ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ತಗಾದೆ ತೆಗೆಯುತ್ತಿರುವ ಮರಾಠಿ ಸಂಘಟನೆಗಳಿಗೆ ಎಚ್ಚರಿಕೆ ನೀಡಲು ಕನ್ನಡಪರ ಸಂಘಟನೆಗಳ ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಿಕ್ಕಬಳ್ಳಾಪುರದಲ್ಲಿ ಆರಂಭದಲ್ಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಳ್ಳಂ ಬೆಳಿಗ್ಗೆಯೇ ಕನ್ನಡ ಸೇನೆ ಮತ್ತು ಶಿವರಾಮೇಗೌಡರ ಕನ್ನಡ ರಕ್ಷಣಾವೇದಿಕೆಯ ಬೆರಳೆಣಿಕೆ ಕಾರ್ಯಕರ್ತರಾದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ರವಿಕುಮಾರ್, ಕರವೇಯ ಲೋಕೇಶ್, ಎಸ್ ಬಿಎಂ ಮಂಜು, ಅಂತೋಣಿ, ಮತ್ತಿತರರು ನಗರದ ಡಾ,ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿಕೊಂಡು ಎಂಇಎಸ್ ಮತ್ತು ಮರಾಠಿ ಸಂಘಟನೆಗಳ ವಿರುದ್ದ ಘೋಷಣೆ ಕೂಗಿ ಎಂಇಎಸ್ ನ ಪ್ರತಿಕೃತಿ ದಹಿಸಿದರು. ಎಂದಿನಂತೆ ಜನಜೀವನ
ಬೆಳಗ್ಗೆಯಿಂದಲೇ ಸಾರ್ವಜನಿಕರ ಸಂಚಾರ ಎಂದಿನಂತಿದ್ದು, ಆಟೋ, ಬಸ್ಗಳು ಸಂಚರಿಸಿದವು. ಬಂದ್ ಯಶಸ್ಸಿಗಾಗಿ ಸಾರ್ವಜನಿಕರು ಹಾಗೂ ವ್ಯಾಪಾರಿಗಳ ಬಳಿ ಕನ್ನಡ ಪರ ಸಂಘಟನೆಗಳು ಮನವಿ ಮಾಡಿದ್ದವು. ಆದರೆ ಬಹುತೇಕ ಸಂಘಟನೆಗಳಿಂದ ನೈತಿಕ ಬೆಂಬಲವಷ್ಟೇ ದೊರೆತಿರುವುದರಿಂದ ಯಾರಿಗೂ ಬಂದ್ ಬಿಸಿ ತಟ್ಟಲಿಲ್ಲ..ಬಂದ್ ಜೋರಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಹೋಟೆಲ್ ಮಾಲಿಕರು ಯಾವುದೇ ಸಿದ್ದತೆ ಮಾಡಿ ಕೊಂಡಿರಲಿಲ್ಲಾ. ಆದರೆ ಬಂದ್ ಆಗಲೇ ಇದ್ದುದರಿಂದ ಸಣ್ಣಪುಟ್ಟ ಹೋಟೆಲ್ ಗಳು ಮತ್ತು ಬೀದಿ ಬದಿ ತಳ್ಳುಗಾಡಿಗಳಿಗೆ ವ್ಯಾಪಾರಿಗಳಿಗೆ ವ್ಯಾಪಾರ ಜೋರಾಗಿತ್ತು.
ವ್ಯಾಪಾರ ವಹಿವಾಟು ಸಹಜ ಸ್ಥಿತಿಇಂದು ಬಂದ್ ಆಗುತ್ತದೆ ಎಂದು ಕೆಲವರು ವ್ಯಾಪಾರಿಗಳು ಹಲವರು ಕುಟುಂಬ ಸಮೇತ ಒಂದು ದಿನದ ಪಿಕ್ ನಿಕ್ ಹೋಗಿದ್ದರಿಂದ ಕಲವು ಅಂಗಡಿಗಳು ತೆರೆದಿರಲಿಲ್ಲಾ. ಆದರೆ ಬಹುತೇಕ ಅಂಗಡಿ ಮುಂಗಟ್ಟುಗಳು , ಪೆಟ್ರೋಲ್ ಬಂಕ್ ಗಳು ತೆರೆದೆ ಇದ್ದವು. ಇದರ ಜೊತೆಗೆ ಸಿಮಿಮಾ ಮಾಂದಿರಗಳು ಬೆಳಗಿನ ಚಿತ್ರ ಪ್ರದರ್ಶನ ಬಿಟ್ಟು ಎಲ್ಲಾ ಪ್ರದರ್ಶನಗಳನ್ನು ಪ್ರದರ್ಶಿಸಿದರು. ಎಪಿಎಂಸಿ ಯಲ್ಲಿ ಎಂದಿನಂತೆ ಶನಿವಾರದ ವಹಿವಾಟು ಜೋರಾಗಿಯೇ ನಡೆದಿತ್ತು. ಆದರೆ ನಗರದಲ್ಲಿ ಜನ ಸಂಚಾರ ವಿರಳವಾಗಿತ್ತು.
ಸಾರ್ವಜನಿಕರ ಬೆಂಬಲ ಇಲ್ಲಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳಿಗೆ, ಪರೀಕ್ಷೆಗಳಿಗೆ ತೊಂದರೆಯಾಗುವಂಥಹ ಬಂದ್ ನಮಗೆ ಬೇಡ. ಬೆಳಗಾವಿಯಲ್ಲಿ ನಡೆದಿರುವ ಘಟನೆಗೆ ಬೆಳಗಾವಿಯಲ್ಲೇ ಹೋರಾಟ ಮಾಡಲು ಸಿದ್ಧರಿದ್ದೇವೆ. ಅದನ್ನು ಬಿಟ್ಟು ಸಾರ್ವಜನಿಕರು, ವ್ಯಾಪಾರಿಗಳಿಗೆ ತೊಂದರೆಯಾಗುವಂಥಹ ಬಂದ್‌ಗೆ ನಮ್ಮ ಬೆಂಬಲವಿಲ್ಲ ಎಂದು ಕರ್ನಾಟಕ ಸಂಘಟನೆಗಳ ಸಮಿತಿ ಕೆಲವರು ಹೇಳಿದ್ದಾರೆ.
ಬಂದ್ ಆಗುತ್ತದೆ ಎಂದು ಯಾವುಧೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.