ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ಎರಡನೇ ವರ್ಷದ ನೂರೊಕ್ಕ ನಾಡ್ ಒತ್ತೊಮ್ಮೆ ಕೂಟ ಭಾನುವಾರ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ಸಾಂಪ್ರದಾಯಿಕ ಆಚರಣೆಯೊಂದಿಗೆ ನೆರವೇರಿತು.ಮಹಿಳೆಯರು ದೇವರ ನೆಲೆಯಲ್ಲಿ ದೀಪ ಬೆಳಗಿದರು. ಸಾಂಪ್ರದಾಯಿಕ ಉಡುಪು ತೊಟ್ಟ ಪುರುಷರು ದುಡಿಕೊಟ್ಟು ಹಾಡಿನೊಂದಿಗೆ ದೇವರ ನೆಲೆಗೆ ಬಂದು, ಅಕ್ಕಿ ಹಾಕಿ ನಮಿಸಿ ಒಳಿತನ್ನು ಮಾಡಲೆಂದು ಬೇಡಿಕೊಂಡರು.
ನಿವೃತ್ತ ವಾಯುಸೇನಾಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ, ನೂರೊಕ್ಕ ನಾಡಿಗೆ ಒಳಪಡುವ ಚೆಟ್ಟಳ್ಳಿ ಕೊಡವ ಸಮಾಜ, ಜನಾಂಗದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಏಳಿಗೆಯನ್ನು ಪಡೆಯಲೆಂದು ಬೇಡಿಕೊಂಡರು. ಹಿರಿಯ ಸದಸ್ಯೆ ಐಚೆಟ್ಟೀರ ಚೋಂದಮ್ಮ, ಚೆಟ್ಟಳ್ಳಿ ಕೊಡವ ಸಮಾಜಕ್ಕೆ ಎರಡು ಕುತ್ತುದೀಪ ನೀಡಿದರು.ಮಹಿಳೆಯರ ಉಮ್ಮತಾಟ್, ಪುರುಷರ ಬೊಳಕಾಟ್, ತಾಲಿಪಾಟ್ ಹಾಗೂ ಕೊಡವ ಹಾಡುಗಾರಿಗೆ ನೆರವೇರಿತು. ನಂತರದಲ್ಲಿ ದಂಪತಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ದೇವರ ನೆಲೆಯಲ್ಲಿ ಮೀದಿನೀರಿಟ್ಟು ತಂಬುಟ್ಟ್ ಹಾಗೂ ವಿಶೇಷ ಭೋಜನವನ್ನು ಸವಿದರು.
ಮಧ್ಯಾಹ್ನ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕೊಡವ ಸಮಾಜ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಅಧ್ಯಕ್ಷತೆವ ಹಿಸಿ ಮಾತನಾಡಿ, ಒಗ್ಗಟ್ಟಿನ ಬಲ ಇದ್ದಾಗ ಮಾತ್ರ ಕೊಡವ ಜನಾಂಗ ಉಳಿಯಲು ಸಾಧ್ಯ. ಊರಿನವರ ಸಹಕಾರದಿಂದ ಚೆಟ್ಟಳ್ಳಿ ಕೊಡವ ಸಮಾಜ ಪ್ರಾರಂಭಗೊಂಡಿದ್ದು, ಮುಂದೆ ಇದೇ ಸಹಕಾರ ಇದ್ದರೆ ಚೆಟ್ಟಳ್ಳಿ ಕೊಡವ ಸಮಾಜ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗಲಿದೆ ಎಂದರು.ಸೋಶಿಯಲ್ ಮೀಡಿಯಾದಲ್ಲಿ ನಮ್ಮವರೇ ನಮ್ಮವರನ್ನು ಅವಹೇಳವಾಗಿ ಅಪಪ್ರಚಾರ ಮಾಡುತ್ತಿರುವುದು ಕಂಡುಬರುತ್ತಿದ್ದು, ಇದು ನಿಲ್ಲಬೇಕೆಂದರು.
ಹಿರಿಯರಾದ ಐಚೆಟ್ಟೀರ ಚೋಂದಮ್ಮ, ಸಮಾಜದ ಉಪಾಧ್ಯಕ್ಷರಾದ ಐಚೆಟ್ಟಿರ ಸುನಿತಾ ಮಾಚಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ನಿರ್ದೇಶಕರಾದ ಬಿದ್ದಂಡಮಾದಯ್ಯ ವೇದಿಕೆಯಲ್ಲಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಪುತ್ತರಿರ ಸೀತಮ್ಮ ಮೊಣ್ಣಪ್ಪ ಪ್ರಾರ್ಥಿಸಿದರು. ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ ವಂದಿಸಿದರು. ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭ ಚಂಗಪ್ಪ, ನಿರ್ದೇಶಕರಾದ ಪುತ್ತರಿರ ಕಾಶಿ ಸುಬ್ಬಯ್ಯ, ಬಟ್ಟೀರ ರಕ್ಷುಕಾಳಪ್ಪ, ಐಚೆಟ್ಟೀರ ಮಾಚಯ್ಯ, ಕೆಚೆಟ್ಟೀರ ರತಿಕಾರ್ಯಪ್ಪ, ಕಡೇಮಡ ವಿನ್ಸಿ, ಅಡಿಕೇರ ಶಾಂತಿ ಜಯ ಹಾಜರಿದ್ದರು.