ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಷೇತ್ರ ರೈತರ ಹಿತಾಸಕ್ತಿ ಕಾಪಾಡಿಕೊಂಡು ಬರುತ್ತಿದೆ ಎಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಹೇಳಿದ್ದಾರೆ.ಸ್ಥಳೀಯ ನರೇಂದ್ರ ಮೋದಿ ಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಕಾಫಿಗೆ ಹೂವು ಮಳೆಯ ಕೊರತೆ ಹಾಗೂ ಇದೀಗ ಅತಿವೃಷ್ಟಿಯಿಂದ ಬೆಳೆಗಾರರ ಫಸಲು ನಷ್ಟವಾಗಿದ್ದು, ಸಹಕಾರ ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.ಚೆಟ್ಟಳ್ಳಿ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಈ ಹಿಂದೆ ಮನೆಯಲ್ಲಿ ಗಂಡ ಹೆಂಡತಿ ಮಾತ್ರ ಸದಸ್ಯರಾಗುತ್ತಿದ್ದರು. ಈಗ ಕುಟುಂಬದ ಮಕ್ಕಳನ್ನು ಸದಸ್ಯರಾಗಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರಿಯಾಗುತ್ತಿರುವುದು ಶ್ಲಾಘನೀಯ. ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಕೃಷಿ ಸಾಲ,ಗೊಬ್ಬರ ಸಾಲ, ಜಾಮೀನು ಸಾಲ, ಅಲ್ಲದೆ 25 ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಸಾಲ ನೀಡುತ್ತಿದ್ದೇವೆ ಎಂದರು.
ಸಂಘದ ಸದಸ್ಯ ಅಯ್ಯಂಡ್ರರಾಘವಯ್ಯ ಮಾತನಾಡಿ, ಸಂಘದ ಬೆಳೆಗಾರರ ಕಾಫಿ ಗುಣಮಟ್ಟ ಪರಿಶೀಲನೆಗೆ ತೇವಾಂಶ ಯಂತ್ರ ಅಳವಡಿಸಿದ್ದು, ಸದಸ್ಯರಿಗೆ ಪ್ರಯೋಜನವಾಗಿದೆ. ಕಾಫಿ ಕೊಯ್ಲು ಸಂದರ್ಭದಲ್ಲಿ ಬೆಳೆಗಾರರು ಅಧಿಕ ಸಂಖ್ಯೆಯಲ್ಲಿ ಬರುವುದರಿಂದ ಎಲ್ಲರಿಗೂ ಸಕಾಲದಲ್ಲಿ ಪ್ರಯೋಜನ ಲಭಿಸುತ್ತಿಲ್ಲ ಇದಕ್ಕೆ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ಸಲಹೆ ನೀಡಿದರು.ಉಪಾಧ್ಯಕ್ಷ ಪೂಣ್ಣಚ್ಚ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ, ನಿರ್ದೇಶಕರಾದ ಬಿ.ಎಂ.ಕಾಶಿ, ಮುಳ್ಳಂಡ ಮಾಯಮ, ಕೊಂಗೇಟಿರ ವಾಣಿ ಕಾಳಪ್ಪ, ಪುತ್ತೇರಿರ ಶಿವುನಂಜಪ್ಪ, ಅಕ್ಕಾರಿ ದಯಾನಂದ, ಬಟ್ಟೀರ ವೇಣುಗೋಪಾಲ್, ಕರ್ಣಯ್ಯನ ಪ್ರಜ್ವಲ್, ಮರದಾಳು ಚೇತನ, ಪಿ.ಟಿ.ಗಣೇಶ, ಚೋಳಪಂಡ ವಿಜಯ, ಮುಕ್ಕಾಟಿ ಪಳಂಗಪ್ಪ, ಆರ್ಥಿಕ ಬ್ಯಾಂಕ್ ಪ್ರತಿನಿಧಿ ಮಮತ, ಲೆಕ್ಕಪರಿಶೋಧಕ ಚಂದ್ರಶೇಖರ್ ಇದ್ದರು.
ನಂದಿನಿ ಪ್ರಾರ್ಥಿಸಿದರು. ಪೇರಿಯನ ಪೂಣ್ಣಚ್ಚ ವಂದಿಸಿದರು.................
ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡುತ್ತಿರುವುದು.