ಛಲವಾದಿ ಮಹಾಸಭಾದಿಂದ ಸಚಿವ ಡಿ ಸುಧಾಕರ್ ಗೆ ಸನ್ಮಾನ

| Published : Jan 19 2025, 02:19 AM IST

ಸಾರಾಂಶ

Chhalavadi Mahasabha honors Minister D Sudhakar

ಕನ್ನಡಪ್ರಭವಾರ್ತೆ ಹಿರಿಯೂರು

ಬಯಲು ಸೀಮೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಭದ್ರಾ ಜಲಾಶಯದಿಂದ ನೀರು ಹರಿಸಿ ಮೂರನೇ ಬಾರಿಗೆ 130ಅಡಿ ನೀರು ಸಂಗ್ರಹವಾಗಿ ಕೋಡಿ ಬೀಳಲು ಕಾರಣರಾದ ಸಚಿವ ಡಿ.ಸುಧಾಕರ್ ಅವರಿಗೆ ಛಲವಾದಿ ಮಹಾಸಭಾದ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಸಚಿವ ಡಿ ಸುಧಾಕರ್ ಮಾತನಾಡಿ ವಿವಿ ಸಾಗರ ಜಲಾಷಯ ಕೋಡಿ ಬಿದ್ದಿರುವುದು ಜಿಲ್ಲೆಯ ಜನರ ಸಂತಸಕ್ಕೆ ಕಾರಣವಾಗಿದೆ. ರೈತರ ಬದುಕು ಹಸನಾಗಲು ಶ್ರಮಿಸಲಾಗುವುದು. ಜನರ ನೀರಿನ ಬವಣೆ ತೀರಿದರೆ ಅದೇ ಸಾರ್ಥಕ. ಛಲವಾದಿ ಸಮುದಾಯವು ಇತ್ತೀಚೆಗೆ ವಿದ್ಯಾವಂತ ಸಮುದಾಯವಾಗಿ ಪರಿವರ್ತನೆಯಾಗುತ್ತಿರುವುದು ಸಂತಸದ ವಿಷಯವಾಗಿದೆ. ಈ ಸಮುದಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪಂಚ ಯೋಜನೆಗಳ ಜಿಲ್ಲಾ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ತಾಲೂಕು ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಖಾದಿ ಹೇಮಂತ್, ಪ್ರ.ಕಾ ಆರ್ ಟಿ ಎಸ್ ಶ್ರೀನಿವಾಸ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ ಅನಂತ್, ಎಂಡಿ ಕೋಟೆ ಕೃಷ್ಣಮೂರ್ತಿ,ಗೌರವಾಧ್ಯಕ್ಷ ಬಿಂಬೋದರ, ಉಪಾಧ್ಯಕ್ಷ ಎಸ್ ಕೃಷ್ಣಮೂರ್ತಿ, ಸಹ ಕಾರ್ಯದರ್ಶಿ ಎಂಎಸ್ ರಮೇಶ್, ಖಜಾಂಚಿ ಕುಮಾರಸ್ವಾಮಿ ಎಸ್, ಉಪಾಧ್ಯಕ್ಷ ಬಿಟಿ ಯಶವಂತ್ ಕುಮಾರ್,ಹೊನ್ನೆಮರದ ವೀರಣ್ಣ, ರವಿಕುಮಾರ್, ಸುರೇಶ್ , ಸಂಘಟನಾ ಕಾರ್ಯದರ್ಶಿಗಳಾದ ಶಶಿಕುಮಾರ್ , ಎಂ ಪಿ ಆನಂದಕುಮಾರ್, ಮಹಾ ಲಿಂಗರಾಜು,ರಾಜಶೇಖರ್, ನಿರ್ದೇಶಕರುಗಳಾದ ಪ್ರವೀಣ್, ಮಲ್ಲೇಶ್ ಜಿ.ಎಸ್, ಪ್ರೇ ಕುಮಾರ್, ಸಿದ್ದೇಶ್ ಕುಮಾರ್, ನರಸಿಂಹಮೂರ್ತಿ, ಲಕ್ಷ್ಮಿಪತಿ, ಪಾರ್ವತಮ್ಮ, ಮಂಜುನಾಥ್ , ರಾಜಣ್ಣ, ಚೇತನ್, ನಿರಂಜನಮೂರ್ತಿ ಇದ್ದರು.

------

ಚಿತ್ರ 1,2 ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಸಚಿವ ಡಿ ಸುಧಾಕರ್ ಅವರನ್ನು ಸನ್ಮಾನಿಸಲಾಯಿತು.