ಸಾರಾಂಶ
ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಮಧುರೆ ಹೋಬಳಿ ಕನಸವಾಡಿ (ಚಿಕ್ಕಮಧುರೆ) ಕ್ಷೇತ್ರದಲ್ಲಿರುವ ಪ್ರಸಿದ್ದ ಶ್ರೀ ಶನಿಮಹಾತ್ಮ ಸ್ವಾಮಿಯ 69ನೇ ವರ್ಷದ ಬ್ರಹ್ಮ ರಥೋತ್ಸವ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.
ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಮಧುರೆ ಹೋಬಳಿ ಕನಸವಾಡಿ (ಚಿಕ್ಕಮಧುರೆ) ಕ್ಷೇತ್ರದಲ್ಲಿರುವ ಪ್ರಸಿದ್ದ ಶ್ರೀ ಶನಿಮಹಾತ್ಮ ಸ್ವಾಮಿಯ 69ನೇ ವರ್ಷದ ಬ್ರಹ್ಮ ರಥೋತ್ಸವ ಮಂಗಳವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು.
ದೊಡ್ಡಬಳ್ಳಾಪುರ, ಬೆಂಗಳೂರು, ನೆಲಮಂಗಲ ಸೇರಿದಂತೆ ರಾಜ್ಯ ವಿವಿದೆಡೆಗಳಿಂದ ಸಹಸ್ರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿ ಹಣ್ಣು, ದವನ ಸಮರ್ಪಿಸಿ ಧನ್ಯತೆ ಮೆರೆದರು. ರಥೋತ್ಸವದ ಅಂಗವಾಗಿ ಶ್ರೀಸ್ವಾಮಿಯ ಮೂಲವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯ ಆವರಣದಲ್ಲಿ ಮಾಡಲಾಗಿದ್ದ ಹೂವಿನ ಅಲಂಕಾರ ಗಮನ ಸೆಳೆಯಿತು.ರಥೋತ್ಸವದಲ್ಲಿ ವೀರಗಾಸೆ, ಚಂಡ ವಾದ್ಯ, ಗಾರುಡಿ ಬೊಂಬೆ, ಸೋಮನ ಕುಣಿತ, ಕೇರಳದ ಕಲಾವಿದರ ದೇವತಾ ಮೂರ್ತಿಗಳ ಪ್ರದರ್ಶನಗಳ ತಂಡಗಳೊಡನೆ ತಮಟೆ ವಾದನೆ, ಮಂಗಳವಾದ್ಯ ಜಾನಪದ ಕಲಾತಂಡಗಳು ಭಾಗವಹಿಸಿದ್ದವು.
ಬ್ರಹ್ಮ ರಥೋತ್ಸವದ ಅಂಗವಾಗಿ, ಶ್ರೀ ಶನಿಮಹಾತ್ಮ ಸ್ವಾಮಿ, ಮಹಾಗಣಪತಿ, ನವಗ್ರಹ, ಶ್ರೀಶನೇಶ್ವರ ಹೋಮ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಗಮಿಸಿದ್ದ ಭಕ್ತಾದಿಗಳಿಗೆ ದೇವಾಲಯದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು ರಥೋತ್ಸವಕ್ಕೂ ಮುನ್ನ ಶನಿಮಹಾತ್ಮಸ್ವಾಮಿ ಮೆರವಣಿಗೆ ದೇವರನ್ನು ಪಾನಕ ಹಂಚಿಕೆ ಸ್ಥಳಕ್ಕೆ ಮರವಣಿಗೆ ಸಾಗಿ ಪೂಜೆ ಸಲ್ಲಿಸಲಾಯಿತು.ನಾಟಕೋತ್ಸವ ಸಂಭ್ರಮ:
ಬ್ರಹ್ಮರಥೋತ್ಸವದ ಅಂಗವಾಗಿ ಮಾರ್ಚ್ 25ರವರೆಗೆ ಪ್ರತಿನಿತ್ಯ ಸಂಜೆ ಸ್ವಾಮಿಯ ಉತ್ಸವಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.20ರಂದು ಸೊಣ್ಣಪ್ಪನ ಹಳ್ಳಿ ಆಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಲಿಯಿಂದ ಶನಿಪ್ರಭಾವ, ಮಾ 21ರಂದು ಹೊನ್ನದೇವಿಪುರ ಶನೇಶ್ವರ ನಾಟಕ ಮಂಡಲಿಯಿಂದ ರಾಜಾ ಸತ್ಯವ್ರತ, ಮಾ. 22ರಂದು ಕನಸವಾಡಿ ಸ್ನೇಹ ಸಂಗಮ ಕಲಾವಿದರ ಸಂಘದಿಂದ ಕುರುಕ್ಷೇತ್ರ, ಮಾ. 23ರಂದು ತಾರಾಪುರ ಕೃಪಾಪೋಷಿತ ನಾಟಕ ಮಂಡಲಿಯಿಂದ ಶನಿಪ್ರಭಾವ, ಮಾ.24ರಂದು ಶ್ರೀ ಗಜೇಂದ್ರ ಕೃಪಾಪೋಷಿತ ನಾಟಕ ಮಂಡಲಿಯಿಂದ ಕುರುಕ್ಷೇತ್ರ ಪೌರಾಣಿಕ ನಾಟಕ ಪ್ರದರ್ಶನಗಳು ನಡೆಯಲಿವೆ.19ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಸುಪ್ರಸಿದ್ದ ಶ್ರೀ ಚಿಕ್ಕಮಧುರೆ ಶನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಂಭ್ರಮದಿಂದ ನಡೆಯಿತು. ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.