ್ಲಿ ವಿಜಯಪತಾಕೆ ಹಾರಿಸಿ ಸಂಭ್ರಮಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಹಾಗೂ ವಯಸ್ಕರು ತಮ್ಮ ನಿತ್ಯ ಜೀವನದ ಜೊತೆ ಜೊತೆಗೆ ಚೆಸ್ ಕ್ರೀಡೆಯತ್ತ ಆಸಕ್ತರಾಗುವುದು ಒಳಿತು ಎಂದು ಹೇಳಿದರು.

ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷ ಎ.ಚಿದಾನಂದ ಮಾತನಾಡಿ, ಎಐಸಿಎಫ್, ಎಫ್‌ಐಡಿಇ, ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ಹಾಗೂ ಶೃಂಗಾ ಶಾಲೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಚೆಸ್ ಚಾಂಪಿಯನ್ ಶಿಫ್ ಆಯೋಜನೆ ಮಾಡಲಾಗಿದೆ. ರಾಜ್ಯದ 25 ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚಿನ ಚೆಸ್ ಪಟುಗಳು ಆಗಮಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದ ರಾಪಿಡ್ ಸ್ಪರ್ಧೆಗೆ 2 ಲಕ್ಷ ಹಾಗೂ ಬ್ಲಿಟ್ಜ್ ಸ್ಪರ್ಧೆಗೆ 50 ಸಾವಿರ ನಗದು ಬಹುಮಾನ ನೀಡಲಿದ್ದೇವೆ ಎಂದು ಹೇಳಿದರು.

ಶೃಂಗಾ ಶಾಲೆ ಕಾರ್ಯದರ್ಶಿ ಪ್ರಕಾಶ್, ಆಡಳಿತ ಮಂಡಳಿ ನಿರ್ದೇಶಕ ಶ್ರೇಯಸ್, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

(ಫೋಟೋ)

ಹೊಸಕೋಟೆ ತಾಲೂಕಿನ ದೊಡ್ಡದುನ್ನಸಂದ್ರದ ಶೃಂಗಾ ಶಾಲೆಯಲ್ಲಿ ಆಯೋಜಿಸಿದ್ದ ರಾಪಿಡ್ ಹಾಗೂ ಬ್ಲಿಟ್ಜ್ ಚೆಸ್ ಪಂದ್ಯಾವಳಿಯನ್ನು ಶೃಂಗಾ ಶಾಲೆ ಪ್ರಾಂಶುಪಾಲೆ ಅನುರೆಡ್ಡಿ, ರಾಜ್ಯಶಾಸ್ತ್ರ ಅಸೋಸಿಯೇಷನ್ ಉಪಾಧ್ಯಕ್ಷ ಚಿದಾನಂದ ಉದ್ಘಾಟಿಸಿದರು.25 ಹೆಚ್‌ಎಸ್‌ಕೆ 3

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಚೆಸ್ ಕ್ರೀಡಾಪಟುಗಳು ಚೆಸ್ ಪಂದ್ಯಾವಳಿಯಲ್ಲಿ ತೊಡಗಿರುವುದು.