ಸಾರಾಂಶ
ಪಟ್ಟಣದ ಪುರಸಭೆ ಅಧ್ಯಕ್ಷರ ವಿರುದ್ಧ ಮುಖ್ಯಾಧಿಕಾರಿ ಇಲ್ಲಸಲ್ಲದ ಹೇಳಿಕೆಗಳ ನೀಡಿ ಅವಾಜ್ಯವಾಗಿ ನಿಂದಿಸಿರುವ ನಡೆ ಖಂಡಿಸಿ ಅಧ್ಯಕ್ಷ ಹನುಮಂತಪ್ಪ ಮತ್ತು ಬಂಧುಗಳು ಡಾ. ಅಂಬೇಡ್ಕರ್ ಭಾವಚಿತ್ರದೊಂದಿಗೆ ಪುರಸಭೆ ಬಳಿ ಶುಕ್ರವಾರ ಧರಣಿ ನಡೆಸಿದ್ದಾರೆ.
ಮಲೇಬೆನ್ನೂರು: ಪಟ್ಟಣದ ಪುರಸಭೆ ಅಧ್ಯಕ್ಷರ ವಿರುದ್ಧ ಮುಖ್ಯಾಧಿಕಾರಿ ಇಲ್ಲಸಲ್ಲದ ಹೇಳಿಕೆಗಳ ನೀಡಿ ಅವಾಚ್ಯವಾಗಿ ನಿಂದಿಸಿರುವ ನಡೆ ಖಂಡಿಸಿ ಅಧ್ಯಕ್ಷ ಹನುಮಂತಪ್ಪ ಮತ್ತು ಬಂಧುಗಳು ಡಾ. ಅಂಬೇಡ್ಕರ್ ಭಾವಚಿತ್ರದೊಂದಿಗೆ ಪುರಸಭೆ ಬಳಿ ಶುಕ್ರವಾರ ಧರಣಿ ನಡೆಸಿದರು.
ಮುಖ್ಯಾಧಿಕಾರಿ ಎನ್. ಭಜಕ್ಕನವರ್, ಅಧ್ಯಕ್ಷರು ಮತ್ತು ಸದಸ್ಯರಿಗೆ ಅವಾಚ್ಯ ಮಾತಾಡಿರುವ ವೀಡಿಯೋಗಳು ವೈರಲ್ ಆಗಿವೆ. ಶಿಕ್ಷಣವಿಲ್ಲದ, ಸರಿಯಾಗಿ ತಿಳಿವಳಿಕೆ ಇಲ್ಲದವರು ಅಧ್ಯಕ್ಷರಾಗಿದ್ದಾರೆ ಎಂಬಿತ್ಯಾದಿ ಆರೋಪಗಳು ಸಹಿಸುವುದಿಲ್ಲ. ಮುಖ್ಯಾಧಿಕಾರಿ ನಡೆಯಿಂದ ಜನಪ್ರತಿನಿಧಿಗಳಿಗೆ ತೀವ್ರ ಮುಜುಗರ ಉಂಟಾಗಿದೆ. ಇಂಥ ಮುಖ್ಯಾಧಿಕಾರಿಯನ್ನು ವರ್ಗಾವಣೆ ಮಾಡಿ ಅಥವಾ ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.ಧರಣಿಯಲ್ಲಿ ಅಧ್ಯಕ್ಷ ಹನುಮಂತಪ್ಪ, ತಾಯಿ, ಪುತ್ರರು, ಸಹೋದರಿ ಪಾಲ್ಗೊಂಡಿದ್ದರು. ಸದಸ್ಯರಾದ ಖಲೀಲ್, ಮಂಜುನಾಥ್ ಕೂಡ ಧರಣಿ ಬೆಂಬಲಿಸಿದರು.
ಬೆಳಗ್ಗೆಯಿಂದ ನಡೆಸಿದ ಪ್ರತಿಭಟನೆ ಕೈ ಬಿಡುವಂತೆ ಪೊಲೀಸರು ಮತ್ತು ಉಪ ತಹಸೀಲ್ದಾರ್ ಧರಣಿನಿರತರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಒಪ್ಪದೇ ಮಧ್ಯಾಹ್ನದವರೆಗೂ ಧರಣಿ ನಡೆಸಿ, ಬಳಿಕ ಸ್ಥಗಿತಗೊಳಿಸಲಾಯಿತು.- - -
-೧೧ಎಂಬಿಆರ್೧: