ಛತ್ರಪತಿ ಶಿವಾಜಿ ಅವರ ಧೈರ್ಯ, ಶೌರ್ಯ, ದೇಶಪ್ರೇಮ ಯುವಕರಿಗೆ ಸ್ಫೂರ್ತಿದಾಯಕ: ಶಿವಕುಮಾರ್ ಕಾಸ್ನೂರು

| Published : Feb 21 2025, 12:48 AM IST

ಛತ್ರಪತಿ ಶಿವಾಜಿ ಅವರ ಧೈರ್ಯ, ಶೌರ್ಯ, ದೇಶಪ್ರೇಮ ಯುವಕರಿಗೆ ಸ್ಫೂರ್ತಿದಾಯಕ: ಶಿವಕುಮಾರ್ ಕಾಸ್ನೂರು
Share this Article
  • FB
  • TW
  • Linkdin
  • Email

ಸಾರಾಂಶ

ತನ್ನ ತಾಯಿಯಿಂದ ರಾಜ್ಯದ ಆಡಳಿತ, ದೇಶಪ್ರೇಮದ ಪಾಠವನ್ನು ಕಲಿತ ಶಿವಾಜಿ ಅವರು ಧರ್ಮರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ನ್ಯಾಯಪರತೆ, ಸ್ವರಾಜ್ಯದ ಕಲ್ಪನೆ, ದೇಶಭಕ್ತಿಯ ಆದರ್ಶ ಗುಣಗಳನ್ನು ಶಿವಾಜಿ ಮಹಾರಾಜರು ಹೊಂದಿದ್ದರು. ಅವರ ದೇಶಪ್ರೇಮ ಮತ್ತು ಶೌರ್ಯ ಆದರ್ಶ ಗುಣಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಿರ ಸ್ಥಾಯಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಛತ್ರಪತಿ ಶಿವಾಜಿ ಅವರ ಧೈರ್ಯ, ಶೌರ್ಯ, ದೇಶಪ್ರೇಮ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ, ಹಾಗೂ ಛತ್ರಪತಿ ಶಿವಾಜಿ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತನ್ನ ತಾಯಿಯಿಂದ ರಾಜ್ಯದ ಆಡಳಿತ, ದೇಶಪ್ರೇಮದ ಪಾಠವನ್ನು ಕಲಿತ ಶಿವಾಜಿ ಅವರು ಧರ್ಮರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ನ್ಯಾಯಪರತೆ, ಸ್ವರಾಜ್ಯದ ಕಲ್ಪನೆ, ದೇಶಭಕ್ತಿಯ ಆದರ್ಶ ಗುಣಗಳನ್ನು ಶಿವಾಜಿ ಮಹಾರಾಜರು ಹೊಂದಿದ್ದರು. ಅವರ ದೇಶಪ್ರೇಮ ಮತ್ತು ಶೌರ್ಯ ಆದರ್ಶ ಗುಣಗಳಿಂದ ಇಂದಿಗೂ ಜನರ ಮನಸ್ಸಿನಲ್ಲಿ ಸ್ಥಿರ ಸ್ಥಾಯಿಯಾಗಿದ್ದಾರೆ. ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಸರ್ವಜ್ಞ ಮಹಾಕವಿಯು ರಾಜರ ಆಶ್ರಯ ಪಡೆಯದೆ ಜನರ ಮಧ್ಯೆ ಜೀವಿಸಿ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಕವಿ, ಆದ್ದರಿಂದ ಸರ್ವ ಶ್ರೇಷ್ಠ ಕವಿ ಎಂದು ಹೆಸರು ಪಡೆದಿದ್ದಾರೆ. ತಮ್ಮ ತ್ರಿಪದಿಗಳ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುತ್ತಿದ್ದ ಮಹಾಕವಿಯ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮುಖ್ಯ ಭಾಷಣಕಾರರಾದ ಸರೋಜ ಬಾಯಿ, ರಾಜಣ್ಣ, ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ವಿದ್ಯಾಸಾಗರ್, ತಾಲೂಕು ಅಧ್ಯಕ್ಷ ಸತೀಶ್ ರಾವ್, ದಸಂಸ ಸಂಚಾಲಕರಾದ ಮಲ್ಲಹಳ್ಳಿ ನಾರಾಯಣ, ಮುಖಂಡರಾದ ಇಮ್ಮಾವು ರಘು, ಶಿವಪ್ಪ ದೇವರು, ಶಿವಣ್ಣ, ಮರಿಶೆಟ್ಟಿ, ಕಾಶೀನಾಥ್ ಇದ್ದರು.

ನಾಳೆ ವಿದ್ಯುತ್‌ ನಿಲುಗಡೆ

ನಂಜನಗೂಡು: 66/11ಕೆವಿ ಸುತ್ತೂರು, 66/11 ಕೆವಿ ಗೋಳೂರು ಮತ್ತು 66/11 ಕೆವಿ ದೇವನೂರು (ನಂಜನಗೂಡು) ವಿದ್ಯುತ್‌ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆವಿ ಮಾರ್ಗಗಳಿಂದ ವಿದ್ಯುತ್‌ ಸರಬರಾಜು ಹೊಂದಿರುವ ಗ್ರಾಮಗಳಿಗೆ ಫೆ. 22ರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿಯನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ ವತಿಯಿಂದ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಗ್ರಾಮಗಳಲ್ಲಿ ವಿದ್ಯುತ್‌ ಸರಸಬರಾಜಿನಲ್ಲಿ ನಿಲುಗಡೆಯಾಗಲಿದೆ. ನಗರ್ಲೆ, ಬಿಳಿಗೆರೆ, ಮಲ್ಲೂಪುರ, ಸುತ್ತೂರು ಗ್ರಾಮಗಳು, ಗ್ರಾಪಂ ವ್ಯಾಪ್ತಿಯ ಪ್ರದೇಶಗಳು. ಮಹದೇವನಗರ, ಗೋಳೂರು, ವಿದ್ಯಾಪೀಠ, ಗೀಕಳ್ಳಿ, ಹೊರಳವಾಡಿ, ಮುಳ್ಳೂರು, ಬಸವೇಶ್ವರನಗರ, ಆಲಂಬೂರು, ಆಲಂಬೂರು ಮುಂಟಿ, ಕುಳ್ಳಂಕನಹುಂಡಿ, ಹೊರಳವಾಡಿ ಹೊಸೂರು ಗ್ರಾಮಗಳು. ತಗಡೂರು, ಬದನವಾಳು, ಚುಂಚನಹಳ್ಳಿ, ಗಟ್ಟವಾಡಿಪುರ, ಕಾರ್ಯ, ಅಳಗಂಚಿ, ಹೆಡತಲೆ, ಕೋಣನೂರು, ನೇರಳೆ, ಹೆಮ್ಮರಗಾಲ, ಕೌವಲಂದೆ ಗ್ರಾಮಗಳು, ಗ್ರಾಪಂ ವ್ಯಾಪ್ತಿಯ ಪ್ರದೇಶಗಳು.