ಸಾರಾಂಶ
ಮುಕುಂದ ರಾವಂದೂರು
ಕನ್ನಡಪ್ರಭ ವಾರ್ತೆ ರಾವಂದೂರುಪಿರಿಯಾಪಟ್ಟಣ ತಾಲೂಕಿನ ಮಹಾತ್ವಾಕಾಂಕ್ಷಿಯ ಯೋಜನೆಯಾದ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜ. 24 ರಂದು ಪ್ರಾಯೋಗಿಕವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ ಎಂದು ರೇಷ್ಮೆ ಹಾಗೂ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಹೇಳಿದ್ದಾರೆ.
ಮಹತ್ವಾಕಾಂಕ್ಷಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ 90 ರಷ್ಟು ಪೂರ್ಣಗೊಂಡಿದ್ದು, 150 ಕೆರೆಗಳು ಶೀಘ್ರ ಭರ್ತಿ ಪ್ರಾಯೋಗಿಕವಾಗಿ ಪರೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಲನೆ ನೀಡಲು ತಯಾರಿ ನಡೆದಿದೆ.2017ರಲ್ಲಿ ಶಾಸಕರಾಗಿದ್ದ ಸಚಿವ ವೆಂಕಟೇಶ್ ಅವರು 295 ಕೋಟಿ ರು. ಯೋಜನೆ ರೂಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಚಾಲನೆ
ಕೊಡಿಸಿದ್ದರು. ಆದರೆ ಈವರೆಗೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಇತ್ತೀಚೆಗೆ 90ರಷ್ಟು ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಸಿದ್ದರಾಮಯ್ಯ ಅವರೇ ಪ್ರಾಯೋಗಿಕವಾಗಿ ಇದೇ ತಿಂಗಳು 24 ನೇ ತಾರೀಕಿನಂದು ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.ತಾಲೂಕು ಅರೆ ಮಲೆನಾಡು ಪ್ರದೇಶವಾಗಿದ್ದು, ಮಳೆಯಾಶ್ರಿತ ಭೂಮಿ ಹೆಚ್ಚಾಗಿದೆ. ಕಾವೇರಿ ತಾಲೂಕಿನ ಗಡಿ ಪ್ರದೇಶದಲ್ಲಿ ಹರಿದರೂ ಇದನ್ನು ಕುಡಿಯುವ ನೀರಿಗಾಗಿ ಬಿಟ್ಟರೆ ಬೇರೆ ಉಪಯೋಗಕ್ಕೆ ಬಳಸಲಾಗುವ ಅವಕಾಶವೇ ದೊರೆತಿರಲಿಲ್ಲ. ಇಂತಹ ಸಂದರ್ಭದಲ್ಲಿ 2017ರಲ್ಲಿ ಶಾಸಕರಾಗಿದ್ದ
ಇಂದಿನ ಸಚಿವ ಕೆ. ವೆಂಕಟೇಶ್ಕೋಟಿ ರು. ವೆಚ್ಚದ ಯೋಜನೆ ರೂಪಿಸಿ ಸಿದ್ದರಾಮಯ್ಯ ಅವರಿಂದಲೇ ಚಾಲನೆ ಕೊಡಿಸಿ, ಬಳಿಕ 5 ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಮತ್ತೆ ಈಗ ವೆಂಕಟೇಶ್ಅವರೇ ಸಚಿವರಾಗಿರುವುದರಿಂದ ಮೊದಲ ಆದ್ಯತೆಯಲ್ಲಿ ಈ ಯೋಜನೆ ಶೀಘ್ರಗತಿಯಲ್ಲಿ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ ಯೋಜನೆ ಮುಕ್ತಾಯ ಹಂತ ತಲುಪಿದೆ. ಅದೇ ರೀತಿ ಇದೇ ತಿಂಗಳು 24ರಂದು ಪ್ರಾಯೋಗಿಕವಾಗಿ ಸಿದ್ದರಾಮಯ್ಯ ಅವರೇ ಚಾಲನೆ ನೀಡಲಿದ್ದಾರೆ.ಮಾಜಿ ಶಾಸಕ ಈ ಬಗ್ಗೆ ಕಾಳಜಿ ವಹಿಸಿ ಕಾರ್ಯ ನಿರ್ವಹಿಸಿದ್ದರೂ ಕೊರೋನಾ ಮತ್ತಿತರ ಕಾರಣಗಳಿಂದ 5 ವರ್ಷಗಳಾದರೂ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಮತ್ತೆ ಈ ಬಾರಿ ಸಚಿವರಾಗಿ ಆಯ್ಕೆಯಾದ ನಂತರ ಕೆ. ವೆಂಕಟೇಶ್ ಮೊದಲ ಆದ್ಯತೆಯನ್ನು ಈ ಯೋಜನೆಗೆ ನೀಡಿದ್ದರಿಂದ ಮುಕ್ತಾಯ ಹಂತ ತಲುಪಿದೆ.
ಕಾವೇರಿ ನದಿ ಹರಿಯುವ ದಡದಲ್ಲಿರುವಂತಹ ಮುಳಸೋಗೆ ಗ್ರಾಮದಿಂದ ತಾಲೂಕಿನ 78 ಗ್ರಾಮಗಳ 150 ನೀರು ತುಂಬಿಸುವ ಯೋಜನೆ ಇದಾಗಿದೆ. 295 ಕೋಟಿ ರು. ಅಂದಾಜು ವೆಚ್ಚದ ಈ ಯೋಜನೆ ಜಲಸಂಪನ್ಮೂಲ ಇಲಾಖೆಯದ್ದಾಗಿದ್ದು, ಕಾವೇರಿ ನೀರಾವರಿ ನಿಗಮ ವತಿಯಿಂದ ನಡೆಯುತ್ತಿದೆ. ಮಹಾರಾಷ್ಟ್ರ ಕೊಲ್ಲಾಪುರದ ಲಕ್ಷ್ಮಿತ್ರ ಸಿವಿಲ್ಎಂಜಿನಿಯರಿಂಗ್ಕನ್ ಸ್ಟ್ರಕ್ಷನ್ಕಂಪನಿ ಇದರ ನಿರ್ವಹಣೆ ಹೊಣೆ ಹೊತ್ತಿದ್ದು, 175 ಕಿ.ಲೋ ಮೀಟರ್ಪೈಪ್ ಲೈನ್ ನಲ್ಲಿ 165 ಕಿ.ಮೀ. ರಷ್ಟು ಕಾಮಗಾರಿ ಮುಗಿದಿದೆ. 11.37 ಕಿ.ಮೀ ರೈಸಿಂಗ್ಮೇನ್ಪೈಪ್ ಲೈನ್ಕಾಮಗಾರಿ ಮುಗಿದಿದೆ.ಇದಲ್ಲದೆ ಬಹುತೇಕ ಕಾಮಗಾರಿಗಳು ಮುಕ್ತಾಯ ಹಂತ ತಲುಪಿದ್ದು, ನೀರು ಕಡಿಮೆ ಇರುವ ಕಾರಣ ಕೆಲ ಕೆರೆಗಳನ್ನು ತುಂಬಿಸಲಾಗುತ್ತದೆ. ಮುಂದಿನ ಮುಂಗಾರಿಗೆ ಸಂಪೂರ್ಣ 150 ಕೆರೆಗಳು ತುಂಬಲಿವೆ.
66 ಕೆವಿ ವಿದ್ಯುತ್ಅಗತ್ಯತೆ ಇದ್ದು, ಈ ಕೆಲಸವು ತ್ವರಿತವಾಗಿ ಸಾಗಿ ಕೆಲಸ ಸಂಪೂರ್ಣವಾಗಿ ಮುಗಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.------ ಕೋಟ್---
ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ಯೋಜನೆಯನ್ನು ಅಂದು ಸಿದ್ದರಾಮಯ್ಯ ಅವರಿಂದ ಅನುದಾನ ತಂದು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಇಂದು ಈ ಯೋಜನೆ ಮತ್ತೆ ಮುಖ್ಯಮಂತ್ರಿಯಾಗಿ ಚಾಲನೆ ನೀಡುತ್ತಿರುವುದು ಸಂತೋಷದ ಸಂಗತಿಯಾಗಿದೆ. ಹಾಗೂ ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಇನ್ನೂ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಹೆಚ್ಚು ಉತ್ತೇಜನ ನೀಡಲಾಗುತ್ತದೆ.- ಕೆ. ವೆಂಕಟೇಶ್, ಪಶುಸಂಗೋಪನಾ ಮತ್ತು ರೇಷ್ಮೆ ಸಚಿವರು