ಸಾರಾಂಶ
ಸಿಎಂಗೆ ಸೇಬಿನ ಹಾರ ಹಾಕಿದ ನಂತರ ಕ್ರೇನ್ ನಲ್ಲಿದ್ದ ಬೃಹತ್ ಸೇಬಿನ ಹಾರವನ್ನು ಕಿತ್ತು ಕೈಗೆ ಸಿಕ್ಕಿಷ್ಟು ಸೇಬಿನ ಹಣ್ಣನ್ನು ಅಭಿಮಾನಿಗಳು, ಸಾರ್ವಜನಿಕರು ಕಿತ್ತೊಯ್ದುರು .ಕ್ಷಣ ಮಾತ್ರದಲ್ಲಿ ಕ್ರೇನ್ ನಲ್ಲಿದ್ದ ಬೃಹತ್ ಹಾರ ಖಾಲಿಯಾಯಿತು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು.ಮೈಸೂರಿನಿಂದ ನೇರವಾಗಿ ಕೆಆರ್‌ಎಸ್ ಮಾರ್ಗವಾಗಿ ಪಂಪ್ ಹೌಸ್ ಬಳಿಗೆ ಆಗಮಿಸಿದಾಗ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ನಂತರ ಜೊತೆಯಲ್ಲಿ ಬೆಳಗೊಳಕ್ಕೆ ಪ್ರಯಾಣಿಸಿ ಮುಖ್ಯಮಂತ್ರಿಗಳು ಆಪ್ತ ಶಿವರಾಜು ಅವರ ನೂತನ ಪೆಟ್ರೋಲ್ ಬಂಕ್‌ನ್ನು ಉದ್ಘಾಟಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮೀಜಿಗಳೊಂದಿಗೆ ಸ್ಥಳೀಯ ಶಾಸಕರು ಹಾಗೂ ಮೈಸೂರಿನ ಶಾಸಕರೊಂದಿಗೆ ದೀಪಗಳ ಬೆಳಗಿಸಿದರು. ಸ್ಥಳದಲ್ಲಿ ನೆರೆದ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳಿಗೆ ಕೈ ಬೀಸಿ ಶುಭ ಕೋರಿದರು.ಇದಕ್ಕೂ ಮುನ್ನ ಶಿವರಾಜು ಬಳಗದ ವತಿಯಿಂದ ಬೃಹತ್ ಸೇಬಿನ ಹಾರವನ್ನು ಕ್ರೇನ್ ಮೂಲಕ ಮುಖ್ಯ ಮಂತ್ರಿಗಳಿಗೆ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಸಿಎಂ ಅವರನ್ನು ಕೈ ಕೊಟ್ಟು ಮಾತನಾಡಿಸಲು ಅಭಿಮಾನಿಗಳ ದಂಡು ಮುಗಿಬಿದ್ದರೂ ಎಲ್ಲರಿಗೂ ಕೈ ಬೀಸಿ ನಮಸ್ಕರಿಸಿದರು. ಮಾಧ್ಯಮದವರೊಂದಿಗೆ ಏನು ಮಾತನಾಡದೆ ತೆರಳಿದರು.
ಸಿಎಂಗೆ ಸೇಬಿನ ಹಾರ ಹಾಕಿದ ನಂತರ ಕ್ರೇನ್ ನಲ್ಲಿದ್ದ ಬೃಹತ್ ಸೇಬಿನ ಹಾರವನ್ನು ಕಿತ್ತು ಕೈಗೆ ಸಿಕ್ಕಿಷ್ಟು ಸೇಬಿನ ಹಣ್ಣನ್ನು ಅಭಿಮಾನಿಗಳು, ಸಾರ್ವಜನಿಕರು ಕಿತ್ತೊಯ್ದುರು .ಕ್ಷಣ ಮಾತ್ರದಲ್ಲಿ ಕ್ರೇನ್ ನಲ್ಲಿದ್ದ ಬೃಹತ್ ಹಾರ ಖಾಲಿಯಾಯಿತು.ಕಾರ್ಯಕ್ರಮದಲ್ಲಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಮಾಜಿ ಶಾಸಕ ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ, ಮಾಲೀಕ ಶಿವರಾಜು ಸೇರಿದಂತೆ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದರು.