ಚೆಸ್, ಕ್ರಿಕೆಟ್ ಟೂರ್ನಾಮೆಂಟ್ ಏರ್ಪಡಿಸುವ ಮೂಲಕ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ. ಚೆಸ್ ಕ್ರೀಡೆಯ ಮೂಲಕ ನಾವು ನಮ್ಮ ತಪ್ಪು ಹೆಜ್ಜೆಗಳಿಂದ ಹೊಸ ಪಾಠ ಕಲಿಯುತ್ತಾ ಹೋಗುತ್ತೇವೆ.
ಸಂಡೂರು: ಪಟ್ಟಣದ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ನಡೆದ ಆಲ್ ಇಂಡಿಯಾ ಓಪನ್ ಫೀಡೆರೇಟೆಡ್ ಚೆಸ್ ಟೂರ್ನಾಮೆಂಟ್‌ನ ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಭಾನುವಾರ ಜರುಗಿತು.
ವಿಜೇತ ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಬಿಕೆಜಿಗ್ಲೋಬಲ್ ಶಾಲೆಯ ಅಧ್ಯಕ್ಷ ಬಿ.ರುದ್ರಗೌಡ, ಚೆಸ್ ಭಾರತ ದೇಶದಲ್ಲಿ ಹುಟ್ಟಿ ಬೆಳೆದ ಕ್ರೀಡೆಯಾಗಿದೆ. ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಚೆಸ್ ಆಟ ನಮ್ಮಲ್ಲಿ ಏಕಾಗ್ರತೆ ಹಾಗೂ ಭವಿಷ್ಯದ ಜೀವನದಲ್ಲಿ ನಾವು ಯಾವ ರೀತಿ ತೀರ್ಮಾನ ತೆಗೆದುಕೊಳ್ಳಬೇಕೆಂಬ ಪಾಠ ಕಲಿಸುತ್ತದೆ. ಚೆಸ್ ಆಟಗಾರರಿಗೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ. ಈ ಟೂರ್ನಾಮೆಂಟ್‌ನಲ್ಲಿ ಸೋತವರು ಧೈರ್ಯಗೆಡುವ ಅಗತ್ಯವಿಲ್ಲ. ಈಗ ಗೆದ್ದವರು ಒಂದು ಸಂದರ್ಭದಲ್ಲಿ ಸೋತು ಈಗ ಗೆದ್ದಿರುವವರು. ಸೋಲನ್ನು ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಬೇಕು.ಚೆಸ್ ಆಟಗಾರರು ಉತ್ತಮ ಸಾಧನೆಯೊಂದಿಗೆ ನಾಡಿನ ಕೀರ್ತಿ ಹೆಚ್ಚಿಸಲು ಶ್ರಮಿಸಬೇಕು ಎಂದು ತಿಳಿಸಿದರು.ರೋಟರಿ ಸಂಸ್ಥೆಯ ಗವರ್ನರ್ ಎಲೆಕ್ಟ್ ತ್ರಿವಿಕ್ರಮ್ ಜೋಷಿ ಮಾತನಾಡಿ, ರೋಟರಿ ಸಂಸ್ಥೆ ವ್ಯಕ್ತಿತ್ವ ರೂಪಿಸುವಂತಹ ಹಲವು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಚೆಸ್, ಕ್ರಿಕೆಟ್ ಟೂರ್ನಾಮೆಂಟ್ ಏರ್ಪಡಿಸುವ ಮೂಲಕ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿದೆ. ಚೆಸ್ ಕ್ರೀಡೆಯ ಮೂಲಕ ನಾವು ನಮ್ಮ ತಪ್ಪು ಹೆಜ್ಜೆಗಳಿಂದ ಹೊಸ ಪಾಠ ಕಲಿಯುತ್ತಾ ಹೋಗುತ್ತೇವೆ. ಈ ಆಟದಲ್ಲಿ ಬುದ್ಧಿವಂತಿಕೆ, ಕೌಶಲ್ಯ, ಏಕಾಗ್ರತೆಯ ಜತೆಗೆ ಸಮಯ ಪ್ರಜ್ಞೆ ಬಹಳ ಅಗತ್ಯವಾಗಿದೆ. ಇಂತಹ ಅಂಶ ನಮಗೆ ಮುಂದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಲಿವೆ ಎಂದರು.
ಚಾಂಪಿಯನ್ ಆಗಿ ಹೊರಹೊಮ್ಮಿದ ಗೋವಾದ ಪರಬ್ ರಿಶಿಕೇಶ್:ಗೋವಾದ ಪರಬ್ ರಿಶಿಕೇಶ್ ಮೇನ್ ಕ್ಯಾಟಗರಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಮಹಾರಾಷ್ಟ್ರದ ಬೋಸ್ಲೆ ಶ್ರೀರಾಜ್ ಹಾಗೂ ಕರ್ನಾಟಕದ ಶೇಠ್ ಪ್ರಜ್ವಲ್ ಪಿ ಕ್ರಮವಾಗಿ ಪ್ರಥಮ ಹಾಗೂ ದ್ವಿತಿಯ ರನ್ನರ್ ಅಫ್ ಪ್ರಶಸ್ತಿ ಪಡೆದುಕೊಂಡರು. ಚಾಂಪಿಯನ್‌ಗೆ ₹೨೫೦೦೦ನಗದು ಹಾಗೂ ಟ್ರೋಫಿ, ಪ್ರಥಮ ಹಾಗೂ ದ್ವಿತಿಯ ರನ್ನರ್ ಅಫ್ ಪ್ರಶಸ್ತಿ ವಿಜೇತರಿಗೆ ಕ್ರಮವಾಗಿ ₹೨೦೦೦೦ ಹಾಗೂ ₹೧೫೦೦೦ ನಗದು ಮತ್ತು ಟ್ರೋಫಿ ವಿತರಿಸಲಾಯಿತು.
ಬಿಕೆಜಿ ಗ್ಲೋಬಲ್ ಶಾಲೆಯ ಟ್ರಸ್ಟಿ ವೀಣಾ ಪಾಟೀಲ್, ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಜಿ.ಸುರೇಶ್, ಚೀಫ್‌ರ‍್ಬಿಟ್ರೇಟರ್ ಪ್ರಮೋದ್‌ರಾಜ್ ಮೋರೆ, ಡೆಪ್ಯೂಟಿ ರ‍್ಬಿಟ್ರೇಟರ್ ಪ್ರಾಣೇಶ್ ಯಾದವ್ ಕೆ, ರ‍್ಬಿಟ್ರೇಟರ್ ಸುರೇಶ್‌ಜೆ, ಬೀದರ್ ಚೆಸ್ ಅಸೋಸಿಯೇಷನ್ ಅಧ್ಯಕ್ಷ ನಿತಿನ್ ಕರ್ಪೂರ್, ಕಾರ್ಯದರ್ಶಿ ಸತೀಶ್‌ಕುಮಾರ್ ಸ್ವಾಮಿ, ಖಜಾಂಚಿ ಸಿದ್ದರಾಮೇಶ್ವರ್ ಶೆಟ್ಕರ್, ಕೊಪ್ಪಳದ ವಿಶ್ವ ಚೆಸ್ ಅಕಾಡೆಮಿಯ ಅಧ್ಯಕ್ಷ ರಾಮ್ ಸ್ವರೂಪ್ ಕಾಂಬ್ಳೆಕರ್, ಕಾರ್ಯದರ್ಶಿ ಅಂಬುಜಾ ಕಾಂಬ್ಳೇಕರ್, ಬಳ್ಳಾರಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಬಿ.ಎಚ್.ಎಂ. ವಿರುಪಾಕ್ಷಯ್ಯ, ಕಾರ್ಯದರ್ಶಿ ಕೆ. ನಾಗರಾಜ, ವಿಜಯನಗರ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಬಿ. ಗಣೇಶ್, ಸಂಡೂರು ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಂ. ಶಿವಮೂರ್ತಿ, ಕಾರ್ಯದರ್ಶಿ ಬಿ. ಸೋಮನಗೌಡ, ಬಿಕೆಜಿ ಗ್ಲೋಬಲ್ ಶಾಲೆಯ ಪ್ರಾಚಾರ್ಯ ಕೆ.ವಿ. ಮೋಹನ್‌ರಾವ್, ಉಪ ಪ್ರಾಚಾರ್ಯ ಡಾ. ಕ್ರಾಂತಿಕುಮಾರ್, ಸ್ಪರ್ಧಿಗಳ ಪಾಲಕರು, ಕೋಚ್‌ಗಳು ಉಪಸ್ಥಿತರಿದ್ದರು.