ಚದುರಂಗ ಎಂಬ ಹೆಸರಿನಿಂದ ಕರೆಯಲ್ಪಡುವ ಚೆಸ್‌ಕ್ರೀಡೆ ಭಾರತದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ.

ಸಂಡೂರು: ಚೆಸ್‌ ಕ್ರೀಡೆ ಒಂದು ಕಲೆ. ಈ ಆಟ ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಕರಿಸಿ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೇರ್‌ ಅಭಿಪ್ರಾಯಪಟ್ಟರು.

ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಶನಿವಾರ ಬೀದರ್‌ ಚೆಸ್ ಅಸೋಸಿಯೇಷನ್, ಕೊಪ್ಪಳದ ವಿಶ್ವಚೆಸ್ ಅಸೋಸಿಯೇಷನ್, ಪ್ರಮೋದ್‌ ಚೆಸ್‌ ಅಕಾಡೆಮಿ, ಯಾದವ್ ಸ್ಕೂಲ್‌ ಆಫ್‌ ಚೆಸ್, ಬಳ್ಳಾರಿ ಜಿಲ್ಲಾಚೆಸ್ ಅಸೋಸಿಯೇಷನ್, ನ್ಯೂ ವಿಜಯನಗರ ಜಿಲ್ಲಾ ಚೆಸ್ ಅಸೋಸಿಯೇಷನ್, ಬೀದರ್ ಹಾಗೂ ಸಂಡೂರಿನ ರೋಟರಿಕ್ಲಬ್ ಹಾಗೂ ಬಿಕೆಜಿ ಗ್ಲೋಬಲ್ ಶಾಲೆಯ ಸಹಯೋಗದಲ್ಲಿ ಆರಂಭವಾದ ಎರಡು ದಿನಗಳ ಆಲ್‌ಇಂಡಿಯಾ ಓಪನ್ ಫೀಡೆರೇಟೆ ಡ್ರ‍್ಯಾಪಿಡ್‌ ಚೆಸ್‌ ಟೂರ್ನಮೆಂಟ್‌ ಉದ್ಘಾಟಿಸಿ ಮಾತನಾಡಿದರು.

ಚದುರಂಗ ಎಂಬ ಹೆಸರಿನಿಂದ ಕರೆಯಲ್ಪಡುವ ಚೆಸ್‌ಕ್ರೀಡೆ ಭಾರತದಲ್ಲಿ ಬಹಳ ಹಿಂದಿನಿಂದಲೂ ಪ್ರಚಲಿತದಲ್ಲಿದೆ. ಈ ಕ್ರೀಡೆ ಜೀವನದ ಪಾಠ ಕಲಿಸಲಿದೆಯಲ್ಲದೆ, ನಾವು ಕೈಗೊಳ್ಳುವ ನಿರ್ಧಾರ ಹೇಗಿರಬೇಕು, ಉತ್ತಮ ನಿರ್ಧಾರಗಳಿಂದಾಗುವ ಪರಿಣಾಮ ಕುರಿತು ತಿಳಿಸಿಕೊಡಲಿದೆ. ಇಲ್ಲಿನ ಚೆಸ್‌ ಕ್ರೀಡಾಕೂಟದಿಂದ ಉತ್ತಮ ಚೆಸ್ ಕ್ರೀಡಾಪಟುಗಳು ಬೆಳಕಿಗೆ ಬರುವಂತಾಗಲಿ ಎಂದು ತಿಳಿಸಿದರು.

ರೋಟರಿ ಸಂಸ್ಥೆಯ ಜಿಲ್ಲಾ ಗವರ್ನರ್ ಪಿ. ಕೇಶವರೆಡ್ಡಿ ಮಾತನಾಡಿ, ಚೆಸ್‌ ಕ್ರೀಡೆ ಬುದ್ಧಿವಂತಿಕೆ ಹಾಗೂ ತಂತ್ರ ಉಪಯೋಗಿಸಿ ಆಡುವ ಕ್ರೀಡೆಯಾಗಿದೆ. ಈ ಕ್ರೀಡೆಯಿಂದ ಕಲಿಯುವುದು ಬಹಳವಿದೆ. ಸ್ಪರ್ಧಿಗಳು ಆತ್ಮವಿಶ್ವಾಸದಿಂದ ಆಡಿ ಗೆಲುವಿಗೆ ಶ್ರಮಿಸಬೇಕು ಎಂದರು.

ಬಿಕೆಜಿ ಗ್ಲೋಬಲ್ ಶಾಲೆಯ ಟ್ರಸ್ಟಿ ಬಿ. ನಾಗನಗೌಡ ಮಾತನಾಡಿ, ಚೆಸ್‌ ಕ್ರೀಡೆ ಮಾನಸಿಕ ಹಾಗೂ ಬುದ್ಧಿಗೆ ಸಂಬಂಧಿಸಿದ ಕ್ರೀಡೆಯಾಗಿದೆ. ಈ ಕ್ರೀಡೆ ನಮ್ಮ ಮಾನಸಿಕ ಶಕ್ತಿ, ಏಕಾಗ್ರತೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕ್ರೀಡೆಯಲ್ಲಿ ಭಾಗವಹಿಸಿದ ಸ್ಪರ್ಧಿಗಳು ನಾಡಿಗೆ, ದೇಶಕ್ಕೆ ಹೆಸರು ತರುವಂತಹ ಆಟಗಾರರಾಗಿ ಬೆಳೆಯುವಂತಾಗಲಿ ಎಂದು ಶುಭ ಹಾರೈಸಿದರು.

ಕರ್ನಾಟಕ ಸ್ಟೇಟ್‌ ಚೆಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಜಿ. ಸುರೇಶ್‌ ಮಾತನಾಡಿ, ಈ ಒಂದು ಕ್ರೀಡಾಕೂಟ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲು ವೇದಿಕೆಯಾಗಲಿದೆ. ಈ ಟೂರ್ನಾಮೆಂಟ್‌ನಲ್ಲಿ ಕರ್ನಾಟಕ, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ಒಟ್ಟು ೯ ರಾಜ್ಯಗಳ ೩೨೦ ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಚೀಫ್‌ರ‍್ಬಿ ಟ್ರೇಟರ್ ಪ್ರಮೋದ್‌ರಾಜ್ ಮೋರೆ, ಡೆಪ್ಯೂಟಿರ‍್ಬಿ ಟ್ರೇಟರ್ ಪ್ರಾಣೇಶ್‌ ಯಾದವ್ ಕೆ, ರ‍್ಬಿಟ್ರೇಟರ್ ಸುರೇಶ್‌ಜೆ, ರೋಟರಿ ಸಂಸ್ಥೆಯ ವಿಜಯನಗರ ವಲಯದ ಅಸಿಸ್ಟಂಟ್ ಗವರ್ನರ್ ಕಮಲಾ ಗುಮಾಸ್ತೆ, ಬೀದರ್‌ಚೆಸ್ ಅಸೋಸಿಯೇಷನ್ ಅಧ್ಯಕ್ಷ ನಿತಿನ್‌ಕರ್ಪೂರ್, ಕಾರ್ಯದರ್ಶಿ ಸತೀಶ್‌ಕುಮಾರ್ ಸ್ವಾಮಿ, ಖಜಾಂಚಿ ಸಿದ್ದರಾಮೇಶ್ವರ್ ಶೆಟ್ಕರ್, ಕೊಪ್ಪಳದ ವಿಶ್ವ ಚೆಸ್‌ ಅಕಾಡೆಮಿಯ ಅಧ್ಯಕ್ಷ ರಾಮ್‌ಸ್ವರೂಪ್‌ ಕಾಂಬ್ಳೆಕರ್, ಕಾರ್ಯದರ್ಶಿ ಅಂಬುಜಾ ಕಾಂಬ್ಳೇಕರ್, ಬಳ್ಳಾರಿ ಜಿಲ್ಲಾಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಬಿ.ಎಚ್.ಎಂ. ವಿರುಪಾಕ್ಷಯ್ಯ, ಕಾರ್ಯದರ್ಶಿ ಕೆ. ನಾಗರಾಜ, ವಿಜಯನಗರ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಗಣೇಶ್, ಸಂಡೂರು ರೋಟರಿ ಕ್ಲಬ್‌ ಅಧ್ಯಕ್ಷ ಎಚ್.ಎಂ. ಶಿವಮೂರ್ತಿ, ಕಾರ್ಯದರ್ಶಿ ಬಿ. ಸೋಮನಗೌಡ, ಬಿಕೆಜಿ ಗ್ಲೋಬಲ್ ಶಾಲೆಯ ಪ್ರಾಚಾರ್ಯ ಕೆ.ವಿ. ಮೋಹನ್‌ರಾವ್, ಉಪ ಪ್ರಾಚಾರ್ಯ ಡಾ. ಕ್ರಾಂತಿಕುಮಾರ್, ಸ್ಪರ್ಧಿಗಳ ಪಾಲಕರು, ಕೋಚ್‌ ಉಪಸ್ಥಿತರಿದ್ದರು. ಟೂರ್ನಾಮೆಂಟ್‌ ಅನ್ನು ಬಿಕೆಜಿಗ್ಲೋಬಲ್ ಶಾಲೆಯ ಅಧ್ಯಕ್ಷ ಬಿ. ರುದ್ರಗೌಡ, ಟ್ರಸ್ಟಿಗಳಾದ ಬಿ. ನಾಗನಗೌಡ ಹಾಗೂ ವೀಣಾ ಪಾಟೀಲ್‌ ಪ್ರಾಯೋಜಿಸಿದ್ದಾರೆ.