ಸಾರಾಂಶ
ಆರ್.ತಾರಾನಾಥ್
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಇದೇನು ಕೇಳಲು ಹೊಸತು ಎನಿಸುತ್ತಿದೆ. ಇದು, ಸರ್ಕಾರ ಘೋಷಿತ ಕಾರ್ಯಕ್ರಮವಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆ.
2019ರಲ್ಲಿ ಕೋವಿಡ್ ಇಡೀ ಜಗತ್ತನ್ನು ತಲ್ಲಣ ಮಾಡಿತ್ತು. ಈ ಹೆಸರು ಕೇಳಿದರೆ ಇನ್ನೂ ಭಯಪಡುವ ಲಕ್ಷಾಂತರ ಮಂದಿ ನಮ್ಮ ನಡುವೆ ಇದ್ದಾರೆ. ಹಲವು ಕುಟುಂಬಸ್ಥರು ತಮ್ಮವರನ್ನು ಕಳೆದುಕೊಂಡು ದುಃಖದಲ್ಲಿದ್ದಾರೆ. ಇದೇ ವೇಳೆ ಮಧ್ಯಮ, ಬಡ ಕುಟುಂಬಗಳು ನಾನಾ ಕಾರಣಗಳಿಂದ ಬೀದಿಗೆ ಬಿದ್ದಿದ್ದೂ ಇದೆ.ಖಾಸಗಿ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಲು ಆಗದೆ ಮತ್ತು ಮನೆಯಲ್ಲಿದ್ದೇ ಸುಖಾಸುಮ್ಮನೆ ಖಾಸಗಿ ಶಾಲೆಯವರಿಗೆ ಲಕ್ಷಾಂತರ ಶುಲ್ಕ ಕಟ್ಟಬೇಕಲ್ಲ ಎಂಬ ಆರ್ಥಿಕ ಆರೋಚನೆಯಿಂದ ಹಲವು ಮಕ್ಕಳು ಶಾಲೆಗಳಿಂದ ಹೊರಗೆ ಉಳಿದಿದ್ದೂ ಉಂಟು. ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಮತ್ತು ಆರ್ಥಿಕ ಸೇರಿದಂತೆ ಹಲವು ಕಾರಣಗಳಿಂದಾಗಿ ಕೆಲವು ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಇದು, 3-4 ವರ್ಷಗಳ ಕಾಲ ಯಥಾಸ್ಥಿತಿಯಲ್ಲಿ ಮುಂದುವರಿದಿತ್ತು.
ಕೋವಿಡ್ ಸಂದರ್ಭದಲ್ಲಿ ಹಲವು ಉದ್ಯಮಗಳು ಬಂದ್ ಆಗಿದ್ದವು. ಕೆಲಸ ಕಳೆದುಕೊಂಡಿದ್ದ ಜನರು ಹುಟ್ಟೂರಿಗೆ ವಾಪಸ್ ಬಂದಿದ್ದರು. ಆ ವರ್ಷದಲ್ಲಿ ಅಂದರೆ, 2019-20ನೇ ಸಾಲಿನಲ್ಲಿ ಜಿಲ್ಲೆಯ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿದ್ದ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ 65,379.ಈಗ ಕೋವಿಡ್ ಕಳೆದು ಉದ್ಯಮಗಳು ಮತ್ತೆ ಚೇತರಿಸಿಕೊಂಡಿದ್ದು, ಹಲವು ಮಂದಿ ಉದ್ಯೋಗ ಅರಸಿ ಮಹಾನಗರಗಳಿಗೆ ವಾಪಸಾಗುತ್ತಿದ್ದಾರೆ. ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿದ್ದಾರೆ. ಹಾಗಾಗಿ ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆ ಇಳಿಯಲಾರಂಭಿಸಿದ. ಅಂದರೆ, 2024-25ನೇ ಸಾಲಿನಲ್ಲಿ ಮಕ್ಕಳ ಸಂಖ್ಯೆ 61,504ಕ್ಕೆ ಇಳಿದಿದೆ. ಸುಮಾರು 3,875 ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗಿದ್ದಾರೆ. ಇದು ಹಲವರು ಮಹಾನಗರಗಳಿಗೆ ವಾಪಸಾಗಿದ್ದು ಮತ್ತು ಕೆಲವರು ಆರ್ಥಿಕ ಪರಿಸ್ಥಿತಿ ಸುಧಾರಣೆ ನಂತರ ಎಸ್ಸೆಸ್ಸೆಲ್ಸಿ ಸೇರಿದಂತೆ ಮಕ್ಕಳ ಮುಂದಿನ ಶೈಕ್ಷಣಿಕ ಉನ್ನತ ಗಮನದಲ್ಲಿಟ್ಟುಕೊಂಡು ಖಾಸಗಿ ಶಾಲೆಗಳಿಗೆ ಸೇರಿಸಿದ್ದರ ಪರಿಣಾಮ.
ಪ್ರಥಮ ಹಂತ:2019-20ನೇ ಸಾಲಿನಲ್ಲಿ ಒಂದನೇ ತರಗತಿಗೆ 6777 ವಿದ್ಯಾರ್ಥಿಗಳು ಅಡ್ಮಿಷನ್ ಆಗಿದ್ದರು. ಈ ವರ್ಷದಲ್ಲಿ 5846 ಮಕ್ಕಳು ಪ್ರವೇಶ ಪಡೆದಿದ್ದಾರೆ. ಅಂದರೆ, 931 ರಷ್ಟು ಮಕ್ಕಳು ಕಡಿಮೆಯಾಗಿದ್ದಾರೆ. ಇನ್ನುಳಿದ ತರಗತಿಗಳಲ್ಲೂ ಇದೆ ಪರಿಸ್ಥಿತಿ ಇದೆ. ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಅಂದಾಜು ಮಾಡಿದೆ.
ಮಕ್ಕಳ ಕೊರತೆಯಿಂದಾಗಿ ಕೆಲವು ಸರ್ಕಾರಿ ಶಾಲೆಗಳ ಕೊಠಡಿಗಳು ಹಾಳು ಬಿದ್ದಿವೆ. ದಿನೇ ದಿನೇ ಅವುಗಳ ಸ್ಥಿತಿ ರಿಪೇರಿ ಆಗದೆ ಇರುವ ಮಟ್ಟಕ್ಕೆ ತಲುಪಿದೆ. ಒಂದು ಕಾಲದಲ್ಲಿ ಸರ್ಕಾರಿ ಶಾಲೆಗಳು ಕಟ್ಟಡಗಳ ಕೊರತೆಯನ್ನು ಎದುರಿಸುತ್ತಿದ್ದವು. ಆದರೆ, ಇದೀಗ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಶಾಲೆ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿಲ್ಲ. ಹಲವು ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರು ಇರುವಂತೆ ಹೆಚ್ಚುವರಿ ಶಾಲಾ ಕೊಠಡಿಗಳು ಇವೆ.2019- 2024 (1-10ನೇ ತರಗತಿ ವಿದ್ಯಾರ್ಥಿಗಳ ಸಂಖ್ಯೆ)
ಬೀರೂರ= 8291- 7857ಚಿಕ್ಕಮಗಳೂರ= 1497- 13966
ಕಡೂರು= 10815- 9881ಕೊಪ್ಪ= 509- 4911
ಮೂಡಿಗೆರೆ= 7288- 7254ಎನ್.ಆರ್.ಪುರ= 4593- 4180
ಶೃಂಗೇರಿ= 2204- 2257ತರೀಕೆರೆ= 12122- 11198
ಒಟ್ಟು= 6537- 61504