ವಿಧಾನಸೌಧದಲ್ಲಿ ಚೆಸ್‌ ಹಬ್ಬ: ಶಾಸಕ ಡಾ. ಅಜಯ್‌ಸಿಂಗ್‌ ಗೆಲುವು

| Published : Jul 21 2024, 01:17 AM IST

ವಿಧಾನಸೌಧದಲ್ಲಿ ಚೆಸ್‌ ಹಬ್ಬ: ಶಾಸಕ ಡಾ. ಅಜಯ್‌ಸಿಂಗ್‌ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಸಚಿವರು, ಶಾಸಕರು, ಉಭಯ ಸದನಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಾಗಿ ನಡೆದ ವಿಧಾನ ಸೌಧ ಓಪನ್‌ ರ್ಯಾಪಿಡ್‌ ಚೆಸ್‌ ಟೂರ್ನಾಮೆಂಟ್‌- 2024 ಚದುರಂಗ ಪಂದ್ಯಾಟದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಅಂತಾರಾಷ್ಟೀಯ ಚೆಸ್‌ ದಿನಾಚರಣೆ ಹಾಗೂ ಫಿಡೆ ಶತಮಾನೋತ್ಸವ ಅಂಗವಾಗಿ ಕರ್ನಾಟಕ ವಿಧಾನ ಮಂಡಲ ಹಾಗೂ ಭಾರತ ಚೆಸ್‌ ಫೆಡರೇಷನ್‌ ಸಹಯೋಗದಲ್ಲಿ ಶನಿವಾರ ಸಚಿವರು, ಶಾಸಕರು, ಉಭಯ ಸದನಗಳ ಅಧಿಕಾರಿ ಹಾಗೂ ಸಿಬ್ಬಂದಿಗಳಿಗಾಗಿ ನಡೆದ ವಿಧಾನ ಸೌಧ ಓಪನ್‌ ರ್ಯಾಪಿಡ್‌ ಚೆಸ್‌ ಟೂರ್ನಾಮೆಂಟ್‌- 2024 ಚದುರಂಗ ಪಂದ್ಯಾಟದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರು, ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಧರ್ಮಸಿಂಗ್‌ ಅವರು ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಇಧರೊಂದಿಗೆ ಇದೇ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ನಡೆದ ಚೆಸ್‌ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡದ್ದಲ್ಲದೆ, ರೌಂಡ್ ರಾಬಿನ್‌ ಲೀಗ್‌ ಮಾದರಿಯಲ್ಲಿ ನಡೆದಂತಹ ಚದುರಂಗದ ಆಟದ ಸ್ಪರ್ಧೆಯಲ್ಲಿ ಬೆಳಗಾವಿಯ ಖಾನಾಪುರ ಶಾಸಕರಾದ ವಿಠ್ಠಲ ಸೋಮಣ್ಣ ಹಲಗೇಕರ್‌ ಇವರನ್ನು ಪರಾಭವಗೊಳಿಸಿ ಚಾಂಪಿನಯನ್‌ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ.

ಚೆಸ್‌ ಟೂರ್ನಿ 2 ವರ್ಗಗಳಾಗಿ ವಿಂಗಡಿಸಲಾಗಿತ್ತು, ಎ ಗುಂಪಿನಲ್ಲಿ ಸಚಿವರು ಹಾಗೂ ವಿಧಾನ ಸಭೆ, ವಿಧಾನ ಪರಿಷತ್‌ ಸದನ ಸದಸ್ಯರಗಾಗಿ ನಡೆಸಲಾದರೆ, ಬಿ ಗುಂಪಿನಲ್ಲಿ ಉಭಯ ಸದನಗಳ ಅಧಿಕಾರಿ, ಸಿಬ್ಬಂದಿಗೆ ಪಂದ್ಯಾಟ ಏರ್ಪಡಿಸಲಾಗಿತ್ತು.

ಇದೇ ಮೊದಲ ಬಾರಿಗೆ ವಿಶ್ವ ಚೆಸ್‌ ದಿನದಂಗವಾಗಿ ಸಭಾಧ್ಯಕ್ಷ ಯುಟಿ ಖಾದರ್‌ ಅವರ ಆಸಕ್ತಿಯಿಂದಾಗಿ ಚದುರಂಗದ ಸ್ಪರ್ಧೆ ವಿಧಾನ ಸಭೆಯ ಬಾಂಕ್ವೆಟ್‌ ಹಾಲ್‌ನಲ್ಲಿ ನಡೆಯಿತು.

ನೋಂದಣಿಯಂತೆ 5 ರಿಂದ 6 ಸುತ್ತುಗಳಲ್ಲಿ ನಡೆದ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಿಕೆ ಕಂಡು ಬಂದಿತ್ತಲ್ಲದೆ ಶಾಸಕರ ನಡುವಿನ ಸ್ಪರ್ಧೆಯಲ್ಲಿ ಶಾಸಕ ಡಾ. ಅಜಯ್‌ ಸಿಂಗ್‌ ಅತ್ಯುತ್ತಮ ಹಾಗೂ ಚಾಕಚಕ್ಯತೆಯೊಂದಿಗೆ ಚುದುರಂಗದ ಆಟದಲ್ಲಿ ತಮ್ಮ ನಡೆ, ನಿರ್ಧಾರಗಳನ್ನು ತೋರುತ್ತ ಎದುರಾಳಿಗಳನ್ನು ಪರಾಭವಗೊಳಿಸುವಲ್ಲಿ ಯಶಸ್ವಿಯಾದರು.