ದೀರ್ಘದಂಡ ನಮಸ್ಕಾರ ಹಾಕಿದ ಚಿಕೇನಕೊಪ್ಪದ ಶರಣರು

| Published : Jan 29 2024, 01:30 AM IST

ಸಾರಾಂಶ

ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಬಳಗಾನೂರಿನ ಶಿವಶಾಂತವೀರ ಶರಣರು ಗವಿಮಠದ ಮೈದಾನದಿಂದ ಮಠದ ಕತೃ ಗದ್ದುಗೆವರೆಗೂ ಭಾನುವಾರ ಸಂಜೆ ದೀರ್ಘ ದಂಡ ನಮಸ್ಕಾರ ಹಾಕಿದರು.

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಬಳಗಾನೂರಿನ ಶಿವಶಾಂತವೀರ ಶರಣರು ಗವಿಮಠದ ಮೈದಾನದಿಂದ ಮಠದ ಕತೃ ಗದ್ದುಗೆವರೆಗೂ ಭಾನುವಾರ ಸಂಜೆ ದೀರ್ಘ ದಂಡ ನಮಸ್ಕಾರ ಹಾಕಿದರು.

ಹಿಂದಿನ ಗವಿಮಠದ ಶ್ರೀಗಳಾದ ಲಿಂ.ಶಿವಶಾಂತವೀರ ಸ್ವಾಮೀಜಿ, ಲಿಂ.ಮರಿಶಾಂತವೀರ ಸ್ವಾಮೀಜಿ ಕಾಲದಿಂದಲೂ ಹಿಂದಿನ ಲಿಂ.ಚಿಕೇನಕೊಪ್ಪದ ಚನ್ನವೀರ ಶರಣರ ಸಂಬಂಧ ಗುರು ಶಿಷ್ಯರ ಸಂಬಂಧ. ಕೊಪ್ಪಳ ಗವಿಮಠಕ್ಕೆ ಚಿಕೇನಕೊಪ್ಪದ ಶ್ರೀಗಳ ಭಕ್ತಿ ಅಗಾಧ. ಗವಿಮಠ ಎಂದ ಕೂಡಲೇ ಗವಿಸಿದ್ದೇಶ್ವರ ನಾಮಾವಳಿ ಹಾಡಿ ಚಿಕೇನಕೊಪ್ಪ ಶ್ರೀಗಳು ಕಾರ್ಯ ಪ್ರವೃತ್ತರಾಗುತ್ತಾರೆ. ಅದರ ಹಾಗೆ ಗವಿಸಿದ್ದೇಶ್ವರ ಮಹಾರಥೋತ್ಸವ ಮರುದಿನ ಈಗಿನ ಚಿಕೇನಕೊಪ್ಪದ ಶಿವಶಾಂತರವೀರ ಶರಣರು ದೀಡ್ ನಮಸ್ಕಾರ ಹಾಕಿ ಭಕ್ತಿ ಮೆರೆಯುತ್ತಾರೆ. ಅದರಂತೆ ಮಠದ ದ್ವಾರ ಬಾಗಿಲಿನಿಂದ ಶರಣರ ದೀರ್ಘ ದಂಡ ನಮಸ್ಕಾರ ಆರಂಭವಾಯಿತು.ಶರಣರು ದೀರ್ಘ ದಂಡ ನಮಸ್ಕಾರ ಹಾಕುವ ಹಾದಿಗೆ ಭಕ್ತರು ಹೂವು ಹಾಕಿ ಹೂಹಾಸಿಗೆ ನಿರ್ಮಿಸಿದರು. ಶರಣರ ಹಿಂದೆ ನೂರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಸಮರ್ಪಿಸಿದರು.ಮೊಳಗಿದ ನಾಮಾವಳಿ:ಚಿಕೇನಕೊಪ್ಪದ ಶರಣರು ಗವಿಸಿದ್ದೇಶ್ವರ ಜಯಘೋಷ ಮೊಳಗಿಸುತ್ತಾ, ಸ್ವಾಮೀಜಿಗಳ ನೆನೆಯುತ್ತಾ ಭಕ್ತಿಯಿಂದ ದೀರ್ಘ ದಂಡ ನಮಸ್ಕಾರ ಹಾಕಿದರು. ಪಾಹಿಮಾನ್‌ ಗವಿಸಿದ್ದ, ಗವಿಸಿದ್ದ ಪಾಹಿಮಾನ್ ಎಂದು ಜಯಘೋಷ ಕೂಗಿದರು. ಭಜನೆ ಮಂಡಳಿಯವರು ಗವಿಸಿದ್ದೇಶ್ವರ ನಾಮಾವಳಿ ಹಾಡಿದರು.ಭಕ್ತಿ ಪರವಶರಾದ ಚಿಕೇನಕೊಪ್ಪದ ಶರಣರು:ದೀರ್ಘ ದಂಡ ನಮಸ್ಕಾರ ಹಾಖುವ ವೇಳೆ ಚಿಕೇನಕೊಪ್ಪದ ಶರಣರು ಗವಿಸಿದ್ದೇಶ್ವರ ದೇವರ ಮೇಲೆ ಭಕ್ತಿ ಪರವಶರಾಗಿದ್ದು ಕಂಡು ಬಂದಿತು. ಭಕ್ತಿಯಿಂದ ಶರಣರು ದೀರ್ಘದಂಡ ನಮಸ್ಕಾರ ಹಾಕಿದರು. ಗವಿಸಿದ್ದ ನಾಮಾವಳಿ ಪಠಣ ಮಾಡಿ ಭಕ್ತಿ ಸಮರ್ಪಿಸಿದರು. ಈ ಹಿಂದಿನ ಚೆನ್ನವೀರ ಶರಣರು ಜಾತ್ರಾ ಮಹಾ ರಥೋತ್ಸವ ನಡೆದ ಮರುದಿನ ದೀರ್ಘ ದಂಡ ನಮಸ್ಕಾರ ಹಾಕುತ್ತಾ ತಮ್ಮ ಗುರುಗಳ ನೆನೆಯುತ್ತಾ ಭಕ್ತಿ ತೋರುತ್ತಿದ್ದರು. ಅವರು ಲಿಂಗೈಕ್ಯರಾದ ಬಳಿಕ ಈಗಿನ ಶಿವಶಾಂತವೀರ ಶರಣರು ತಮ್ಮ ಗುರುವಿನ ಪರಂಪರೆ ಮುಂದುವರೆಸಿಕೊಂಡು ಬರುತ್ತಿದ್ದಾರೆ.