ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಚೆಸ್ ಆಟದಲ್ಲಿ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಗೊಲ್ಲಾಳಪ್ಪ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ವಿದ್ಯಾರ್ಥಿಯ ಈ ಸಾಧನೆಗೆ ಚಂದ್ರಶೇಖರ್ ವಿದ್ಯಾಸಂಸ್ಥೆಯ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಮಲ್ಲಿಕಾರ್ಜುನ ಅಂಗಡಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಕಾಲೇಜು ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಕಾಲೇಜಿಗೂ ಮತ್ತು ನಮ್ಮ ಜಿಲ್ಲೆಗೂ ಕೀರ್ತಿ ಹೆಚ್ಚಾಗಿದೆ. ಈ ಚದುರಂಗ ಆಟವು ಪ್ರಪಂಚದ ಅತ್ಯಂತ ಜನಪ್ರಿಯ ಆಟಗಳಲ್ಲಿ ಇದೊಂದು ಆಗಿದೆ ಎಂದರು.
ಹಿರಿಯ ಉಪನ್ಯಾಸಕ ರಘುನಾಥ್ ರೆಡ್ಡಿ ಮಾತನಾಡಿ, ಗ್ರಾಮೀಣ ಕ್ರೀಡಾಪಟುಗಳೆ ಅತೀ ಹೆಚ್ಚು ಸಾಧನೆ ಮಾಡಿ ದೇಶಕ್ಕೆ ರಾಜ್ಯಕ್ಕೆ ಕೀರ್ತಿ ತರುತ್ತಿದ್ದಾರೆ. ಮುಂದೆ ನಡೆಯುವ ರಾಜ್ಯ ಮಟ್ಟದಲ್ಲಿಯೂ ಒಳ್ಳೆಯ ಪ್ರದರ್ಶನ ತೋರಿ ಜಯಶಾಲಿಯಾಗಿ ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವಂತೆ ವಿದ್ಯಾರ್ಥಿಗೆ ಹಾರೈಸಿದರು.ಚಂದ್ರಶೇಖರ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ರುದ್ರಪ್ಪಗೌಡ ನಾಡಗೌಡ, ಕಾರ್ಯದರ್ಶಿ ಸಿದ್ರಾಮಪ್ಪ ಚೇಗುಂಟ, ದೈಹಿಕ ಶಿಕ್ಷಕರಾದ ರಾಘವೇಂದ್ರ ರೆಡ್ಡಿ, ಶ್ರೀಶೈಲ್ ವಿಶ್ವಕರ್ಮ, ಪ್ರಕಾಶ್ ರೆಡ್ಡಿ ಕುರುಕುಂದಿ, ಅಶೋಕ್ ಅವಂಟಿ, ನರ್ಸಿಂಗ್ ರಾವ್ ಕುಲಕರ್ಣಿ, ಅಂಬರೀಶ್ ಶಾಮರಾವ್ ಪಾಟೀಲ್, ಶ್ರೀಮತಿ ರಿನಾವತಿ, ಮಹಾದೇವಪ್ಪ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.
-----6ವೈಡಿಆರ್4: ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಚೆಸ್ ಆಟದಲ್ಲಿ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಗೊಲ್ಲಾಳಪ್ಪ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.